ನಡೆದುಕೊಂಡು ಹೋಗುತ್ತಿರುವ ವೇಳೆ ಒಮ್ಮೆಲೆ ಧುತ್ತೆಂದು ನೀವು ಸಾಗುವ ದಾರಿಯಲ್ಲಿ ಹುಲಿ ಪ್ರತ್ಯಕ್ಷವಾದರೆ ಹೇಗಿರುತ್ತದೆ. ಒಂದು ಕ್ಷಣ ಜೀವ ಬಾಯಿಗೆ ಬಂದಂತಾಗುವುದು ಗ್ಯಾರಂಟಿ. ಇಂತಹದ್ದೇ ಭಯಾನಕ ಅನುಭವವೊಂದು ವ್ಯಕ್ತಿಯೊಬ್ಬರಿಗೆ ಆಗಿದ್ದು, ಆ ದೃಶ್ಯ ಈಗ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ನಡೆದುಕೊಂಡು ಹೋಗುತ್ತಿರುವ ವೇಳೆ ಒಮ್ಮೆಲೆ ಧುತ್ತೆಂದು ನೀವು ಸಾಗುವ ದಾರಿಯಲ್ಲಿ ಹುಲಿ ಪ್ರತ್ಯಕ್ಷವಾದರೆ ಹೇಗಿರುತ್ತದೆ. ಒಂದು ಕ್ಷಣ ಜೀವ ಬಾಯಿಗೆ ಬಂದಂತಾಗುವುದು ಗ್ಯಾರಂಟಿ. ಇಂತಹದ್ದೇ ಭಯಾನಕ ಅನುಭವವೊಂದು ವ್ಯಕ್ತಿಯೊಬ್ಬರಿಗೆ ಆಗಿದ್ದು, ಆ ದೃಶ್ಯ ಈಗ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಾಖಂಡ್‌ನ ಜಿಮ್ ಕೊರ್ಬೆಟ್‌ ರಾಷ್ಟ್ರೀಯ ಉದ್ಯಾನದ ( Jim Corbett National Park) ಸಮೀಪ ಸೆರೆ ಆದ ಅಪರೂಪದ ದೃಶ್ಯ ಇದಾಗಿದೆ. 

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವಿನ್‌ ಕಸ್ವಾನ್ ಅವರು ಈ ಆಘಾತಕಾರಿ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹುಲಿ ಜಾಸ್ತಿ ಈತನ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಈತ ಜೀವಂತವಾಗಿರುವ ಅದೃಷ್ಟವಂತ ವ್ಯಕ್ತಿ ಅಲ್ವಾ? ಕೊರ್ಬೆಟ್ ಉದ್ಯಾನದಿಂದ ಎಂದು ಬರೆದು ಈ ಅಪರೂಪದ ವೀಡಿಯೋವನ್ನುಅವರು ಪೋಸ್ಟ್ ಮಾಡಿದ್ದಾರೆ. 

ಚಾಮರಾಜನಗರ: ಬೀಳುಬಿದ್ದ ಜಮೀನಿನಲ್ಲಿ ಹುಲಿ ಹಾಗೂ ಹುಲಿ ಮರಿ ಕಳೇಬರ ಪತ್ತೆ

ವೀಡಿಯೋದಲ್ಲಿ ಜಿಮ್ ಕೊರ್ಬೆಟ್‌ ರಾಷ್ಟ್ರೀಯ ಉದ್ಯಾನದ ಸಮೀಪದ ಡಾಂಬರು ರಸ್ತೆಯಲ್ಲಿ ವ್ಯಕ್ತಿಯೋರ್ವ ಕೈನಲ್ಲಿ ಬ್ಯಾಗ್‌ ಹಿಡಿದು ನಡೆದುಕೊಂಡು ಹೋಗುತ್ತಿದ್ದು, ಅತ್ತ ಇನ್ನೇನು ಮುಂದೆ ಸಾಗಬೇಕು ಅನ್ನುವಷ್ಟರಲ್ಲಿ ಆತನ ಎಡಬದಿಯ ಪೊದೆಯೊಂದರಿಂದ ಹುಲಿಯೊಂದು ಚಂಗನೇ ರಸ್ತೆಗೆ ಹಾರಿ ರಸ್ತೆಯನ್ನು ಹಾದು ರಸ್ತೆಯ ಮತ್ತೊಂದು ಬದಿಗೆ ಸಾಗಿ ಹೋಗಿದೆ. ಹುಲಿಯೇನೋ ತನ್ನ ಪಾಡಿಗೆ ತಾನು ರಸ್ತೆ ದಾಟಿ ಹೋಗಿದೆಯಾದರೂ, ಅದೇ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ಮಾತ್ರ ಈ ಘಟನೆಯಿಂದ ಕೆಲ ನಿಮಿಷ ಶಾಕ್‌ಗೆ ಒಳಗಾಗಿದ್ದರು. ಹುಲಿ ರಸ್ತೆಗೆ ನೆಗೆದ ಕೂಡಲೇ ಅವರು ತಿರುಗಿ ಓಡಲು ಯತ್ನಿಸುವುದನ್ನು ನೋಡಬಹುದು. ಆದರೆ ಹುಲಿ ತನ್ನ ಪಾಡಿಗೆ ತಾನು ಸಾಗಿ ಹೋಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಇತ್ತ ಈ ವ್ಯಕ್ತಿಯೂ ಬದುಕಿದೆಯಾ ಬಡ ಜೀವ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಅಲ್ಲದೇ ಆ ವ್ಯಕ್ತಿ ಮುಂದೆ ಸಾಗುವುದಕ್ಕೆ ಹಿಂದೇಟು ಹಾಕಿ ಅಲ್ಲೇ ನಿಂತಿದ್ದಾರೆ. ಅಲ್ಲದೇ ಪಕ್ಕದಲೇ ಇದ್ದ ಇಬ್ಬರಿಗೆ ಹುಲಿ ಆ ಕಡೆ ಹೋದ ವಿಚಾರವನ್ನು ಹೇಳುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ವೀಡಿಯೋ ಒಂದು ಕ್ಷಣ ಮೈ ಜುಮ್ಮೆನಿಸುವಂತೆ ಮಾಡುತ್ತಿದೆ. ವೀಡಿಯೋ ನೋಡಿದ ಹಲವರು ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಮೈಸೂರು: ನರಭಕ್ಷಕ ಹುಲಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಜನತೆ..!

ಇಲ್ಲಿ ಮನುಷ್ಯ ಹುಲಿಗೆ ಹೆದರಿದ್ದಕ್ಕಿಂತ ಹುಲಿ ಮನುಷ್ಯನಿಗೆ ಹೆದರಿದಂತೆ ಕಾಣುತ್ತಿದೆ, ಇದರಲ್ಲೇ ಯಾರು ಅಪಾಯಕಾರಿ ಎಂಬುದು ತಿಳಿಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಆತನ ಮೇಲೆ ದೇವಿ ಕೃಪೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಾರ್ನಿಂಗ್ ವಾಕ್ ಬಂದ ಹುಲಿ ಒಮ್ಮೆಲೆ ಕ್ಯಾಲೋರಿ ಬರ್ನ್ ಮಾಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Scroll to load tweet…