Asianet Suvarna News Asianet Suvarna News

ಹೇಗಿತ್ತು ಸಿದ್ದು-ಡಿಕೆ ಜೋಡಿಯ ಜಬರ್ದಸ್ತ್ ಜೊತೆಯಾಟ..? ಜಿದ್ದಿಗೆ ಬಿದ್ದಿದ್ದವರು ಒಂದಾಗಿ ಕಟ್ಟಿದ್ದು ಹೇಗೆ ಕಾಂಗ್ರೆಸ್ ಕೋಟೆ..?

ಸಿಎಂ ಸಿದ್ದು.. ಡಿಸಿಎಂ ಡಿಕೆಶಿ ಸ್ನೇಹದ ಹಿಂದಿದೆ ರೋಚಕ ಕೆಮಿಸ್ಟ್ರಿ..!
ಆ ಕೆಮಿಸ್ಟ್ರಿಯಲ್ಲೇ ಅಡಗಿದೆ ಜೋಡೆತ್ತು ಸರ್ಕಾರದ ಯಶಸ್ಸಿನ ಮಿಸ್ಟ್ರಿ..!
ವರ್ಷದ ಹಿಂದೆ ಸಿಎಂ ಪಟ್ಟಕ್ಕಾಗಿ ಜಿದ್ದಿಗೆ ಬಿದ್ದಿದ್ದರು ಸಿದ್ದು.. ಡಿಕೆ..!
ಹೈಕಮಾಂಡ್ ಹೇಳಿದ್ದು ಒಂದೇ ಮಾತು.. ತಲೆ ಬಾಗಿದ್ದರು ಬಂಡೆ..!

365 ನಾಟೌಟ್.. ಕರ್ನಾಟಕ(Karnataka) ಪಾಲಿಟಿಕ್ಸ್ ಅನ್ನೋ ಪಿಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್( DK Shivakumar) ಜೋಡಿಯ ಜಬರ್ದಸ್ತ್ ಜೊತೆಯಾಟದ ಕಥೆ. ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿ ಡೆಡ್ಲಿ ಕಾಂಬಿನೇಷನ್‌ನ ಡೆಡ್ಲಿ ಸ್ಟೋರಿ. ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ಸಂಭ್ರಮ. ಆ ಸಂಭ್ರಮವನ್ನು ತಂದ ಭಲೇ ಜೋಡಿ ಇವರೇ ನೋಡಿ.. ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.. ಈ ಎರಡು ಹೆಸರುಗಳನ್ನು ಕೇಳಿದ್ರೆ ಸಾಕು, ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಮೈಯಲ್ಲಿ ರೋಮಾಂಚನವಾಗತ್ತೆ. ಎರಡು ಹೆಸರುಗಳಿಗಿರೋ ಶಕ್ತಿಗೆ ವಿರೋಧಿಗಳ ಎದೆ ನಡುಗತ್ತೆ. ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಸರ್ಕಾರಕ್ಕೆ ಸೋಮವಾರ ಭರ್ತಿ ಒಂದು ವರ್ಷ. 2023ರ ಇದೇ ದಿನ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜನ ಕಿಕ್ಕಿರಿದು ಸೇರಿದ್ರು. ದೊಡ್ಡ ಜನಸ್ತೋಮದ ಮುಂದೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವತ್ತು ಪ್ರಮಾಣವಚನ ಸ್ವೀಕಸಿದ್ದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜೋಡಿಯ ಜೊತೆಯಾಟ ಶುರುವಾಗಿ ಒಂದು ವರ್ಷ ತಂಬಿದೆ.  

ಇದನ್ನೂ ವೀಕ್ಷಿಸಿ:  ಮತ್ತೊಂದು ಯುದ್ಧಕ್ಕೆ ಮುನ್ನುಡಿ ಬರೆಯುತ್ತಾ ದುರಂತ..? ಭಾರತದ ಮೇಲೆ ಪರಿಣಾಮ ಬೀರುತ್ತಾ ರೈಸಿ ಸಾವು.?

Video Top Stories