Asianet Suvarna News Asianet Suvarna News

ಮೈಸೂರು: ನರಭಕ್ಷಕ ಹುಲಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಜನತೆ..!

ಅರಣ್ಯ ಇಲಾಖೆಗೆ ಚೆಳ್ಳೆ ಹಣ್ಣು ತಿನ್ನಿ ತಿಂಗಳಿಂದ ಕಣ್ಣಾಮುಚ್ಚಾಲೆ ಆಟವಾಡ್ತಿದ್ದ ಹುಲಿ ಕೊನಗೂ ಬಲೆಗೆ ಬಿದ್ದಿದೆ. ನಂಜನಗೂಡು ತಾಲೂಕಿನ ಬಂಡಿಪುರ ಕಾಡಂಚಿನ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸಿದ್ದ ಹುಲಿಯನ್ನ ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. 

Tiger Catch the Cage in Mysuru grg
Author
First Published Nov 28, 2023, 9:14 PM IST

ವರದಿ: ಮಧು.ಎಂ.ಚಿನಕುರಳಿ

ಮೈಸೂರು(ನ.28): ಬಂಡೀಪುರ ಕಾಡಂಚಿನ ಭಾಗದ ಜನರ ನೆಮ್ಮದಿ ಕಸಿದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಎರಡು ಬಾರಿ ಮನುಷ್ಯರ ಮೇಲೆ ದಾಳಿ ಮಾಡಿ ರೈತ ಮಹಿಳೆಯನ್ನ ಕೊಂದಿದ್ದ ಹುಲಿ ಅರಣ್ಯ ಇಲಾಖೆ ಬೀಸಿದ ಬಲೆಯಲ್ಲಿ ಲಾಕ್ ಆಗಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಅರಣ್ಯ ಇಲಾಖೆಗೆ ಚೆಳ್ಳೆ ಹಣ್ಣು ತಿನ್ನಿ ತಿಂಗಳಿಂದ ಕಣ್ಣಾಮುಚ್ಚಾಲೆ ಆಟವಾಡ್ತಿದ್ದ ಹುಲಿ ಕೊನಗೂ ಬಲೆಗೆ ಬಿದ್ದಿದೆ. ನಂಜನಗೂಡು ತಾಲೂಕಿನ ಬಂಡಿಪುರ ಕಾಡಂಚಿನ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸಿದ್ದ ಹುಲಿಯನ್ನ ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸುಮಾರು ಹತ್ತು ವರ್ಷದ ಗಂಡು ಹುಲಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಬಂಧಿಯಾಗಿದೆ. ಸೆರೆ ಹಿಡಿಯಲಾಗಿರೋ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಯಲ್ಲಿರೋ ಪ್ರಾಣಿ ಸಾಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು ಸೆರೆಯಾಗಿರೋ ಹುಲಿ ಆರೋಗ್ಯವಾಗಿದೆ ಅಂತಾ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ!

ಸೆರೆಯಾಗಿರೋ ಹುಲಿ ಕಳೆದ ಎರಡು ದಿನಗಳ ಹಿಂದಷ್ಟೇ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರೈತ ಮಹಿಳೆ ಸುಮಾರು 55 ವರ್ಷದ ರತ್ನಮ್ಮ ನನ್ನ ಬಲಿ ಪಡೆದುಕೊಂಡಿತ್ತು ಎಂದು ಶಂಕೆ ವ್ಯಕ್ತಪಡಿಸಿದೆ. ನ.26 ರಂದು ಈ ರತ್ನಮ್ಮ ಕಾಡಂಚಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಮೇಲೆಗರಿದ ಹುಲಿ ಕಾಡಿಗೆ ಮೃತದೇಹವನ್ನ ಎಳೆದೋಯ್ದಿತ್ತು. ಇದಕ್ಕೂ ಮುನ್ನ ಕಳೆದ ಒಂದು ತಿಂಗಳ ಹಿಂದೆ ಇದೇ ವ್ಯಾಪ್ತಿಯ ಮಹದೇವ ನಗರದ ಹೊರವಲಯದಲ್ಲಿ ದನಗಾಯಿ ವೀರಭದ್ರ ಬೋವಿ ಮೇಲೆ ದಾಳಿ ಮಾಡಿತ್ತು. ಘಟನೆಯಲ್ಲಿ ವೀರಭದ್ರ ಬೋವಿ ಗಾಯಗೊಂಡಿದ್ದರು. ಹುಲಿ ದಾಳಿ ಹೆಚ್ಚಾದಂತೆ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿ ಬಂದ ಹಿನ್ನಲೆ ತಿಂಗಳ ಹಿಂದೆ ಕಾರ್ಯಚರಣೆ ಮಾಡಲಾಗಿತ್ತಾದರೂ ಹುಲಿ ಸೆರೆಯಾಗಿರಲಿಲ್ಲ. ರತ್ನಮ್ಮ ಪ್ರಕರಣದಲ್ಲಿ ಅಲಾರ್ಟ್ ಆಗಿದ್ದ ಅರಣ್ಯ ಇಲಾಖೆ ನಿನ್ನೆ ಹೆಡಿಯಾಲ ಬಾರ್ಡರ್ ವ್ಯಾಪ್ತಿಯ ಕಲ್ಲಾರೆಕಂಡಿ ಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮರಾ ದಲ್ಲಿ ಹುಲಿ ಪೋಟೋ ಸೆರೆಯಾಗಿದ್ದು, ದನದ ಮಾಂಸ ತಿಂದು ಹೋಗಿತ್ತು. ಬಳಿಕ ಅದೇ ಜಾಗದಲ್ಲಿ ಮರೆ ಮಾಚಿದ್ದ ಬೋನ್ ನಲ್ಲಿ ಪಶುವೈದ್ಯರು ಅರಣ್ಯ ಸಿಬ್ಬಂದಿ ಕಾವಲಿದ್ದರು. ಇಂದು ಮುಂಜಾನೆ ಅದೇ ಜಾಗಕ್ಕೆ ಹುಲಿ ಬಂದಿದ್ದನ್ನ ಗಮನಿಸಿ ಅರವಳಿಕೆ ಚುಚ್ಚು ಮದ್ದು ಹುಲಿ ನೀಡಿ ಹುಲಿಯನ್ನ ಸರೆ ಹಿಡಿಯಲಾಗಿದೆ.

ಒಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ಹುಲಿ ನರಭಕ್ಷಕ ಹುಲಿ ಸೆರೆಯಾಗಿದೆ. ಆದ್ರೆ ಸೆರೆಯಾಗಿರೋದು ಮನುಷ್ಯರ ಮೇಲೆ ದಾಳಿ ಮಾಡಿದ್ದ ಅಥವಾ ಸೆರೆ ಹಿಡಿದಿರೋ ಹುಲಿ ಬೇರೇನಾ ಅನ್ನೋದನ್ನ ಅರಣ್ಯ ಇಲಾಖೆಯೇ ಕನ್ಫರ್ಮ್ ಮಾಡಬೇಕಿದೆ.

Latest Videos
Follow Us:
Download App:
  • android
  • ios