Asianet Suvarna News Asianet Suvarna News

ಮತ್ತೊಂದು ಯುದ್ಧಕ್ಕೆ ಮುನ್ನುಡಿ ಬರೆಯುತ್ತಾ ದುರಂತ..? ಭಾರತದ ಮೇಲೆ ಪರಿಣಾಮ ಬೀರುತ್ತಾ ರೈಸಿ ಸಾವು.?

ಟೇಕ್ ಆಫ್ ಆದ ಅರ್ಧಗಂಟೆಗೇ ನಾಪತ್ತೆ..ಸಿಕ್ಕಿದ್ದು ಶವ
ಆ ಭಯಾನಕ ದುರಂತ ಹೇಗಾಯ್ತು..? ಏನಾಯ್ತು..?
ಈಗ ನೆನಪಾಗ್ತಾ ಇರೋದ್ಯಾಕೆ ಕೋಡಿಮಠದ ಭವಿಷ್ಯ..?

ದಟ್ಟ ಕಾನನದ ಬೆಟ್ಟಗಳ ಮಧ್ಯೆ ಉರುಳಿಬಿತ್ತು ಹೆಲಿಕಾಪ್ಟರ್. ಅದರಲ್ಲಿದ್ದ ಇರಾನ್ ಅಧ್ಯಕ್ಷ(Ebrahim raisi) ಸಜೀವ ದಹನವಾದ್ರು. ಟೇಕ್ ಆಫ್ ಆದ ಅರ್ಧಗಂಟೆಗೇ ನಾಪತ್ತೆಯಾದವರು ಸಿಕ್ಕಿದ್ದು, ಶವವಾಗಿ. ಇರಾನಿನ(Iran) ವಾಯುವ್ಯ ಭಾಗದಲ್ಲಿರೋ, ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಜೋಲ್ಫಾ ಅನ್ನೋ ಊರಿನ ಹತ್ರ, ಹೀಗಿತ್ತು ವಾತಾವರಣ. ಸಂಜೆ ಕಳೆಯೋ ಹೊತ್ತಿಗೆ, ಇರಾನಿನ ನೂರಾರು ಮಂದಿ ರಕ್ಷಣಾ ಪಡೆಯ ಸಿಬ್ಬಂದಿಗಳು ಬಂದಿದ್ರು. ಏನನ್ನೋ ಹುಡುಕಾಡ್ತಿದ್ರು. ಅವರ ಸಹಾಯಕ್ಕೆ ರಷ್ಯಾ ಕೂಡ ಮುಂದಾಗಿತ್ತು. ಅವರು ಹುಡುಕ್ತಾ ಇದ್ದದ್ದು, ಇರಾನಿನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಫ್ಟರ್(Helicopter). ಆದ್ರೆ ಅವರಿಗೆ ಸಿಕ್ಕಿದ್ದು, ಅಧ್ಯಕ್ಷನ ಮೃತದೇಹ. ರೈಸಿ ಅವರ ಮರಣ ಇರಾನ್ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಬರೀ ಇರಾನಿಗಷ್ಟೇ ಅಲ್ಲ, ಮಧ್ಯಪ್ರಾಚ್ಯ ರಾಷ್ಟ್ರಗಳೇ ಈ ಸಾವಿನ ಕಂಗೆಟ್ಟು ಕೂತಿದ್ದಾವೆ. ಅವಶ್ಯಕ ಸಮಯದಲ್ಲೇ ನಾಯನೊಬ್ಬನನ್ನು ಕಳ್ಕೊಂಡ ಆತಂಕ ಅವರನ್ನ ಕಾಡ್ತಾ ಇದೆ. ರೈಸಿ ಅವರ ಮರಣಾಘಾತಕ್ಕೆ ತುತ್ತಾದ ಇರಾನ್ ಕಂಬನಿ ಹಾಕ್ತಾ ಇದ್ರೆ, ಇನ್ನೊಂದು ಕಡೆ, ಸೋಷಿಯಲ್ ಮೀಡಿಯಾ, ಟ್ವಿಟರ್‌ನಲ್ಲಿ ಇಸ್ರೇಲ್ ಹಾಗೂ ಮೊಸಾದ್ ಟ್ರೆಂಡ್ ಆಗ್ತಾ ಇತ್ತು.. ಅದಕ್ಕೆ ಕಾರಣ ಏನು ಅಂತ ನೋಡಿದ್ರೆ, ಹಲವಾರು ಮಂದಿ, ರೈಸಿ ಅವರದ್ದು ಆಕಸ್ಮಿಕ ಮರಣ ಅಲ್ಲ, ಇಸ್ರೇಲ್ ಮಾಡಿರೋ ಕಗ್ಗೊಲೆ ಅಂತ ಹೇಳ್ತಿದ್ರು.

ಇದನ್ನೂ ವೀಕ್ಷಿಸಿ:  Crime News: ಎರಡು ಗ್ಯಾಂಗ್‌ಗಳ ನಡುವೆ ಡೆಡ್ಲಿ ವಾರ್..!ಮೂವರು ಮಟಾಷ್, ಒಬ್ಬನಿಗೆ ಗುಂಡೇಟು..!