Asianet Suvarna News Asianet Suvarna News

ಮೈಸೂರಲ್ಲಿ ಸಿನಿಮಾ ನಟಿ ಹತ್ಯೆ; ಶಿವರಾಜ್ ಕುಮಾರ್ ಜೊತೆಗೆ ವೇದ, ಭಜರಂಗಿಯಲ್ಲಿ ನಟನೆ

ಮೈಸೂರಿನಲ್ಲಿ ಸಿನಿಮಾ ನಟಿ ವಿದ್ಯಾಳನ್ನು ಆಕೆಯ ಗಂಡನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಮೈಸೂರು (ಮೇ 21): ಮೈಸೂರಿನಲ್ಲಿ ಸಿನಿಮಾ ನಟಿ ವಿದ್ಯಾಳನ್ನು ಆಕೆಯ ಗಂಡನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ, ವೇದ, ನಟ ಶರಣ್ ನಟನೆಯ ಜೈ ಮಾರುತಿ 800 ಹಾಗೂ ಅಜಿತ್ ಸೇರಿ ಮುಂದಾದ ಪೋಷಕರ ಪಾತ್ರಗಳಲ್ಲಿ ನಟಿಸಿದ್ದ ನಟಿಯ ಹತ್ಯೆಗೀಡಾಗಿದ್ದಾಳೆ. 

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ತುರಗನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ನಟಿ ವಿದ್ಯಾಳನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆಯ ಪತಿ ನಂದೀಶ್‌ನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಘಟನೆಯು ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.