'ನಾನು ರಾಜೀನಾಮೆ ಕೊಡಬೇಕೆಂಬುದು ಪಾಪ ಅವನ ಆಸೆ': ಎಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ಕಿಡಿ
ನಾನು ರಾಜೀನಾಮೆ ಕೊಡಬೇಕು ಅಂತ ಆಸೆ ಪಡುವವರನ್ನ ತಪ್ಪು ಅಂತ ಹೇಳೋಕೆ ಆಗುತ್ತಾ? ನಾನು ರಾಜೀನಾಮೆ ಕೊಡಬೇಕು ಎಂಬುದು ಪಾಪ ಅವನ ಆಸೆ ಅದು ಎಂದು ಏಕವಚನದಲ್ಲೇ ಟಾಂಗ್ ನೀಡಿದರು.
ಬೆಂಗಳೂರು (ಮೇ.21): ಪಾಪ ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಿನಿ ಅಂದುಕೊಂಡಿದ್ರು. ಆದರೆ ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನಮಗೆ 136 ಬಂದಿದೆ. ಆದರೆ ಅವ್ರು ಅಧ್ಯಕ್ಷತೆಯಲ್ಲಿ 19 ಸೀಟು ಅಷ್ಟೇ ಬಂದಿವೆ. ಪಾಪ ಈಗ ಕೈ ಹೊಸಕಿಕೊಳ್ತಿದ್ದಾರೆ. (ಸ್ವತಃ ತಮ್ಮ ಕೈ ಸನ್ನೆ ಮೂಲಕ ವ್ಯಂಗ್ಯ ಮಾಡಿದರು.) ಕಿಂಗ್ ಮೇಕರ್ ಆಗಬೇಕೆಂಬುದು ಅವನ ಆಸೆ ಅದು, ಈಡೇರಿಲ್ಲ ಅಂತ ಅವನಿಗೆ ಅಸೂಯೆ, ಜಲಸಿಗೂ ಮದ್ದಿಲ್ಲ, ಅಸೂಯೆಗೆ ಮದ್ದು ಇದೆಯಾ? ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಪೂರೈಕೆ ಹಿನ್ನೆಲೆ ಕೆಪಿಸಿಸಿ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಕೆ ಶಿವಕುಮಾರ, ಅಸೂಯೆ ಪಡೋರಿಗೆ ನಾನೇನು ಮಾಡಲಿಕ್ಕಾಗುತ್ತೆ? ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಏನು ಬೇಕಾದ್ರೂ ಮಾತಾಡ್ತಾರೆ, ಮಾತಾಡಲಿ, ರಾಜೀನಾಮೆ ಬೇಕಾದರೆ ತೆಗೆದುಕೊಳ್ಳಲಿ ಎಂದರು. ಇದೇ ವೇಳೆ ಡಿಕೆ ಶಿವಕುಮಾರ ರಾಜೀನಾಮೆ ಕೊಡಬೇಕು ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಡಬೇಕು ಅಂತ ಆಸೆ ಪಡುವವರನ್ನ ತಪ್ಪು ಅಂತ ಹೇಳೋಕೆ ಆಗುತ್ತಾ? ನಾನು ರಾಜೀನಾಮೆ ಕೊಡಬೇಕು ಎಂಬುದು ಪಾಪ ಅವನ ಆಸೆ ಅದು ಎಂದು ಏಕವಚನದಲ್ಲೇ ಟಾಂಗ್ ನೀಡಿದರು.
'ನಾಲ್ಕು ಓಟು ಹಾಕಿಸೋಕೆ ಆಗೊಲ್ಲ, ಬಂದು ಎಂಎಲ್ಸಿ ಸ್ಥಾನ ಕೇಳ್ತೀರಾ?' ಆಕಾಂಕ್ಷಿಗಳಿಗೆ ಡಿಕೆಶಿ ಎಚ್ಚರಿಕೆ