Asianet Suvarna News Asianet Suvarna News

Mamata Banerjee: ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ!

* ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಚ್ಚರಗೊಂಡ ರಾಜಕೀಯ ಪಕ್ಷಗಳು

* ಚುನಾವಣೆಗಾಗಿ ರಾಜಕೀಯ ನಾಯಕರ ಸಿದ್ಧತೆ

* ಕಾಂಗ್ರೆಸ್‌ ನಾಯಕರನ್ನು ಸೆಳೆಯುವಲ್ಲಿ ಟಿಎಂಸಿ ಯತ್ನ

* ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ

Mamta Banerjee had clashed with PM Vajpayee for Sonia Gandhi pod
Author
Bangalore, First Published Nov 25, 2021, 11:11 PM IST

ನವದೆಹಲಿ(ನ.25): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata banerjee) ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ದೀದಿ ಅವರು ಕಾಂಗ್ರೆಸ್ (Congress) ಮೇಲೆ ರಾಜಕೀಯ ವಾಗ್ದಾಳಿ ನಡೆಸುತ್ತಿದ್ದಾರೆ, ಸೋನಿಯಾರ ಅನೇಕ ವಿಶ್ವಾಸಿಗಳನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ನಾನು ಪ್ರತಿ ಬಾರಿ ದೆಹಲಿಗೆ ಬಂದಾಗ ಸೋನಿಯಾ ಗಾಂಧಿಯನ್ನು ಏಕೆ ಭೇಟಿಯಾಗಬೇಕು ಎಂದು ಅವರು ಬುಧವಾರ ಹೇಳಿದ್ದಾರೆ. ಅದಕ್ಕೂ ಒಂದು ದಿನ ಮೊದಲು ಅವರು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಮತ್ತು ಹರಿಯಾಣದ ರಾಹುಲ್ ಟೀಮ್ ಸದಸ್ಯ ಅಶೋಕ್ ತನ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬುಧವಾರ ಮೇಘಾಲಯದ (Meghalaya) ಮಾಜಿ ಸಿಎಂ ಸೇರಿದಂತೆ 17 ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ.

ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ (Mamata banerjee And Sonia Gandhi) ನಡುವಿನ ಮಧುರ ಸಂಬಂಧದ ಕಥೆಯು ರಾಜೀವ್ ಗಾಂಧಿ (Rajeev Gandhi) ಅವರು ಮಮತಾ ಅವರನ್ನು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದಾಗಿನಿಂದ ಪ್ರಾರಂಭವಾಗುತ್ತದೆ. ರಾಜೀವ್ ಅವರ ಸಾಮೀಪ್ಯದಿಂದಾಗಿ ಮಮತಾ ಸೋನಿಯಾ ಗಾಂಧಿಯವರಿಗೂ ಹತ್ತಿರವಾಗಿದ್ದರು. ಇಬ್ಬರ ನಡುವೆ ಭಾವಪೂರ್ಣ ಸಂಬಂಧವಿತ್ತು. 1999 ರಲ್ಲಿ, ಅವರು ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು NDA ಗೆ ಸೇರಿದಾಗ, ಇಬ್ಬರೂ ನಾಯಕರು ರಾಷ್ಟ್ರಪತಿ ಭವನದಲ್ಲಿ ಆಲಂಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದಿದ್ದವು. ನಂತರ ಮಮತಾ ಅವರನ್ನು ಅಭಿನಂದಿಸಿದ್ದ ಸೋನಿಯಾ ಗಾಂಧಿ ಮರಳಿ ಯಾವಾಗ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವಿರಿ ಎಂದು ಕೇಳಿದ್ದರು. ಆಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

Mamata In Delhi: ಪ್ರತಿ ಬಾರಿ ಸೋನಿಯಾ ಭೇಟಿಯಾಗೋ ಅಗತ್ಯವೇನಿದೆ? ದೀದೀ ಮಾತಿನ ಮರ್ಮವೇನು?

ಅದೇ ವರ್ಷದಲ್ಲಿ, ಅಟಲ್ ಬಿಹಾರಿ ವಾಜಪೇಯಿ (Vajpayee) ಅವರ ಸರ್ಕಾರವು ಕಾಂಗ್ರೆಸ್ ಮುಖ್ಯಸ್ಥರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಯತ್ನಿಸಿದಾಗ ಮತ್ತು ವಿದೇಶಿ ಮೂಲದ ಜನರು ಸಾಂವಿಧಾನಿಕ ಹುದ್ದೆಗಳಿಗೆ, ವಿಶೇಷವಾಗಿ ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ತಲುಪುವುದನ್ನು ತಡೆಯಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಪ್ರಯತ್ನಿಸಿದಾಗ, ಅದೇ ಸರ್ಕಾರದಲ್ಲಿ ರೈಲ್ವೆ ಸಚಿವೆ ಹಾಗೂ ಮೈತ್ರಿಕೂಟದ ಪಾಲುದಾರ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ಈ ಪ್ರಚಾರವನ್ನು ವಿರೊಧಿಸಿದ್ದರು. ಸೋನಿಯಾ ಗಾಂಧಿಯನ್ನು ಪ್ರತ್ಯೇಕಿಸುವ ಪ್ರಯತ್ನಗಳು ಆಡಳಿತಾರೂಢ ಸಮ್ಮಿಶ್ರಕ್ಕೆ ಭಾರೀ ಹೊಡೆತ ನೀಡಬಹುದು ಎಂದು ಮಮತಾ ಸ್ಪಷ್ಟವಾಗಿ ಹೇಳಿದ್ದರು.

1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರ ವಿದೇಶಿ ಮೂಲದ ವಿಷಯವನ್ನು ಬಿಜೆಪಿ ಗಂಭೀರವಾಗಿ ಬಿಂಬಿಸಿತ್ತು. ಆದ್ದರಿಂದ ಸರಕಾರ ರಚನೆಯಾದಾಗ ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಕಾನೂನೊಂದನ್ನು ಜಾರಿಗೆ ತರಬೇಕು ಎಂಬ ನೈತಿಕ ಒತ್ತಡ ಅದರ ಮೇಲೆ ಇತ್ತು. ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಬಿಜೆಪಿ ಮೇಲೆ ಒತ್ತಡ ಹೇರುತ್ತಿತ್ತು. ಇದೆಲ್ಲದರ ನಡುವೆ ಅಂದಿನ ಕಾನೂನು ಸಚಿವ ರಾಮ್ ಜೇಠ್ಮಲಾನಿ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಅವರಿಗೆ ಈ ವಿವಾದಾತ್ಮಕ ಮಸೂದೆಯ ಕರಡು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿತ್ತು.

Meghalaya Politics: ಕಾಂಗ್ರೆಸ್‌ಗೆ ಟಿಎಂಸಿ ಗುದ್ದು: ಪಿಕೆ ಆಟಕ್ಕೆ ಎಲ್ಲರೂ ಸೈಲೆಂಟ್!

ಆಗ ಈ ನಾಯಕರು ಮಸೂದೆಯನ್ನು ರೂಪಿಸಲು ಸ್ವಲ್ಪ ಸಮಯ ಹಿಡಿಯಬಹುದು ಎಂದು ಹೇಳಿದ್ದರು. ವಿಧೇಯಕದ ಸಿದ್ಧತೆಗಳ ನಡುವೆಯೇ ಮಮತಾ ಬ್ಯಾನರ್ಜಿ ಅವರು ಸಂಸತ್ ಭವನದಲ್ಲಿಯೇ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ತಮ್ಮ ವಿರೋಧವನ್ನು ಸೂಚಿಸಿದ್ದರು. ವಿದೇಶಿ ಮೂಲದ ಭಾರತೀಯರು (ಗಾಂಧಿ ಅವರಂತಹ) ರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಉನ್ನತ ಹುದ್ದೆಗಳಿಗೆ ಸ್ಪರ್ಧಿಸುವುದನ್ನು ತಡೆಯಲು ಯಾವುದೇ ಕಾನೂನು ತರುವ ಮೊದಲು ಸರ್ಕಾರವು ಸಾಧಕ-ಬಾಧಕಗಳನ್ನು ನಿರ್ಣಯಿಸಬೇಕು ಎಂದು ಮಮತಾ ನೇರವಾಗಿ ಹೇಳಿದರು. ಈ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವುದಾಗಿ ಪ್ರಧಾನಿ ವಾಜಪೇಯಿ ಭರವಸೆ ನೀಡಿದ್ದರು.

ಇದಾದ ಬಳಿಕ ಹಲವು ಕಾಂಗ್ರೆಸ್ ಸಂಸದರು ಈ ಪ್ರಸ್ತಾವಿತ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ತೃಣಮೂಲ ಕಾಂಗ್ರೆಸ್ ಸಂಸದರು ಕೂಡ ಮಸೂದೆಯನ್ನು ವಿರೋಧಿಸಿದರು.
 

Follow Us:
Download App:
  • android
  • ios