Asianet Suvarna News Asianet Suvarna News

Mamata In Delhi: ಪ್ರತಿ ಬಾರಿ ಸೋನಿಯಾ ಭೇಟಿಯಾಗೋ ಅಗತ್ಯವೇನಿದೆ? ದೀದೀ ಮಾತಿನ ಮರ್ಮವೇನು?

* ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ

* ಸೋನಿಯಾ ಭೇಟಿ ಬಗ್ಗೆ ಕಹಿ ಉತ್ತರ ಕೊಟ್ಟ ದೀದಿ

* ಪ್ರತಿ ಬಾರಿ ಸೋನಿಯಾ ಗಾಂಧಿ ಭೇಟಿಯಾಗೋ ಅಗತ್ಯವೇನಿದೆ? ಎಂದ ಬಂಗಾಳ ಸಿಎಂ

Why Should We Meet Sonia Gandhi Every Time Mamata Banerjee Big Hint pod
Author
Bangalore, First Published Nov 24, 2021, 10:57 PM IST
  • Facebook
  • Twitter
  • Whatsapp

ಕೋಲ್ಕತ್ತಾ(ನ.24): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರು ತಮ್ಮ ಪಕ್ಷದ ತೃಣಮೂಲ ಕಾಂಗ್ರೆಸ್‌ನ (Trinamool Congress) ವಿಸ್ತರಣೆ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಬುಧವಾರ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಂಸದೀಯ ಕ್ಷೇತ್ರವಾದ ವಾರಣಾಸಿ (varanasi) ಮತ್ತು ಮಹಾರಾಷ್ಟ್ರಕ್ಕೂ (maharashtra) ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ (AICC President Sonia Gandhi) ಅವರನ್ನು ಭೇಟಿ ಮಾಡುವ ಯೋಜನೆ ಕುರಿತು ಮಮತಾ ಬ್ಯಾನರ್ಜಿ ನೀಡಿರುವ ಉತ್ತರ ಉಭಯ ನಾಯಕರು ಮತ್ತು ಪಕ್ಷಗಳ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಮಮತಾ ಬ್ಯಾನರ್ಜಿ ಅವರನ್ನು ಸೋನಿಯಾ ಗಾಂಧಿ (Sonia Gandhi) ಭೇಟಿಯ ಕುರಿತು ಕೇಳಿದಾಗ, ಅಂತಹ ಯಾವುದೇ ಯೋಜನೆ ಇಲ್ಲ, ಅವರು ಪಂಜಾಬ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದರು. ಅಲ್ಲದೇ “ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಲ್ಲ ” ಎಂದಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವಿನ ಸಂಬಂಧವು ತುಂಬಾ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ, ಆದಾಗ್ಯೂ ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳ ನಡುವಿನ ಸಂಬಂಧವು ನಿರಂತರವಾಗಿ ಹದಗೆಟ್ಟಿದೆ. ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ (Kirti Azad) ಮತ್ತು ಮಾಜಿ ಕಾಂಗ್ರೆಸ್ ಹರಿಯಾಣ ಘಟಕದ ಅಧ್ಯಕ್ಷ ಅಶೋಕ್ ತನ್ವಾರ್ ಮಂಗಳವಾರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂಬುವುದು ನೆನಪಿಸಿಕೊಳ್ಳಬೇಕಾದ ವಿಚಾರ ಎಂದು ಹೇಳಿದ್ದಾರೆ.

ಪ್ರಧಾನಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಜಾಗತಿಕ ಕೈಗಾರಿಕಾ ಶೃಂಗಸಭೆಯನ್ನು ಉದ್ಘಾಟಿಸಲು ಪ್ರಧಾನಿಯನ್ನು ಆಹ್ವಾನಿಸಿರುವುದಾಗಿ ಹೇಳಿದರು. ''ಕೇಂದ್ರದಿಂದ ಬಾಕಿ ಉಳಿದಿರುವ 96,655 ಕೋಟಿ ರೂ. ಕೇಂದ್ರವು ಅವರಿಗೆ ಬಾಕಿಯನ್ನು ನೀಡದಿದ್ದಾಗ ರಾಜ್ಯಗಳು ತಮ್ಮ ಕೆಲಸವನ್ನು ಹೇಗೆ ಮಾಡುತ್ತವೆ? ನಮ್ಮ ಸಿದ್ಧಾಂತಗಳು ವಿಭಿನ್ನವಾಗಿರಬಹುದು ಆದರೆ ಇದರಿಂದಾಗಿ ಕೇಂದ್ರ-ರಾಜ್ಯ ಸಂಬಂಧಗಳಿಗೆ ಧಕ್ಕೆಯಾಗಬಾರದು. ರಾಜ್ಯಗಳು ಅಭಿವೃದ್ಧಿಯಾದರೆ ಕೇಂದ್ರವೂ ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ.

ತ್ರಿಪುರಾದಲ್ಲಿ ನಡೆದ ಹಿಂಸಾಚಾರದ ವಿಷಯವನ್ನೂ ದೀದಿ ಮೋದಿ ಜೊತೆ ಪ್ರಸ್ತಾಪಿಸಿದರು, ಇದರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಖಿಲೇಶ್ ಯಾದವ್‌ಗೆ ಸಹಾಯ ಮಾಡಲು ಮಮತಾ ಸಿದ್ಧ

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ (Uttar Pradesh Assembly Elections) ಬಗ್ಗೆ ಕೇಳಿದಾಗ, ಅಖಿಲೇಶ್ ಯಾದವ್ (Akhilesh Yadav) ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸಹಾಯ ಮಾಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ಹೇಳಿದರು. "ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಸಹಾಯ ಬೇಕಾದರೆ, ನಾವು ಹೋಗುತ್ತೇವೆ. ಅಖಿಲೇಶ್ ಯಾದವ್ ನಮ್ಮ ಸಹಾಯ ಬಯಸಿದರೆ ನಾವು ಸಹಾಯ ಮಾಡುತ್ತೇವೆ" ಎಂದು ಅವರು ಹೇಳಿದರು.

ಗೋವಾದಲ್ಲಿ ತಮ್ಮ ಪಕ್ಷ ಆರಂಭವಾಗಿದ್ದು, ಕೆಲವು ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ತೀವ್ರ ಹೋರಾಟ ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. "ನಾವು ಗೋವಾ ಮತ್ತು ಹರಿಯಾಣದಲ್ಲಿ ಪ್ರಾರಂಭಿಸಿದ್ದೇವೆ. ಆದರೆ ಪ್ರಾದೇಶಿಕ ಪಕ್ಷಗಳು ಕೆಲವು ಸ್ಥಳಗಳಲ್ಲಿ ಹೋರಾಡಬೇಕು ಎಂದು ನಾನು ನಂಬುತ್ತೇನೆ. ನಾವು ಅವರ ಪರವಾಗಿ ಪ್ರಚಾರ ಮಾಡಬೇಕೆಂದು ಅವರು ಬಯಸಿದರೆ, ನಾವು ಮಾಡುತ್ತೇವೆ ಎಂದೂ ಉಚ್ಛರಿಸಿದ್ದಾರೆ.

ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಒಂದು ದಿನದ ನಂತರ, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios