ಒಂದು ಕೋಟಿ ಮಹಿಳೆಯರಿಗೆ ಗುಡ್ ನ್ಯೂಸ್ - ಪ್ರತಿ ತಿಂಗಳು ಜಮೆ ಆಗಲಿದೆ 1,500 ರೂಪಾಯಿ
ಮುಖ್ಯಮಂತ್ರಿ ಲಡಕಿ ಬಹಿನ್ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಇನ್ಮುಂದೆ ಸುಮಾರು ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಪ್ರತಿ ತಿಂಗಳು ಹಣ ಸಿಗಲಿದೆ. ಮೊದಲ ಬಾರಿ ಜುಲೈ ಮತ್ತು ಆಗಸ್ಟ್ ತಿಂಗಳ 3 ಸಾವಿರ ರೂ. ಜಮೆ ಆಗಲಿದೆ.
ಮುಂಬೈ: ರಕ್ಷಾ ಬಂಧನಕ್ಕೂ ಮುನ್ನವೇ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಮಹಾರಾಷ್ಟ್ರ ಸರ್ಕಾರ ಗುಡ್‌ನ್ಯೂಸ್ ನೀಡುತ್ತಿದೆ. ಇಂದಿನಿಂದ ಅಂದ್ರೆ ಆಗಸ್ಟ್ 17ರಂದು 'ಮುಖ್ಯಮಂತ್ರಿ ಲಡಕಿ ಬಹಿನ್' ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಗುರುವಾರ ಡಿಸಿಎಂ ದೇವೇಂದ್ರ ಫಡ್ನವೀಸ್ ಘೋಷಣೆ ಮಾಡಿದ್ದಾರೆ. ಈ ಯೋಜನೆಯಡಿ ನೋಂದಾಯಿಸಿಕೊಂಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 1,500 ರೂಪಾಯಿ ಜಮೆ ಆಗಲಿದೆ. ಸುಮಾರು 1 ಕೋಟಿಗೂ ಅಧಿಕ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದೆ.
ಬುಧವಾರ ಮುಖ್ಯಮಂತ್ರಿ ಲಡಕಿ ಬಹಿನ್ ಯೋಜನೆಯ ಟ್ರಯಲ್ ರನ್ ನಡೆಯಲಿದೆ. ಈ ಟ್ರಯಲ್ ರನ್ ವೇಳೆ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಮೂರು ಸಾವಿರ ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತದೆ. ಈ ಹಣ ಜಮೆ ಮಾಡುವ ಪ್ರಕ್ರಿಯೆ ಪ್ರತಿ ತಿಂಗಳು ನಡೆಯಲಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭಪಡೆದುಕೊಳ್ಳಲಿದ್ದು, ಆರ್ಥಿಕ ಸ್ವಾಲಂಬನೆ ಮಾಡೋದು ಈ ಯೋಜನೆಯ ಗುರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸರ್ಕಾರ ಮೊದಲ ಬಾರಿಗೆ ಲಾಡ್ಲ ಬಹೇನಾ ಯೋಜನೆಯನ್ನು ಜಾರಿಗೊಳಿಸಿತ್ತು. ಅದೇ ಮಾದರಿಯಲ್ಲಿ ಮಹಾರಾಷ್ಟ್ರದ ಏಕ್‌ನಾಥ್ ಶಿಂಧೆ ಸರ್ಕಾರ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಬಾರಿಯ ಬಜೆಟ್‌ನಲ್ಲಿಯೇ ಮಹಾರಾಷ್ಟ್ರ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿತ್ತು ಮತ್ತು ಇದಕ್ಕಾಗಿ 46,000 ಕೋಟಿ ರೂಪಾಯಿ ಮೀಸಲಿಡಿತ್ತು.
21 ರಿಂದ 65 ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಮಹಾರಾಷ್ಟ್ರ ನಿವಾಸಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ವಯಸ್ಸಿನಲ್ಲಿ ಕೊಂಚ ವ್ಯತ್ಯಾಸವಾದರೂ ಅಂತಹ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಯೋಜನೆಯ ಲಾಭ ಪಡೆಯುವ ಫಲಾನುಭವಿಗಳ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತಲೂ ಕಡಿಮೆ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿಯೇ ಎಲ್ಲರ ಮುಂದೆಯೇ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕ!
ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹಣಕಾಸಿನ ನೆರವು ನೀಡಿ ಅವರನ್ನು ಸ್ವಾಲಂಬಿಸಿಯಾಗೋದ ಯೋಜನೆಯ ಗುರಿಯಾಗಿದೆ. ಅದರಲ್ಲಿಯೂ ಬಡ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆ ನೋಂದಣಿಗೆ ಸರ್ಕಾರ ಯಾವುದೇ ಶುಲ್ಕ ನಿಗಧಿ ಮಾಡಿಲ್ಲ. ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದ್ದು, ಇದಕ್ಕಾಗಿಯೇ 'ನಾರಿ ಶಕ್ತಿ ಧೂತ' ಹೆಸರಿನ ಆಪ್ ಪರಿಚಯಿಸಲಾಗಿದೆ. ಮೊಬೈಲ್‌ನಲ್ಲಿ ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಆನ್‌ಲೈನ್ ಸೆಂಟರ್‌ಗಳಲ್ಲಿಯೂ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದಲ್ಲಿಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದ ಎಲ್ಲಾ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುತ್ತಿದೆ. ಈಗಾಗಲೇ ಹಲವು ತಿಂಗಳ ಕಂತು ಮಹಿಳೆಯರ ಖಾತೆಗೆ ತಲುಪಿದೆ. ತಾಂತ್ರಿಕ ಕಾರಣಗಳಿಂದ ಜೂನ್, ಜುಲೈ ಹಣ ಜಮೆ ಆಗಿರಲಿಲ್ಲ. ಶೀಘ್ರದಲ್ಲಿಯೇ ಹಣ ಜಮೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು.
ಸ್ವಂತದ್ದೊಂದು ಮನೆ ಮಾಡ್ಬೇಕಾ? ಈ 11 ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿದರದಲ್ಲಿ ಸಾಲ!