Asianet Suvarna News Asianet Suvarna News

ಪೊಲೀಸ್ ಠಾಣೆಯಲ್ಲಿಯೇ ಎಲ್ಲರ ಮುಂದೆಯೇ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕ!

ಠಾಣೆಯಲ್ಲಿಯೇ ಪೊಲೀಸರ ಮುಂದೆಯೇ ಉತ್ತರ ಪ್ರದೇಶ ಮೂಲದ ಮಹಿಳೆ ಮೇಲೆ ಸ್ಥಳೀಯ ಬಿಜೆಪಿ ನಾಯಕ ಹಲ್ಲೆ ನಡೆಸಿದ್ದಾರೆ.  ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Maharashtra bjp leader Shiva Tayde beat up a woman in police station mrq
Author
First Published Aug 7, 2024, 2:01 PM IST | Last Updated Aug 7, 2024, 2:13 PM IST

ಮುಂಬೈ: ಮಾಹಾರಾಷ್ಟ್ರದಲ್ಲಿ ಶಾಕಿಂಗ್ ವಿಡಿಯೋ ಹರಿದಾಡುತ್ತಿದ್ದು, ಆಡಳಿತರೂಢ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಶಿವಸೇನೆಯ ಉದ್ದವ್ ಠಾಕ್ರೆ ಬಣದ ವಕ್ತಾರೆ ಸುಷ್ಮಾ ಅಂಧಾರೆ, ಹಲ್ಲೆಯ ಸಿಸಿಟಿವಿ ದೃಶ್ಯದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್‌ನ್ನು ಸಂಸದೆ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕಿ ಹಾಗೂ ವಕೀಲೆ ಯಶೋಮತಿ ಠಾಕೂರ್, ಶಿವಸೇನೆ ನಾಯಕ ಅಜಿತ್ ಠಾಕ್ರೆ ಹಾಗೂ ಪಕ್ಷದ ಖಾತೆಗೂ ಟ್ಯಾಗ್ ಮಾಡಿದ್ದಾರೆ. ಮಹಿಳೆ ಮೇಲೆ ಮಾಡಿದ ಬಿಜೆಪಿ ನಾಯಕನ ಹೆಸರು ಶಿವ ತಾಯ್ಡೆ ಎಂದು ಶಿವಸೇನೆ ನಾಯಕಿ ಹೇಳಿದ್ದಾರೆ.

ಮಹಾರಾಷ್ಟ್ರದ ಬುಲ್ದಾನದ ನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ, ಉತ್ತರ ಪ್ರದೇಶ ಮೂಲದ ಮಹಿಳೆ ಮೇಲೆ ಎಲ್ಲರ ಮುಂದೆಯೇ ಬಿಜೆಪಿ ನಾಯಕ ಶಿವ ತಾಯ್ಡೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.  ಮಲ್ಕಪುರ ಕೃಷಿ ಸಮಿತಿಯ ಚೇರ್‌ಮ್ಯಾನ್ ಆಗಿರುವ ಶಿವ ತಾಯ್ಡೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಸೇನೆ ಹಾಗೂ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ? 

ಪೊಲೀಸ್ ಠಾಣೆಯ ಬೆಂಚ್ ಮೇಲೆ ವ್ಯಕ್ತಿಯ ಜೊತೆ ಮಹಿಳೆ ಕುಳಿತಿರುತ್ತಾರೆ. ಅಲ್ಲಿಗೆ ಬರುವ ಬಿಜೆಪಿ ನಾಯಕ ನೇರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಪೊಲೀಸರು ಬಂದು ತಡೆಯವರೆಗೂ ಮಹಿಳೆ ಮೇಲೆ ಹಲ್ಲೆ ನಡೆಸುತ್ತಿರುತ್ತಾನೆ. ಈ  ವೇಳೆ ಮಹಿಳೆ ಪಕ್ಕದಲ್ಲಿಯೇ ಕುಳಿತಿದ್ದ ವ್ಯಕ್ತ ತಡೆಯಲು ಮುಂದಾಗುತ್ತಾನೆ. ಆಗ ಆತನ ಮೇಲೆಯೂ ಹಲ್ಲೆ ನಡೆಸುತ್ತಾನೆ. ನಂತರ ಅಲ್ಲಿಗೆ ಬಂದ ಮತ್ತೋರ್ವ ಮಹಿಳೆ, ಸಂತ್ರಸ್ತೆಯನ್ನು ಠಾಣೆಯೊಳಗೆ ಕರೆದುಕೊಂಡು ಹೋಗುತ್ತಾರೆ. ಈ ಎಲ್ಲಾ ದೃಶ್ಯಗಳು ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಾರ್‌ನಲ್ಲಿ ಯುವತಿಯರ ಜೊತೆ ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್ - ವಿಡಿಯೋ ವೈರಲ್

ಮತ್ತೊಂದು ವಿಡಿಯೋದಲ್ಲಿ ಪೊಲೀಸರು, ಬಿಜೆಪಿ ನಾಯಕ ಮತ್ತು ಮಹಿಳೆಯನ್ನು ಕೂರಿಸಿ ರಾಜಿ ಸಂಧಾನ ಮಾಡುತ್ತಿರೋದ್ನು ಗಮನಿಸಬಹುದು. ಈ ವೇಳೆ ಹಿಂದಿನಿಂದ ಒಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುತ್ತಾರೆ. ವಿಡಿಯೋ ಮಾಡೋದು ಗಮನಕ್ಕೆ ಬರುತ್ತಿದ್ದಂತೆ ಕೋಪಗೊಂಡ ಬಿಜೆಪಿ ನಾಯಕ ಶಿವ ತಾಯ್ಡೆ ಕುರ್ಚಿಯನ್ನು ಸರಿಸಿ, ವಿಡಿಯೋ ಮಾಡ್ತಿದ್ದೀಯಾ ಎಂದು ಹಲ್ಲೆ ನಡೆಸಲು ಮುಂದಾಗುತ್ತಾನೆ.

ಮಹಿಳೆ ಜೊತೆಯಲ್ಲಿದ್ದ ವ್ಯಕ್ತಿಯನ್ನು ಆಕೆಯ ಪತಿ ಎಂದು ವರದಿಯಾಗಿದೆ. ಆದರೆ ದಂಪತಿ ಪೊಲೀಸ್ ಠಾಣೆಗೆ ಯಾವ ಕಾರಣಕ್ಕೆ ಬಂದಿದ್ದರು? ಶಿವ ತಾಯ್ಡೆ ಮತ್ತು ದಂಪತಿಗೂ ಏನು ಸಂಬಂಧ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಪ್ರಶ್ನಿಸಿ ಶಿವಸೇನೆ ನಾಯಕಿ ಸುಷ್ಮಾ ಅಂಧಾರೆ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಗೋಹತ್ಯೆ ನಡೆಸಿದ್ದರಿಂದಲೇ ವಯನಾಡಿನಲ್ಲಿ ಭೂಕುಸಿತ : ಬಿಜೆಪಿ ನಾಯಕ ವಿವಾದ

Latest Videos
Follow Us:
Download App:
  • android
  • ios