ಸ್ವಂತದ್ದೊಂದು ಮನೆ ಮಾಡ್ಬೇಕಾ? ಈ 11 ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿದರದಲ್ಲಿ ಸಾಲ!
Home Loan Lower interest ಕೆಲವು ವರ್ಷಗಳಿಂದ ಆಸ್ತಿ ಖರೀದಿಯ ಬೇಡಿಕೆ ತುಂಬಾ ಹೆಚ್ಚಾಗುತ್ತಿದೆ. ಜನರು ಮನೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮನೆಗಳ ಬೆಲೆಯಲ್ಲೂ ದೊಡ್ಡ ಮಟ್ಟದ ಏರಿಕೆಯಾಗುದೆ. ಇಂದಿನ ಸಮಯದಲ್ಲಿ ಒಂದು ಉತ್ತಮ ಮನೆ ಖರೀದಿ ಮಾಡಬೇಕೆಂದರೂ ಸರಾಸರಿ 70 ರಿಂದ 80 ಲಕ್‌ಷ ಖರ್ಚಾಗುತ್ತದೆ. ನೀವು ನಿಮ್ಮ ಸ್ವಂತ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಅದಕ್ಕಾಗಿ 75 ಲಕ್ಷದವರೆಗಿನ ಗೃಹಸಾಲ ಪಡೆಯಲು ಯೋಚನೆ ಮಾಡುತ್ತಿದ್ದರೆ, ಈ 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬಡ್ಡಿದರ ನಿಮಗೆ ಸಹಾಯವಾಗಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ 75 ಲಕ್ಷದವರೆಗಿನ ಗೃಹ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರವಾದ ಶೇ. 8.5 ಇಂದ ಶೇ. 9.85 ಒಳಗಡೆ ನೀಡುತ್ತದೆ. ಇದರರ್ಥ ನೀವು ಒಂದು ಲಕ್ಷದ ಸಾಲಕ್ಕೆ ಒಂದು ವರ್ಷಕ್ಕೆ 8500 ರಿಂದ 9850 ರೂಪಾಯಿಯವರೆಗೆ ಬಡ್ಡಿ ಪಾವತಿ ಮಾಡಬೇಕು ಎನ್ನುವುದು.
ಬ್ಯಾಂಕ್ ಆಫ್ ಬರೋಡ ಕೂಡ ಈ ವಿಚಾರದಲ್ಲಿ ಹಿಂದೆ ಇಲ್ಲ. ಈ ಬ್ಯಾಂಕ್ ಶೇ. 8.40 ರಿಂದ ಶೇ. 10.90ವರೆಗಿನ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತದೆ.
ಯೂನಿಯನ್ ಬ್ಯಾಂಕ್ ಕೂಡ ಗೃಹಸಾಲಕ್ಕೆ ಉತ್ತಮ ಆಯ್ಕೆಯಾಗಬಲ್ಲದು. 75 ಲಕ್ಷದವರೆಗಿನ ಗೃಹ ಸಾಲಕ್ಕೆ ಇವರು ಶೇ. 8.35 ಇಂದ ಶೇ.10.90ವರೆಗಿನ ಬಡ್ಡಿ ವಿಧಿಸುತ್ತಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ತನ್ನದೇ ಹೌಸಿಂಗ್ ಫೈನಾನ್ಸ್ ಕೂಡ ಹೊಂದಿದೆ. ಅದರಿಂದ ಗೃಹ ಸಾಲಕ್ಕೆ ಇವರು 8.40 ಇಂದ ಶೇ. 10.15ವರೆಗಿನ ಬಡ್ಡಿಯನ್ನು ವಿಧಿಸುತ್ತಾರೆ.
ಬ್ಯಾಂಕ್ ಆಫ್ ಇಂಡಿಯಾದಲ್ಲೂ ಕೂಡ ಗೃಹಸಾಲದ ಬಡ್ಡಿದರ ಬಹಳ ಕಡಿಮೆ ಇದೆ. ಶೇ. 8.40 ಇಂದ ಶೇ. 10.85ವರೆಗೆ ಇವರು ಗೃಹಸಾಲಕ್ಕೆ ಬಡ್ಡಿ ವಿಧಿಸುತ್ತಾರೆ.
ಕೆನರಾ ಬ್ಯಾಂಕ್ ಕೂಡ ಉತ್ತಮ ಆಯ್ಕೆ. ಕೆನರಾ ಬ್ಯಾಂಕ್ ಗೃಹಸಾಲಕ್ಕೆ ಶೇ.8.40 ಇಂದ ಶೇ. 11.15ರವರೆಗಿನ ಬಡ್ಡಿ ದರವನ್ನು ವಿಧಿಸುತ್ತದೆ.
ಯುಕೋ ಬ್ಯಾಂಕ್ ಕೂಡ ಗೃಹ ಸಾಲವನ್ನು ನೀಡುತ್ತದೆ. ಇಲ್ಲಿ ಅಂದಾಜು 75 ಲಕ್ಷದ ಸಾಲಕ್ಕೆ ಶೇ.8.45 ಇಂದ ಶೇ. 10.30ವರೆಗಿನ ಬಡ್ಡಿಯನ್ನು ವಿಧಿಸುತ್ತಾರೆ.
bank of maharashtra
ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ತನ್ನ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಗೃಹಸಾಲ ವಿಭಾಗವನ್ನು ಹೊಂದಿದೆ. ಶೇ. 8.35 ಇಂದ ಶೇ. 11.15ರಷ್ಟು ಬಡ್ಡಿಯನ್ನು ವಿಧಿಸುತ್ತಾರೆ.
ಪಂಜಾಬ್ & ಸಿಂಧ್ ಬ್ಯಾಂಕ್‌ನಿಂದ ಹೋಮ್ ಲೋನ್ ಪಡೆಯೋದು ಉತ್ತಮ ಆಯ್ಕೆ. ಶೇ. 8.50 ರಿಂದ ಶೇ. 10ರ ಬಡ್ಡಿದರದಲ್ಲಿ ಇವರು ಸಾಲ ನೀಡುತ್ತಾರೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದಲೂ ನೀವು ಗೃಹ ಸಾಲ ಪಡೆಯಬಹುದು. ಇವರು ಈ ಸಾಲಕ್ಕೆ ಶೇ. 8.40 ಇಂದ ಶೇ. 10.60ವರೆಗೆ ಬಡ್ಡಿ ವಿಧಿಸುತ್ತಾರೆ.
central bank of india
ಸೆಂಟ್ರಲ್ ಬ್ಯಾಂಕ್ ಇಂಡಿಯಾ ಕೂಡ ತಮ್ಮ ವ್ಯವಹಾರದಲ್ಲಿ ಗೃಹಸಾಲವನ್ನು ಹೊಂದಿದೆ. ಅಂದಾಜು 75 ಲಕ್ಷದ ಗೃಹಸಾಲಕ್ಕೆ ಇವರು ಶೇ. 8.45 ಇಂದ ಶೇ. 9.80ವರೆಗೆ ಬಡ್ಡಿ ವಿಧಿಸುತ್ತಾರೆ.