ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ ನೀರಾಡಿಕೆಯಿಂದ ಬಳಲಿದ್ದ ಕೋತಿಗೆ ನೀರು ಮಹಾರಾಷ್ಟ್ರದ ಮಲ್ಶೇಜ್ ಘಾಟ್‌ನಲ್ಲಿ ದೃಶ್ಯ ಸೆರೆ

ಮುಂಬೈ(ಏ.4): ಮಹಾರಾಷ್ಟ್ರದ ಪೊಲೀಸ್‌ ಒಬ್ಬರು ನೀರಾಡಿಕೆಯಿಂದ ಬಳಲಿ ಬೆಂಡಾಗಿದ್ದ ಕೋತಿಯೊಂದಕ್ಕೆ ನೀರುಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೇಳಿ ಕೇಳಿ ಇದು ಬಿರು ಬೇಸಿಗೆ. ಬುದ್ಧಿವಂತ ಪ್ರಾಣಿ ಎನಿಸಿರುವ ಮನುಷ್ಯರೇನೋ ಶುದ್ಧ ನೀರನ್ನು ಎಲ್ಲಿಂದಾದರು ತಂದು ಕುಡಿಯುತ್ತಾರೆ. ಆದರೆ ಪ್ರಾಣಿ ಪಕ್ಷಿಗಳು ಏನು ಮಾಡಬೇಕು. ಬೇಸಿಗೆಯಲ್ಲಿ ಸರಿಯಾದ ನೀರು ಸಿಗದೆ ಬಿಸಿಲಿನ ದಾಹ ತಾಳಲಾಗದೇ ಅನೇಕ ಸಣ್ಣಪುಟ್ಟ ಪಕ್ಷಿಗಳು ತಮ್ಮ ಪ್ರಾಣವನ್ನೇ ಬಿಡುತ್ತವೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಮನೆಯ ಮಹಡಿಗಳಲ್ಲಿ ಅಂಗಳದಲ್ಲಿ ಅಲಲ್ಲಿ ನೀರು ಇಟ್ಟು ಜೀವ ಸಂಕುಲದ ವೈವಿಧ್ಯತೆಗೆ ಸಾಕ್ಷಿಯಾಗಿರುವ ಪ್ರಾಣಿ ಪಕ್ಷಿಗಳಿಗೂ ಬದುಕಲು ಅವಕಾಶ ನೀಡಿ ಎಂದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳು ಕರೆ ನೀಡುತ್ತಾರೆ. 

ಇನ್ನು ಕೋತಿಗೆ ಪೊಲೀಸ್ ಸಿಬ್ಬಂದಿ ನೀರು ಕುಡಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಮುಂಬೈ-ಅಹಮದಾಬಾದ್ (Mumbai-Ahmedabad route) ಮಾರ್ಗದ ಮಲ್ಶೇಜ್ ಘಾಟ್‌ನಲ್ಲಿ (Malshej ghat). ಇಲ್ಲಿ ಸೇವೆಯಲ್ಲಿರು ಟ್ರಾಫಿಕ್ ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ ಬಾಟಲಿಗಳನ್ನು ಒಯ್ಯುತ್ತಿರುವುದು ಕಂಡು ಬರುತ್ತಿದೆ.

View post on Instagram

ವೀಡಿಯೊದಲ್ಲಿ ಕಾಣಿಸುವಂತೆ ಪೋಲೀಸ್ ಅಧಿಕಾರಿಯೊಬ್ಬರು ಕೋತಿಗೆ (Monkey) ನೀರು ಕುಡಿಯಲು ಬಾಟಲಿಯನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. StreetDogsofBombay ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಈ ವಿಡಿಯೋ ಪೋಸ್ಟ್ ಆಗಿದೆ. 'ಧ್ವನಿಯಿಲ್ಲದ ಶಿಶುಗಳ ಕಡೆಗೆ ದಯೆ ಮತ್ತು ಕರುಣೆಗಾಗಿ ಮಹಾರಾಷ್ಟ್ರ ಪೊಲೀಸರಿಗೆ ಸೆಲ್ಯೂಟ್, ಬೇಸಿಗೆಯ ಬಿಸಿಯು ಹೆಚ್ಚುತ್ತಿದೆ ಮತ್ತು ಧ್ವನಿಯಿಲ್ಲದ ಶಿಶುಗಳು ನೀರಿಗಾಗಿ ಹುಡುಕುತ್ತಿದ್ದಾರೆ ಆದ್ದರಿಂದ ದಯವಿಟ್ಟು ನಿಮ್ಮ ಮನೆಯ ಹೊರಗೆ ನೀರಿನ ಬಟ್ಟಲುಗಳನ್ನು ಇರಿಸಿ ಮತ್ತು ದಾಹದಿಂದ ಅವುಗಳನ್ನು ರಕ್ಷಿಸಿ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಯಾರಾದರೂ ತಿಂದುಳಿದ ಆಹಾರವನ್ನು (Food) ನೀಡಬಹುದೆಂಬ ಭರವಸೆಯೊಂದಿಗೆ ಕೋತಿಗಳು ಯಾವುದೋ ಅಂಗಡಿ/ಹೋಟೆಲ್‌ಗಳ ಬಳಿ ಗಂಟೆಗಟ್ಟಲೆ ನಿಲ್ಲುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಆಹಾರವನ್ನು ಖರೀದಿಸಲು ಹಣ ಬೇಕು ಎಂದು ಅವರಿಗೆ ತಿಳಿದಿಲ್ಲ. ಮತ್ತೊಂದೆಡೆ ಜನರು ಸಾಕು ನಾಯಿಗಳು ಮತ್ತು ಬೀದಿನಾಯಿಗಳ ನಡುವೆ ತಾರತಮ್ಯ ಮಾಡುತ್ತಾರೆ. ಬೀದಿನಾಯಿಗಳನ್ನು ಕೊಳಕು ಎಂದು ಪರಿಗಣಿಸುತ್ತಾರೆ.

ಪ್ರೀತಿ ಬಯಸಿ ಬಂದ ಕೋತಿ... ವ್ಯಕ್ತಿಯ ಗಟ್ಟಿಯಾಗಿ ತಬ್ಬಿಕೊಂಡ ವಾನರ.. ಭಾವುಕ ವಿಡಿಯೋ

ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ದಯೆ ಮತ್ತು ಸಹಾನುಭೂತಿಗೆ ಜನ ಶಹಭಾಷ್‌ ಅಂದಿದ್ದಾರೆ ಪ್ರಭಾವಿತರಾಗಿದ್ದಾರೆ. 'ಇದು ತುಂಬಾ ಪರಿಶುದ್ಧವಾಗಿದೆ' ಎಂದು ಒಬ್ಬ ಬಳಕೆದಾರರು ಬರೆದರೆ ಮತ್ತೊಬ್ಬರು 'ಅಮೂಲ್ಯ ದೇವರು ಅವರನ್ನು ಆಶೀರ್ವದಿಸಲಿ' ಎಂದು ಬರೆದಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಕೋತಿಗಳು (monkey), ಲಾಂಗುರ್‌ಗಳು(langurs), ನಾಯಿಗಳು(dog), ಬೆಕ್ಕುಗಳು(cat) ಮತ್ತು ಪಕ್ಷಿಗಳು (bird) ಹೆಚ್ಚಾಗಿ ಈ ಘಾಟ್‌ನಲ್ಲಿ ಸಂಚರಿಸುತ್ತವೆ ಮತ್ತು ಪಕ್ಷಿಗಳು ವಿಶೇಷವಾಗಿ ಆಕಾಶದಲ್ಲಿ (sky) ಹಾರುವಾಗ ಶಾಖದ ಹೊಡೆತಕ್ಕೆ ಒಳಗಾಗುತ್ತವೆ.

Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ

ಕೆಲ ದಿನಗಳ ಹಿಂದೆ ಕೋತಿಯೊಂದು ಬೆಕ್ಕನ್ನು ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪ್ರಾಣಿಗಳು ಪರಸ್ಪರ ಮುದ್ದಾಡುವ ಪ್ರೀತಿ ತೋರುವ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇಲ್ಲೊಂದು ವಿಡಿಯೋ ವೈರಲ್(Viral) ಆಗಿದ್ದು, ಇದರಲ್ಲಿ ಕೋತಿಯೊಂದು ಹಾಲಿನ ಬಣ್ಣದ ವಜ್ರದಂತೆ (Dimond) ಹೊಳೆಯುವ ಬೆರಗು ಕಂಗಳ ಬೆಕ್ಕಿನ ಪ್ರೇಮಕ್ಕೆ ಮೊದಲ ನೋಟದಲ್ಲಿ ಸೋತು ಹೋಗಿದೆ. ಬೆಕ್ಕನ್ನು(cat) ಬೆಕ್ಕಿನ ಒಡತಿ ಎತ್ತಿಕೊಂಡಿದ್ದು, ಈ ವೇಳೆ ಅಲ್ಲಿಗೆ ಬರುವ ಕೋತಿಯೊಂದು ಹತ್ತಿರ ಬಂದು ಬೆಕ್ಕನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತದೆ. ಜೊತೆಗೆ ಪ್ರೀತಿಯ ಸಿಹಿ ಮುತ್ತನ್ನು ನೀಡಲು ಯತ್ನಿಸುತ್ತದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.