ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ, ಆಕೆಯ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ 10 ತಿಂಗಳ ಕಾಲ ಯುವತಿಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಅಂತಿಮವಾಗಿ ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಮುಂಬೈ: ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾ*ಚಾರ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 10 ತಿಂಗಳಿನಿಂದ ಸರತಿ ಸಾಲಿನಲ್ಲಿ ಯುವತಿ ಮೇಲೆ ಯುವಕರು ದೌರ್ಜನ್ಯ ಎಸಗಿದ್ದಾರೆ. ಕಳೆದ 10 ತಿಂಗಳಿನಿಂದ ಯುವತಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡು ಕಾಮದ ಆಟಿಕೆಯಂತೆ ಬಳಸಿಕೊಂಡಿದ್ದಾರೆ. ಈ ಭಯಾನಕ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ. ಅಂತಿಮವಾಗಿ ಯುವತಿ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.
ಮೋಸದ ಬಲೆಯಲ್ಲಿ ಯುವತಿ ಸಿಲುಕಿದ್ದೇಗೆ?
ಯುವತಿಗೆ ಒಂದು ವರ್ಷದ ಹಿಂದೆ ಕೋಲ್ಹಾಪುರ ಮೂಲದ ಯುವಕನ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿ ಬದಲಾಗಿತ್ತು. ಯುವಕ ಸಹ ಮದುವೆಯಾಗೋದಾಗಿ ಭರವಸೆಯನ್ನು ನೀಡಿದ್ದನು. ಸುಮಾರು 10 ತಿಂಗಳೆ ಹಿಂದೆ ಮದುವೆ ಬಗ್ಗೆ ಮಾತನಾಡಲು ಯುವತಿಯನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಯುವತಿಯ ವಿರೋಧದ ನಡುವೆಯೂ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
10 ತಿಂಗಳು ನರಕ ತೋರಿಸಿದ ಪಾಪಿ
ಈ ವೇಳೆ ಆರೋಪಿ ಯುವಕ, ಹೇಯಕೃತ್ಯವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಾಗೆಯೇ ಯುವತಿ ಜೊತೆಗಿನ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾನೆ. ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ. ಈ ಘಟನೆ ಬಳಿಕ 10 ತಿಂಗಳು ಯುವತಿಗೆ ನರಕ ತೋರಿಸಿದ್ದಾನೆ.
ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡುವಂತೆ ಯುವತಿ ಮನವಿ ಮಾಡಿಕೊಂಡಾಗ ಆಕೆಯ ಕುಟುಂಬಸ್ಥರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಹೇಯಕೃತ್ಯದಲ್ಲಿ ಮೂವರು ಸ್ನೇಹಿತರನ್ನು ಸೇರಿಸಿಕೊಂಡಿದ್ದಾನೆ. ಕಳೆದ 10 ತಿಂಗಳಿನಿಂದ ಯುವತಿಯನ್ನು ಕೊಲ್ಲಾಪುರ ಮತ್ತು ಸುತ್ತಮುತ್ತಲಿನ ಲಾಡ್ಜ್ ಮತ್ತು ಫ್ಲಾಟ್ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬೆದರಿಸಿ, ಮಾದಕ ದ್ರವ್ಯ ನೀಡಿ ನಾಲ್ವರು ಒಬ್ಬೊಬ್ಬರಾಗಿ ಅತ್ಯಾ*ಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮದುವೆ ಮಾಡಿಕೊಳ್ಳುವಂತೆ ಷರತ್ತು
ಇತ್ತೀಚೆಗೆ ದೈಹಿಕ ಸ್ಥಿತಿ ಕುಸಿದಾಗ ತನ್ನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಈ ವೇಳೆ ಆರೋಪಿ, ಯಾರಿಗೂ ಹೇಳದೇ ನನ್ನೊಂದಿಗೆ ರಿಜಿಸ್ಟರ್ ಮದುವೆಯಾಗಬೇಕು. ನನ್ನನ್ನು ಮದುವೆಯಾದ್ರೆ ಮಾತ್ರ ವಿಡಿಯೋ ಮತ್ತು ಫೋಟೋ ಡಿಲೀಸ್ ಮಾಡೋದಾಗಿ ಷರತ್ತು ಹಾಕಿದ್ದಾನೆ.
ಇದನ್ನೂ ಓದಿ: ಬೆಂಗಳೂರು ಎಂ.ಜಿ. ರಸ್ತೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಗೆ 'ರೇ*ಪ್' ಬೆದರಿಕೆ; ಬಟ್ಟೆ ಹರಿಯಲು ಯತ್ನ!
ನಾಲ್ವರ ದೌರ್ಜನ್ಯದಿಂದ ಬೇಸತ್ತ ಯುವತಿ ಅಂತಿಮವಾಗಿ ಧೈರ್ಯದಿಂದ ಕೊಲ್ಹಾಪುರದ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಮಹಿಳಾ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾಳೆ. ಸಂತ್ರಸ್ತೆ ಮಾತುಗಳನ್ನು ಕೇಳಿ ಅಧಿಕಾರಿಗಳೇ ಒಂದು ಕ್ಷಣ ದಿಗ್ಬ್ರಮೆಗೊಂಡಿದ್ದಾರೆ. ಸಾಮೂಹಿಕ ಅತ್ಯಾ*ಚಾರ, ಬ್ಲ್ಯಾಕ್‌ಮೇಲಿಂಗ್, ಬಲವಂತದ ಬಂಧನ ಮತ್ತು ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ಜೀಪನ್ನೇ ಕದ್ದ ಖದೀಮ: ಆದರೆ ಮಾಡಿದ ಒಂದು ತಪ್ಪಿನಿಂದ ಸಿಕ್ಕಿಬಿದ್ದ!


