Asianet Suvarna News Asianet Suvarna News

ಈ ಜೈಲು ಕ್ಯಾಂಟೀನ್‌ಗಳಲ್ಲಿ ಸಿಗುತ್ತೆ ಐಸ್‌ಕ್ರೀಂ, ಪಾನಿಪುರಿ: ಅರೋಪಿಗಳಿಗೆ ಬರ್ಮುಡಾ ಚಡ್ಡಿ, ಟಿ ಶರ್ಟ್‌!

ಮಹಾರಾಷ್ಟ್ರ ಕಾರಾಗೃಹ ಇಲಾಖೆ ಇತ್ತೀಚೆಗೆ ಜೈಲು ಕ್ಯಾಂಟೀನ್‌ಗಳಿಂದ ಕೈದಿಗಳು ಖರೀದಿಸಬಹುದಾದ ವಸ್ತುಗಳ ಪಟ್ಟಿಯನ್ನು ಪರಿಷ್ಕರಿಸಿದೆ. ಬಂಧಿತರಿಗೆ ಅಗತ್ಯ ವಸ್ತುಗಳು ಮತ್ತು ಮನರಂಜನಾ ವಸ್ತುಗಳ ಮಿಶ್ರಣವನ್ನು ಒದಗಿಸುವ ಉದ್ದೇಶದಿಂದ ಕ್ಯಾಂಟೀನ್ ಕ್ಯಾಟಲಾಗ್‌ಗೆ ಒಟ್ಟು 173 ಐಟಂಗಳನ್ನು ಸೇರಿಸಲಾಗಿದೆ.

maharashtra jail canteens get pani puri and ice cream 173 items added to canteen catalogue ash
Author
First Published Dec 1, 2023, 11:09 AM IST

ಮುಂಬೈ (ಡಿಸೆಂಬರ್ 1, 2023): ಜೈಲುಗಳೆಂದ್ರೆ ಬರೀ ಅನ್ನ ಸಾರು, ಮುದ್ದೆ ಊಟ ತಿನ್ನೋದನ್ನು ಸಿನಿಮಾಗಳಲ್ಲಿ ನೋಡಿರ್ಬೋದು ಹಾಗೂ ಕೈದಿಗಳಿಗೆ ನಂಬರ್‌ ಇರುವ ಬಟ್ಟೆ ನೀಡಲಾಗುತ್ತೆ. ಆದರೆ, ಈ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಹಾಗೂ ವಿಚಾರಣಾಧೀನ ಆರೋಪಿಗಳಿಗೆ ಊಟ, ತಿಂಡಿಗೆ ಭರ್ಜರಿ ಮೆನುವನ್ನೇ ನೀಡಲಾಗುತ್ತೆ. ಆದರೆ, ಎಲ್ಲ ವೆರೈಟಿ ಆಹಾರ ಫ್ರೀಯಾಗಿ ಸಿಗಲ್ಲ, ದುಡ್ಡು ಕೊಟ್ಟು ಖರೀದಿಸಬೇಕು.

ಮಹಾರಾಷ್ಟ್ರ ಕಾರಾಗೃಹ ಇಲಾಖೆ ಇತ್ತೀಚೆಗೆ ಜೈಲು ಕ್ಯಾಂಟೀನ್‌ಗಳಿಂದ ಕೈದಿಗಳು ಖರೀದಿಸಬಹುದಾದ ವಸ್ತುಗಳ ಪಟ್ಟಿಯನ್ನು ಪರಿಷ್ಕರಿಸಿದೆ. ಬಂಧಿತರಿಗೆ ಅಗತ್ಯ ವಸ್ತುಗಳು ಮತ್ತು ಮನರಂಜನಾ ವಸ್ತುಗಳ ಮಿಶ್ರಣವನ್ನು ಒದಗಿಸುವ ಉದ್ದೇಶದಿಂದ ಕ್ಯಾಂಟೀನ್ ಕ್ಯಾಟಲಾಗ್‌ಗೆ ಒಟ್ಟು 173 ಐಟಂಗಳನ್ನು ಸೇರಿಸಲಾಗಿದೆ.

ಇದನ್ನು ಓದಿ: ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್‌ ಚಾಲೀಸಾ, ಸುಂದರಕಾಂಡ ಪಠಣ!

ಈ ಪಟ್ಟಿಗೆ ಗಮನಾರ್ಹವಾದ ಸೇರ್ಪಡೆಗಳಲ್ಲಿ ನಿರ್ದಿಷ್ಟವಾಗಿ ಅಂಡರ್‌ಟ್ರಯಲ್‌ಗಳಿಗೆ ಬರ್ಮುಡಾ ಶಾರ್ಟ್ಸ್ ಮತ್ತು ಟಿ-ಶರ್ಟ್‌ ಸೇರಿದೆ. ಮತ್ತು ಚಾಟ್ ಮಸಾಲಾ, ಉಪ್ಪಿನಕಾಯಿ, ಎಳನೀರು, ಚೆಸ್ ಬೋರ್ಡ್‌, ಓಟ್ಸ್, ಕಾಫಿ ಪೌಡರ್, ಲೋನಾವಾಲಾ ಚಿಕ್ಕಿ, ಶುಗರ್‌ ಫ್ರೀ ಸ್ವೀಟನರ್ಸ್‌, ಐಸ್ ಕ್ರೀಮ್, ಆರ್ಗ್ಯಾನಿಕ್‌ ಹಣ್ಣುಗಳು, ಪೀನಟ್‌ ಬಟರ್‌, ಪಾನಿ ಪುರಿ, ಆರ್ಟ್‌ ಪುಸ್ತಕಗಳು, ಬಣ್ಣದ ವಸ್ತುಗಳು ಇತ್ಯಾದ ಇದೆ. ಜತೆಗೆ, ವೈಯಕ್ತಿಕ ಆರೈಕೆ ವಸ್ತುಗಳಾದ ಫೇಸ್ ವಾಶ್, ಹೇರ್ ಡೈ ಇತ್ಯಾದಿಗಳನ್ನು ಸಹ ಸೇರಿಸಲಾಗಿದೆ. ತಂಬಾಕಿನ ಪ್ರಚೋದನೆಯನ್ನು ಶಮನಗೊಳಿಸಲು, ನಿಕೋಟಿನ್ ಆಧಾರಿತ ಮಾತ್ರೆಗಳನ್ನು ಸಹ ಅನುಮತಿಸಲಾಗಿದೆ.

ಇದನ್ನೂ ಓದಿ: ಕಾರಲ್ಲಿ ಹೋಗೋವಾಗ ಅರ್ಧದಾರೀಲಿ ಪೆಟ್ರೋಲ್ ಖಾಲಿಯಾದ್ರೆ ಈ ದೇಶದಲ್ಲಿ ಜೈಲು ಶಿಕ್ಷೆ!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ (ಜೈಲು) ಅಮಿತಾಭ್ ಗುಪ್ತಾ, ನಿರ್ಬಂಧಗಳು ಮೂಡ್ ಸ್ವಿಂಗ್‌ಗೆ ಕಾರಣವಾಗುತ್ತವೆ. ಕೈದಿಗಳ ಮಾನಸಿಕ ಆರೋಗ್ಯವನ್ನು ನಿಗದಿತ ಶಿಸ್ತಿನ ಮಾನದಂಡಗಳೊಳಗೆ ಕಾಪಾಡಿಕೊಳ್ಳುವುದು ಅವರನ್ನು ಸುಧಾರಿಸುವ ಪ್ರಮುಖ ಅಂಶವಾಗಿದೆ. ಕೈದಿಗಳಿಗೆ ತಮ್ಮ ಆಹಾರದ ಆಯ್ಕೆಗಳನ್ನು ವಿಸ್ತರಿಸುವ ಮೂಲಕ ಒಟ್ಟಾರೆ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದೂ ಅವರು ಹೇಳಿದರು. 

ಇದನ್ನೂ ಓದಿ: ಕಲಬುರಗಿ: ಸೆಂಟ್ರಲ್‌ ಜೈಲಿನಲ್ಲಿ ಗಾಂಜಾ ಸರಬರಾಜಿಗೆ ಯತ್ನ

ಇದನ್ನೂ ಓದಿ:  ಇನ್ಫೋಸಿಸ್‌ ಸಹಕಾರದಲ್ಲಿ ಜೈಲು ಖೈದಿಗಳಿಗೆ ಕಂಪ್ಯೂಟರ್‌ ತರಬೇತಿ: ಐಎಎಸ್‌ ಶಿಲ್ಪಾನಾಗ್‌ ಕಾರ್ಯಕ್ಕೆ ಮೆಚ್ಚುಗೆ

Follow Us:
Download App:
  • android
  • ios