Asianet Suvarna News Asianet Suvarna News

ಕಲಬುರಗಿ: ಸೆಂಟ್ರಲ್‌ ಜೈಲಿನಲ್ಲಿ ಗಾಂಜಾ ಸರಬರಾಜಿಗೆ ಯತ್ನ

ಕೇಂದ್ರ ಕಾರಾಗೃಹದ ಆರಕ್ಷಕ ನಿರೀಕ್ಷಕ ವೆಂಕಟೇಶ ಎಂಬುವವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮುಖ್ಯರಸ್ತೆಯಿಂದ ಓಡೋಡಿ ಬಂದು ಕಾರಾಗೃಹದ ಮುಂದೆ ಒಂದು ಜಾಡು ಹಾಗೂ ಮನೆಯೊರೆಸುವ ಕಸಬರಿಗೆ ಇಟ್ಟು ಓಡಿ ಹೋಗಿದ್ದಾನೆ. 

Attempt to Supply Marijuana in Central Jail at Kalaburagi grg
Author
First Published Nov 17, 2023, 11:30 PM IST

ಕಲಬುರಗಿ(ನ.17):  ನಗರ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದೊಳಗೆ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಸರಬರಾಜು ಮಾಡಲು ಯತ್ನಿಸಿರುವ ಘಟನೆ ನಡೆದಿದೆ.

ಕೇಂದ್ರ ಕಾರಾಗೃಹದ ಆರಕ್ಷಕ ನಿರೀಕ್ಷಕ ವೆಂಕಟೇಶ ಎಂಬುವವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮುಖ್ಯರಸ್ತೆಯಿಂದ ಓಡೋಡಿ ಬಂದು ಕಾರಾಗೃಹದ ಮುಂದೆ ಒಂದು ಜಾಡು ಹಾಗೂ ಮನೆಯೊರೆಸುವ ಕಸಬರಿಗೆ (ಮಾಪ್‌) ಇಟ್ಟು ಓಡಿ ಹೋಗಿದ್ದಾನೆ. 

ಬೀದರ್‌: ಯನಗುಂದಾ ಗ್ರಾಮದಲ್ಲಿ ಹಸಿ ಗಾಂಜಾ ಜಪ್ತಿ, ಇಬ್ಬರ ಬಂಧನ

ಈ ವಿಷಯವನ್ನು ವೆಂಕಟೇಶ ಅವರು ಉಸ್ತುವಾರಿ ಅಧಿಕಾರಿ ವಿಶ್ವನಾಥ ಪಾಟೀಲರ ಗಮನಕ್ಕೆ ತಂದಿದ್ದಾರೆ. ಬಳಿಕ ಆ ಜಾಡು ಮತ್ತು ಮನೆಯೊರೆಸುವ ಕಸಬರಿಗೆಯನ್ನು ಪರಿಶೀಲನೆ ನಡೆಸಿದಾಗ ಮಾಪ್‌ನ ಪೈಪ್‌ನೊಳಗೆ ಗಾಂಜಾ ತುಂಬಿರುವುದು ಕಂಡು ಬಂದಿದೆ. ಆ ಮೂಲಕ ಅಪರಿಚಿತ ವ್ಯಕ್ತಿ ಕಾರಾಗೃಹದೊಳಗೆ ಗಾಂಜಾ ಸರಬರಾಜು ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾರಾಗೃಹದ ವಾರ್ಡನ್‌ ಅಮೋಘ ಸಿದ್ದ ಚಿತ್ತಾಪೂರ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Follow Us:
Download App:
  • android
  • ios