Asianet Suvarna News Asianet Suvarna News

ಉ.ಪ್ರ. ಜೈಲಲ್ಲಿ ಇನ್ನು ಹನುಮಾನ್‌ ಚಾಲೀಸಾ, ಸುಂದರಕಾಂಡ ಪಠಣ!

ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್‌ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.

Hanuman Chalisa, Sundarakanda Chanting in Uttar Pradesh Jail for Personality development of prisoners akb
Author
First Published Nov 28, 2023, 8:14 AM IST

ಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್‌ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ (Prisons Minister Dharmaveera Prajapati) ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಕೈದಿಗಳ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹನುಮಂತನಿಗಿಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತೊಬ್ಬನಿಲ್ಲವಾದ್ದರಿಂದ ಆತನ ಮಂತ್ರಗಳನ್ನು ಪಠಿಸಿ ಅದರ ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಕೈದಿಗಳಿಗೆ ಪ್ರೇರೇಪಿಸಲಾಗುವುದು ಎಂದರು.

ಈ ಹಿನ್ನೆಲೆಯಲ್ಲಿ ಕಾರಾಗೃಹದ ಗ್ರಂಥಾಲಯಗಳಲ್ಲಿ ಧಾರ್ಮಿಕ ಪುಸ್ತಕಗಳ ಲಭ್ಯತೆಯನ್ನು ಹೆಚ್ಚಿಸಲಾಗುವುದು ಮತ್ತು ಆಸಕ್ತಿ ತೋರಿಸಿದವರಿಗೆ ಹನುಮಾನ್‌ ಚಾಲೀಸಾ ಮತ್ತು ಸುಂದರಕಾಂಡದ ಪುಸ್ತಕಗಳನ್ನು ವಿತರಿಸಲಾಗುವುದು ಎಂದೂ ಹೇಳಿದರು. ಈ ಯೋಜನೆ ಮಥುರಾ ಮತ್ತು ಆಗ್ರಾ ಜೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ, ಆದರೆ ಕೈದಿಗಳಿಗೆ ಪಠಣ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರವಾದಿಗೆ ಅವಮಾನ ಮಾಡಿದ ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಯಿಂದ ಕಂಡಕ್ಟರ್ ಹತ್ಯೆ

ಉ.ಪ್ರ.ಲ್ಲಿ 3 ಸಾವಿರ ಅಕ್ರಮ ಲೌಡ್‌ಸ್ಪೀಕರ್ ತೆರವು

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ (Yogi Adityanath government) ಅಕ್ರಮ ಲೌಡ್‌ಸ್ಪೀಕರ್‌ ವಿರುದ್ಧ 1 ತಿಂಗಳ ಆಂದೋಲನ ಆರಂಭಿಸಿದ್ದು, ಸೋಮವಾರ ವಿವಿಧ ಧಾರ್ಮಿಕ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿದ್ದ 3000 ಧ್ವನಿರ್ಧಕಗಳನ್ನು ತೆಗೆದು ಹಾಕಿದೆ. ಬೆಳಗ್ಗೆ 5ರಿಂದ 7ರವರೆಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ನಿರ್ಬಂಧ ಇದ್ದರೂ ಇಷ್ಟು ಹೊತ್ತಿನಲ್ಲಿ ಲೌಡ್‌ಸ್ಪೀಕರ್‌ (illegal loudspeakers) ಹಾಕಿದ್ದನ್ನು ಗಮನಿಸಿ, ಅವನ್ನು ತೆಗೆದು ಹಾಕಲಾಗಿದೆ.

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಸಾವು: ಪತಿಯ ಅನೈತಿಕ ಸಂಬಂಧಕ್ಕೆ ಬಲಿ?

ಹಲಾಲ್‌ ಪ್ರಮಾಣಪತ್ರದ ಉತ್ಪನ್ನ ಹಿಂಪಡೆಯಲು 15 ದಿನ ಗಡುವು

ಲಖನೌ: ನಕಲಿ ಹಲಾಲ್‌ ಪ್ರಮಾಣಪತ್ರ ಪಡೆದ ಉತ್ಪನ್ನಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಹಲಾಲ್‌ ಉತ್ಪನ್ನಗಳನ್ನು ( Halal certificate) ನಿಷೇಧಿಸಿದ್ದ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಅವುಗಳನ್ನು ಅಂಗಡಿಗಳಿಂದ ಹಿಂಪಡೆಯಲು 15 ದಿನಗಳ ಗಡುವು ನೀಡಿ ಆದೇಶಿಸಿದೆ. ಸರ್ಕಾರ ಹೊರಡಿಸಿರುವ ಆದೇಶದ ಅನ್ವಯ, ಮಾಂಸ ಹಾಗೂ ರಫ್ತು ಮಾಡುವ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಹಲಾಲ್‌ ಪ್ರಮಾಣೀಕೃತ ವಸ್ತುಗಳನ್ನು ಇನ್ನು 15 ದಿನದೊಳಗೆ ವಾಪಸು ಪಡೆಯಬೇಕು. ಒಂದು ವೇಳೆ ಉಳಿದಲ್ಲಿ ಅವುಗಳನ್ನು ರೀಬ್ರ್ಯಾಂಡ್ ಮಾಡುವ ಮೂಲಕ ಹಲಾಲ್‌ ಮುದ್ರೆಯನ್ನು ತೆಗೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಆದೇಶವು ಉತ್ತರ ಪ್ರದೇಶದ ಸುಮಾರು 92 ಉತ್ಪಾದಕರಿಗೆ ಅನ್ವಯಿಸಲಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 700-800 ಹಲಾಲ್‌ ದೃಢೀಕರಣ (Halal certification) ಮಾಡಿಕೊಡುವ ಸಂಸ್ಥೆಗಳಿವೆ.

ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್‌ ದಾಖಲು

ಐಎಸ್‌ಐಗೆ ಸೇನಾ ರಹಸ್ಯ ಮಾಹಿತಿ ರವಾನೆ: ಉ.ಪ್ರ.ದಲ್ಲಿ ಇಬ್ಬರ ಸೆರೆ

ಲಖನೌ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ (ISI)ಸೇನಾ ರಹಸ್ಯಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉತ್ತರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಬಠಿಂಡಾ ಮೂಲದ ಅಮೃತ್‌ ಗಿಲ್‌ ಮತ್ತು ಗಾಜಿ಼ಯಾಬಾದ್‌ ಮೂಲದ ರಿಯಾಜು಼ದ್ದೀನ್‌ ಎಂದು ಗುರುತಿಸಲಾಗಿದೆ. ಈ ಪೈಕಿ ಅಮೃತ್ ಗಿಲ್‌ ಆಟೋ ಚಾಲಕನಾಗಿದ್ದು, ಸೇನಾ ಟ್ಯಾಂಕ್‌ಗಳ ಕುರಿತ ರಹಸ್ಯ ಮಾಹಿತಿಯನ್ನು ರಿಯಾಜು಼ದ್ದೀನ್‌ ಮೂಲಕ ಐಎಸ್‌ಐಗೆ ಕಳುಹಿಸಿ ಹಣ ಪಡೆಯುತ್ತಿರುವುದಾಗಿ ಆರೋಪಿಸಲಾಗಿದೆ. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

Follow Us:
Download App:
  • android
  • ios