ಅಂತರ್‌ಧರ್ಮೀಯ ವಿವಾಹ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ: ಮತ್ತೊಂದು ಶ್ರದ್ಧಾ ಪ್ರಕರಣ ಘಟಿಸದಂತೆ ಕ್ರಮ..!
ಅಂತರ್‌ಧರ್ಮೀಯ ವಿವಾಹ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ ಇರಿಸಿದ್ದು, ಮತ್ತೊಂದು ಶ್ರದ್ಧಾ ಪ್ರಕರಣ ಘಟಿಸದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತರ್‌ಧರ್ಮೀಯ ವಿವಾಹಗಳನ್ನು ಸಮಿತಿ ಮಾಹಿತಿ ಸಂಗ್ರಹಿಸಲಿದ್ದು, ಇಂಥ ಮದುವೆ ಆದ ಮಹಿಳೆಗೆ, ಆಕೆಯ ಕುಟುಂಬಕ್ಕೆ ನೆರವು ನೀಡಲು ಮಹಿಳೆ-ಕುಟುಂಬದ ನಡುವೆ ಸಂಧಾನಕಾರನಂತೆ ಕೆಲಸ ಮಾಡಲಿದೆ. ಇದು ದಂಪತಿಗಳ ಮೇಲೆ ಬೇಹುಗಾರಿಕೆ ಎಂದು ಎನ್‌ಸಿಪಿ ಕಿಡಿ ಕಾರುತ್ತಿದೆ.
ಮುಂಬೈ: ಅಂತರ್ಜಾತಿ ವಿವಾಹ (Inter Caste Marriage) ಹಾಗೂ ಅಂತರ್ ಧರ್ಮೀಯ ವಿವಾಹ (Inter Religion Marriage) ಮಾಡಿಕೊಂಡಿರುವ ಜೋಡಿಗಳ (Couple) ಮಾಹಿತಿ ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರ (Maharashtra Government) ಸಮಿತಿಯೊಂದನ್ನು (Committee) ರಚಿಸಿದೆ. ಮಹಾರಾಷ್ಟ್ರ ಮೂಲದ ಶ್ರದ್ಧಾ ವಾಕರ್ (Shraddha Walkar) ಎಂಬ ಹಿಂದೂ ಯುವತಿಯು ಅನ್ಯ ಧರ್ಮೀಯನೊಬ್ಬನ ಪ್ರೇಮಪಾಶಕ್ಕೆ ಸಿಲುಕಿ ದಾರುಣವಾಗಿ ಕೊಲೆಯಾದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಈ ಸಮಿತಿಗೆ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ‘ಅಂತರ್ಜಾತಿ/ಅಂತರ್‌ಧರ್ಮೀಯ ವಿವಾಹ-ಕುಟುಂಬ ಸಮನ್ವಯ ಸಮಿತಿ’ ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವ ಮಂಗಲ್ ಪ್ರಭಾತ್ ಲೋಧಾ, ‘ಶ್ರದ್ಧಾ ವಾಕರ್‌ಳನ್ನು ಆಕೆಯ ಕುಟುಂಬದಿಂದ ದೂರ ಮಾಡಿದ ವ್ಯಕ್ತಿಯೊಬ್ಬ ಹತ್ಯೆ ಮಾಡಿದ. 6 ತಿಂಗಳಾದರೂ ಹತ್ಯೆ ವಿಷಯ ಯಾರಿಗೂ ಗೊತ್ತಿರಲಿಲ್ಲ. ಇನ್ನೊಂದು ಇಂಥ ಪ್ರಕರಣ ನಡೆಯುವುದನ್ನು ನಾವು ಬಯಸುವುದಿಲ್ಲ. ಈ ರೀತಿ ಮದುವೆ ಆಗಿರುವ ಮಹಿಳೆಯರು ಕುಟುಂಬದಿಂದ ದೂರ ಆಗದಂತೆ ನಿಗಾ ವಹಿಸಲಾಗುವುದು’ ಎಂದು ಹೇಳಿದರು.
ಇದನ್ನು ಓದಿ: ಲವ್ ಜಿಹಾದ್ ವಿರೋಧಿ ದಳಕ್ಕೆ ಹಿಂದೂ ಸಂಘಟನೆಗಳ ಆಗ್ರಹ
ಸರ್ಕಾರದ ಈ ಕ್ರಮಕ್ಕೆ ವಿಪಕ್ಷ ಎನ್‌ಸಿಪಿ ಆಕ್ರೋಶ ವ್ಯಕ್ತಪಡಿಸಿದ್ದು, ‘ದಂಪತಿಗಳ ವೈಯಕ್ತಿಕ ಜೀವನದ ಮೇಲೆ ಬೇಹುಗಾರಿಕೆ ನಡೆಸುವ ಅಧಿಕಾರ ಶಿಂಧೆ ಸರ್ಕಾರಕ್ಕೆ ಇಲ್ಲ. ಇದೊಂದು ರೀತಿ ಪ್ರತೀಕಾರ ಕ್ರಮ’ ಎಂದು ಟೀಕಿಸಿದೆ. ಆದರೆ ಇದು ಸೂಕ್ತ ಕ್ರಮ ಎಂದು ಶಿಂಧೆ ಬಣದ ಶಿವಸೇನೆ ಸಮರ್ಥಿಸಿಕೊಂಡಿದೆ.
13 ಜನರ ನಿಗಾ ಸಮಿತಿಯ ಕಾರ‍್ಯನಿರ್ವಹಣೆ ಹೀಗಿರಲಿದೆ..
ಸಮಿತಿಯು ಅಂತರ್ಜಾತಿ ಹಾಗೂ ಅಂತಧರ್ಮೀಯ ವಿವಾಹ ಆಗಿರುವ ಮಹಿಳೆಯರ ಹಾಗೂ ಕುಟುಂಬದಿಂದ ದೂರ ಆಗಿರುವ ಮಹಿಳೆಯರ ಮಾಹಿತಿಗಳನ್ನು ಜಿಲ್ಲಾ ಮಟ್ಟಗಳಲ್ಲಿ ಸಭೆ ನಡೆಸಿ ಸಂಗ್ರಹಿಸುತ್ತದೆ. ಅಗತ್ಯ ಇದ್ದರೆ ಅಂಥವರಿಗೆ ನೆರವು ನೀಡುತ್ತದೆ.
ಇದನ್ನೂ ಓದಿ: Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!
ಅಂತರ್‌ಧರ್ಮೀಯ ವಿವಾಹ ಆದ ಮಹಿಳೆ ಹಾಗೂ ಆಕೆಯಿಂದ ದೂರ ಆಗಿರುವ ಕುಟುಂಬದ ಮಧ್ಯೆ ಸಮಿತಿಯು ಸಂಪರ್ಕ ಸೇತುವಿನಂತೆ ಕೆಲಸ ಮಾಡಲಿದೆ. ಮಹಿಳೆ- ಕುಟುಂಬದ ನಡುವೆ ಸಂಧಾನಕಾರನಂತೆ ವರ್ತಿಸಲಿದೆ. ಸಮಿತಿಯಲ್ಲಿ ಸರ್ಕಾರದ ಹಾಗೂ ಖಾಸಗಿ ಸಂಸ್ಥೆಗಳ 13 ಸದಸ್ಯರು ಇರಲಿದ್ದಾರೆ. ಇವರು ಇಂಥ ಮಹಿಳೆಯರು ಹಾಗೂ ಕುಟುಂಬಕ್ಕೆ ನೆರವು ನೀಡಬಲ್ಲ ಸರ್ಕಾರಿ ಯೋಜನೆಗಳನ್ನು ಗುರುತಿಸಲಿದ್ದಾರೆ.
ಇದನ್ನೂ ಓದಿ: Love jihad: ಲವ್ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ