ಲವ್ ಜಿಹಾದ್ ವಿರೋಧಿ ದಳಕ್ಕೆ ಹಿಂದೂ ಸಂಘಟನೆಗಳ ಆಗ್ರಹ
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಲವ್ ಜಿಹಾದ್ ವಿರೋಧಿ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಎಂದು ಆಗ್ರಹಿಸಿದರು.
ಬೆಂಗಳೂರು(ಡಿ.12): ರಾಜ್ಯದಲ್ಲಿ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗೆ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ವಿಶೇಷ ಪೊಲೀಸ್ ಶಾಖೆ ಸ್ಥಾಪಿಸುವಂತೆ ಹಿಂದೂಪರ ಸಂಘಟನೆಗಳ ನಿಯೋಗ ಭಾನುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದೆ.
ಗೃಹ ಸಚಿವರ ನಿವಾಸಕ್ಕೆ ಭೇಟಿ ನೀಡಿದ್ದ ನಿಯೋಗ ಈ ಮನವಿ ಸಲ್ಲಿಸಿದೆ. ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಮಾತನಾಡಿ, ದೆಹಲಿಯ ಜಿಹಾದಿ ಅಫ್ತಾಬ್ ಹಿಂದೂ ಯುವತಿ ಶ್ರದ್ಧಾ ಬರ್ಬರ ಹತ್ಯೆ ಮಾಡಿದಂತೆ ರಾಜ್ಯದಲ್ಲಿಯೂ ಲವ್ ಜಿಹಾದ್ ಘಟನೆಗಳು ನಡೆಯುತ್ತಿವೆ. ಕಳೆದ ವಾರ ರಾಯಚೂರಿನಲ್ಲಿ ಇಬ್ಬರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿ ಇಸ್ಲಾಂಗೆ ಮತಾಂತರವಾಗಿದ್ದಾರೆ. ಅವರ ಪೋಷಕರು ದೂರು ನೀಡಿದರೂ ಪೊಲೀಸರು ಅಪರಾಧಿಗಳನ್ನು ಬಂಧಿಸಿಲ್ಲ. ಈ ಪ್ರಕರಣವನ್ನು ಮತಾಂತರ ಕಾಯ್ದೆಯಡಿ ನೋಂದಣಿ ಮಾಡಿಲ್ಲ ಎಂದು ಆರೋಪಿಸಿದರು.
ಲವ್ ಜಿಹಾದ್ ಆರೋಪ: ಮದುವೆಗೆ ಒಂದು ತಿಂಗಳು ಇರುವಾಗ ಯುವತಿ ಎಸ್ಕೇಪ್
ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು, ಬೆಂಗಳೂರಿನಲ್ಲಿ ಮುಸಲ್ಮಾನ ಯುವತಿಯರ ಶಾಹಿನ್ ಗ್ಯಾಂಗ್ ಲವ್ ಜಿಹಾದ್ ಮಾಡಲು ಕಾರ್ಯನಿರತವಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಲವ್ ಜಿಹಾದ್ ವಿರೋಧಿ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಎಂದು ಆಗ್ರಹಿಸಿದರು.
ರಣರಾಗಿಣಿ ಮಹಿಳಾ ಶಾಖೆಯ ಭವ್ಯಾ ಗೌಡ, ದುರ್ಗಾ ವಾಹಿನಿಯ ನಂದಿನಿ ರಾಜ, ಶ್ರೀರಾಮ ಸೇನೆಯ ಸುಂದರೇಶ್, ಅಮರನಾಥ ಮತ್ತಿತರರಿದ್ದರು.