Asianet Suvarna News Asianet Suvarna News

Love jihad: ಲವ್‌ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ

* ಲವ್ ಜಿಹಾದ್ ಗೆ ಸಿಲುಕಿ ಹಿಂದೂ ಮಹಿಳೆಯ ನರಳಾಟ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ.
* ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಖಾದರ್, ಉಮಾ ಗಂಭೀರ ಆರೋಪ.
* ಪ್ರೀತಿಸಿ ಮದುವೆ ಆಗಿ ಮೋಸ ಮಾಡಿದ್ದ ಪತಿ ಅಬ್ದುಲ್ ಖಾದರ್ ಅಂದರ್.

The lamentation of a Hindu woman caught in love jihad sat
Author
First Published Nov 18, 2022, 4:13 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.18) : ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಬ್‌ ಟೆಕ್ನೀಷಿಯನ್‌ ಜೊತೆಗೆ ಪ್ರೇಮವಾಗಿದ್ದರಿಂದ ಮೊದಲ ಗಂಡನಿಗೆ ವಿಚ್ಛೇದನ ಕೊಟ್ಟು, ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಮಹಿಳೆ ಈಗ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಕಾಲು ಸ್ವಾಧೀನ ಕಳೆದುಕೊಂಡು ನರಳಾಡುತ್ತಿದ್ದಾರೆ. ಮದುವೆ ನಂತರ ಸುಖವಾಗಿ ನೋಡಿಕೊಳ್ಳುತ್ತೇನೆಂದು ಹೇಳಿದ್ದ ಯುವಕ ಪತ್ನಿಗೆ ಮತಾಂತರ ಆಗುವಂತೆ ಕುರುಕುಳ ನೀಡಿದ್ದಾನೆ. ನಿರಂತರ ಚಿತ್ರಹಿಂಸೆಯ ನಂತರ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆಯೇ ಒಬ್ಬಂಟಿಯಾಗಿ ಬಿಟ್ಟು ಪರಾರಿಯಾಗಿದ್ದಾನೆ.

ಶಿವಮೊಗ್ಗ ಮೂಲದ ಉಮಾ ಎಂಬ ಮಹಿಳೆ ಮೋಸಕ್ಕೆ ಒಳಗಾಗಿದ್ದು, ಅನಾರೋಗ್ಯದಿಂದ ಪರದಾಡುತ್ತಾ ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ಎರಡು ವರ್ಷದ ಹಿಂದೆ ತುಮಕೂರಿನ (Tumakuru) ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್‌ ನರ್ಸ ಕೆಲಸ ಮಾಡುತ್ತಿದ್ದ ಉಮಾ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ (Lab Technician) ಚಿತ್ರದುರ್ಗ ಮೂಲದ ಅಬ್ದುಲ್ ಖಾದೀರ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದೀಗ ಅದೇ ಖಾದರ್ ನಿಂದ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ನೊಂದ ಪತ್ನಿ ಉಮಾರಿಂದ ಗಂಭೀರ ಆರೋಪ ಕೇಳಿ ಬಂದಿದೆ. 

ಇದು ಮತಾಂಧ ರಕ್ಕಸರ ಅಸಲಿ ರೂಪ: ಲವ್ ಜಿಹಾದ್‌ಗೆ ಪ್ರಾಣ ಕೊಟ್ಟ ಹಿಂದೂ ಹೆಣ್ಣು ಮಕ್ಕಳೆಷ್ಟು?

ವಿವಾಹಿತೆ ಉಮಾಗೆ ವಿಚ್ಛೇದನ (Divorse) ಕೊಡಿಸಿ ಮರು ವಿವಾಹವಾಗಿದ್ದ ಅಬ್ದುಲ್ ಖಾದರ್ (Abdul Khadir), ಮದುವೆಯಾಗಿ ವರ್ಷದ ಬಳಿಕ ಉಮಾಗೆ ಅನಾರೋಗ್ಯ ಕಾಣಿಸಿಕೊಂಡಾಗ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಚಿತ್ರದುರ್ಗಕ್ಕೆ ಹೋಗಿದ್ದಾನೆ. ನಂತರ ಎರಡು ಕಾಲು ನಿಷ್ಕ್ರಿಯಗೊಂಡು ಹಾಸಿಗೆ ಹಿಡಿದ ಉಮಾಳಿಗೆ ಉಸಿರುಗಟ್ಟಿಸಿ ಹತ್ಯೆ ಮಾಡಲು ಸಹ ಯತ್ನಿಸಿದ್ದನಂತೆ. ಇದರ ಜೊತೆಗೆ ಖಾದರ್ ವಿವಿಧ ರೀತಿಯಲ್ಲಿ ಚಿತ್ರಹಿಂಸೆ (Torture) ನೀಡಿ, ಖಾಸಗಿ ಅಂಗಗಳ ಮೇಲೂ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಉಮಾ (Uma) ಆರೋಪ ಮಾಡಿದ್ದಾರೆ. ಮುಸ್ಲಿಂ (Muslim) ಧರ್ಮಕ್ಕೆ ಮತಾಂತರ (Convertion) ಆಗುವಂತೆ ಒತ್ತಡ ಹೇರಿದ್ದ ಖಾದರ್ ಅವರ ಉಪಟಳಕ್ಕೆ ಬೇಸತ್ತು, ಶಿವಮೊಗ್ಗದ ಪರಿಚಿತರಾದ ವಿಶ್ವನಾಥ್ ಗೆ ಮಾಹಿತಿ ನೀಡಿದ್ದಾರೆ. ನಂತರ ವಿಶ್ವನಾಥ್‌ ಬಂದು ಉಮಾಳ ಬಗ್ಗೆ ಆಸ್ಪತ್ರೆಯಲ್ಲಿ ಕಾಳಜಿ ಮಾಡುತ್ತಿದ್ದಾರೆ.

ಉಮಾಳ ನೋವು ಕೇಳಿ ಮಾನವೀಯತೆಯ ದೃಷ್ಟಿಯಿಂದ ತೀರ್ಥಹಳ್ಳಿಯಿಂದ ಬಂದ ದಲಿತ ಸಂಘಟನೆ ಸಂಚಾಲಕ ವಿಶ್ವನಾಥ್ (Vishwanath) ಚಿತ್ರದುರ್ಗ ಪೊಲೀಸರ ನೆರವು ಪಡೆದು ಜಿಲ್ಲಾ ಆಸ್ಪತ್ರೆಗೆ ಉಮಾಳನ್ನು ಸ್ಥಳಾಂತರ ಮಾಡಿದ್ದಾರೆ. ಸದ್ಯ ಉಮಾ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿತ್ರದುರ್ಗ ಮಹಿಳಾ (Women) ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಂದ ಅಬ್ದುಲ್ ಖಾದರ್ ಬಂಧನ (Arrest) ವಾಗಿದೆ. ಚಿತ್ರದುರ್ಗ ನಗರದ ನೆಹರು ಬಡಾವಣೆಯಲ್ಲಿ ಘಟನೆ ನಡೆದಿದ್ದು, ಹಿಂದು ಮುಂದಿಲ್ಲದ ಸಂತ್ರಸ್ತ ಮಹಿಳೆಗೆ ನ್ಯಾಯ (Justice) ಸಿಗಲಿ ಎಂದು ಆಗ್ರಹಿಸಿದ್ದಾರೆ.

ಮದುವೆಯಾಗಿ ಈ ದಂಪತಿಗೆ ಒಂದು ಮಗುವಿದ್ದು, ಆ ಮಗುವನ್ನು ಆರೋಪಿ ಅಬ್ದುಲ್ ಖಾದರ್ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ. ಉಮಾ ಎರಡು ಕಾಲು ನಿಷ್ಕ್ರಿಯಗೊಂಡ (Inactive) ನಂತರ ದಿಕ್ಕೇ ತೋಚಂದತಾಗಿದೆ. ಪ್ರೀತಿಸಿ 2ನೇ ಮಹಿಳೆ ಆಗಿದ್ದರಿಂದ ಮೊದಲೇ ಕುಟುಂಬಸ್ಥರ ನೆರವಿಲ್ಲದ ಅನಾಥವಾಗಿರುವ ಸಂತ್ರಸ್ತ ಮಹಿಳೆಗೆ ಆದಷ್ಟು ಬೇಗ ನ್ಯಾಯ ಸಿಗಬೇಕಿದೆ. ಆರೋಪಿ ಪತಿ ಅಬ್ದುಲ್ ಖಾದರ್ ಗೆ ಪೊಲೀಸರು ಬುದ್ಧಿ ಕಲಿಸಿ ಸಂತ್ರಸ್ತ ಮಹಿಳೆಯ ಆರೋಗ್ಯದತ್ತ (Health) ಗಮನಹರಿಸಲು ಸೂಚಿಸಬೇಕಿದೆ.
 

Follow Us:
Download App:
  • android
  • ios