7 ಗಂಟೆ ಕಾಲ ಜನರ ಕತ್ತಲಲ್ಲಿಟ್ಟು ಬೆಕ್ಕು ಸಾವು ವಿದ್ಯುತ್ ಪ್ರಸರಣ ಟವರ್ ಮೇಲೇರಿದ್ದ ಬೆಕ್ಕು ಪರಿಣಾಮ ತಾಂತ್ರಿಕ ದೋಷ, ವಿದ್ಯುತ್ ಸಂಪರ್ಕ ಕಡಿತ

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ ಬುಧವಾರ ಬೆಕ್ಕೊಂದು ಪ್ರಸರಣ ಟವರ್ ಮೇಲೆ ಹತ್ತಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪಿಂಪ್ರಿ ಚಿಂಚ್‌ವಾಡ್‌ನ (Pimpri Chinchwad) ಭೋಸಾರಿ (Bhosari), ಅಕುರ್ಡಿ ((Akurdi) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಗೆ ಕಡಿತಗೊಂಡ ವಿದ್ಯುತ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪುನರಾರಂಭವಾಯಿತು. 

ಪಿಟಿಐ ಸುದ್ದಿಸಂಸ್ಥೆಯ ವರದಿಗಳ ಪ್ರಕಾರ, ಬೆಕ್ಕು ಪ್ರಸರಣ ಟವರ್ ಮೇಲೆ ಏರಿ ಉಂಟಾದ ವಿದ್ಯುತ್‌ ತೊಂದರೆಯಿಂದ ಸುಮಾರು 60,000 ಗ್ರಾಹಕರು ವಿದ್ಯುತ್ ಕಡಿತದಿಂದ ತೊಂದರೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಭೋಸರಿ, ಅಕುರ್ಡಿ ಮತ್ತು ಪಿಂಪ್ರಿ ಚಿಂಚ್‌ವಾಡ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಗೆ ವಿದ್ಯುತ್ ಕಡಿತಗೊಂಡ ವಿದ್ಯುತ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪುನರಾರಂಭವಾಗಿತ್ತು. 

ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ

ಬುಧವಾರ ಬೆಳಗ್ಗೆ ಭೋಸರಿಯಲ್ಲಿನ ಟ್ರಾನ್ಸ್‌ಫಾರ್ಮರ್‌ನ 22KV ಯಾರ್ಡ್‌ಗೆ ಬೆಕ್ಕು ಪ್ರವೇಶಿಸಿದ ನಂತರ ಭೋಸರಿ, ಅಕುರ್ಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್ ಕಡಿತವನ್ನು ಅನುಭವಿಸಿದವು ಎಂದು ಮಹಾರಾಷ್ಟ್ರ (Maharashtra) ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MSEDCL) ನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಬಿಡುಗಡೆ ಮಡಿದ ಪ್ರಕಟಣೆಯ ಪ್ರಕಾರ ಬೆಕ್ಕು ವಿದ್ಯುತ್ ಉಪಕರಣಗಳ ಮೇಲೆ ಏರಿತು. ಇದು ತಾಂತ್ರಿಕ ದೋಷಕ್ಕೆ ಕಾರಣವಾಯಿತು. ಅಲ್ಲದೇ ಈ ಅನಾಹುತದಲ್ಲಿ ಆದರೆ ಬೆಕ್ಕು ಪ್ರಾಣ ಬಿಟ್ಟಿದೆ ಎಂದು ತಿಳಿಸಿದೆ. ನಂತರ ಪರ್ಯಾಯ ವಿದ್ಯುತ್ ಉಪಕೇಂದ್ರಗಳನ್ನು ಬಳಸಿಕೊಂಡು ಅಧಿಕಾರಿಗಳ ಪ್ರಯತ್ನದಿಂದ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ
ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವಿಗೀಡಾದ ಘಟನೆ ನಡೆದಿತ್ತು. ಬೆಕ್ಕಿನಿಂದ ಕಡಿತಕ್ಕೊಳಗಾದ ಎರಡು ತಿಂಗಳ ನಂತರ ಮಹಿಳೆಯರಿಬ್ಬರು ರಾಬಿಸ್‌ನಿಂದ ಸಾವಿಗೀಡಾದ ಘಟನೆ ಆಂಧ್ರಪ್ರದೇಶ ರಾಜ್ಯದ ವೇಮುಲವಾಡದಲ್ಲಿ (Vemulavada) ನಡೆದಿತ್ತು. ಇಲ್ಲಿನ ಮೊವ್ವಾ ಮಂಡಲಕ್ಕೆ (Movva mandal) ಸೇರುವ ವೇಮುಲವಾಡ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೇಮುಲವಾಡದ (Vemulavada) ಗ್ರಾಮದ ದಲಿತವಾಡ (Dalitawada) ಕಾಲೋನಿಯ ನಿವಾಸಿಗಳಾದ 64 ವರ್ಷದ ಸಾಲಿ ಕಮಲಾ (Saali Kamala) ಹಾಗೂ 43 ವರ್ಷದ ಬೊಡ್ಡು ನಾಗಮಣಿ (Boddu Nagamani) ಮೃತಪಟ್ಟವರು. 

ಬೆಕ್ಕು ಕಚ್ಚಿದ ಕೂಡಲೇ ಇವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ವೈದ್ಯರು ಟೆಟನಸ್‌ (ಟಿಟಿ) ಚುಚ್ಚುಮದ್ದನ್ನು ನೀಡಿದ್ದರು. ಜೊತೆಗೆ ವೈದ್ಯರು ಬೇರೆ ಔಷಧಿಯನ್ನು ಕೂಡ ನೀಡಿದ್ದರು. ಅಲ್ಲದೇ ವೈದ್ಯರು ಇವರ ಆರೋಗ್ಯವನ್ನು ನಿಯಮಿತವಾಗಿ ಗಮನಿಸುತ್ತಿದ್ದರು. ಅದಾಗ್ಯೂ ಈ ಮಹಿಳೆಯರು ನಂತರದಲ್ಲಿ ಅನಾರೋಗ್ಯಕ್ಕೀಡಾಗಿದ್ದರು. ಹಾಗೂ ವಿಜಯವಾಡದ (Vijayawada) ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಅವರ ಆರೋಗ್ಯ ತೀವ್ರ ಹದ್ದಗೆಟ್ಟಿದ್ದು ಆಸ್ಪತ್ರೆಯಲ್ಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇವರಿಬ್ಬರೂ ಬೆಕ್ಕಿನಿಂದ ಕಡಿತಕ್ಕೊಳಗಾದ ನಂತರ ರಾಬಿಸ್‌ (rabies) ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಒಂದೇ ಪ್ರದೇಶದ ಇಬ್ಬರು ಮಹಿಳೆಯರ ದಿಢೀರ್ ಸಾವಿನಿಂದಾಗಿ ಗ್ರಾಮದಲ್ಲಿ ವಿಷಾದದ ವಾತಾವರಣವಿದೆ ಎಂದು ಪೊಲೀಸರು ಹೇಳಿದ್ದಾರೆ.