ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ

  • ಯಾವ ಬೇಧವೂ ತೋರದೇ ಬೆಕ್ಕಿನ ಮರಿಗೂ ಹಾಲುಡಿಸುವ ಶ್ವಾನ
  • ಶ್ವಾನದ ಪ್ರೀತಿಗೆ ಇಂಟರ್‌ನೆಟ್‌ ಫಿದಾ
  • ತನ್ನ ಮರಿಗಳ ಜೊತೆ ಬೆಕ್ಕಿನ ಮರಿಗೂ ಪ್ರೀತಿಯ ಅಪ್ಪುಗೆ
     
Mama dog feeds kitten along with her puppies Watch adorable video akb

ತಾಯಿ ಪ್ರೀತಿಗೆ ಮಿತಿ ಇರುವುದಿಲ್ಲ. ಆದಾಗ್ಯೂ ತನ್ನ ಮಕ್ಕಳಂತೆ ಬೇರೆಯವರ ಮಕ್ಕಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವವರು ಸಿಗುವುದು ವಿರಳ. ಆದರೆ ಇಲ್ಲೊಂದು ಶ್ವಾನ ತನ್ನದು ಮತ್ತೊಬ್ಬರದು ಎಂಬ ಬೇಧವಿಲ್ಲದೇ ತನ್ನ ಮರಿಗಳ ಜೊತೆಯಲ್ಲೇ ಒಂದು ಬೆಕ್ಕಿನ ಮರಿಗೂ ಹಾಲುಡಿಸುತ್ತಿದೆ. ತಾನು ತನ್ನದು ಎಂದು ಕಿತ್ತಾಡುವ ಮನುಷ್ಯರಿಗೆ ನಮ್ಮನ್ನು ನೋಡಿ ಬುದ್ಧಿ ಕಲಿಯಿರಿ ಎಂದು ಹೇಳುವಂತಿದೆ ಈ ವಿಡಿಯೋ. ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಒಳ್ಳೆ ತಾಯಿ, ತನ್ನ ಮರಿಗಳೊಂದಿಗೆ ಹಸಿದ ಬೆಕ್ಕಿನ ಮರಿಗೂ ಆಹಾರ ನೀಡುತ್ತಿದೆ ಎಂದು ಬರೆದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ಮನೆ ಮುಂದಿನ ಖಾಲಿ ಜಾಗದಲ್ಲಿ ಮಲಗಿಕೊಂಡಿದ್ದು, ಅದರ ಎರಡು ಮರಿಗಳು ತಾಯಿಯ ಹಾಲನ್ನು ಕುಡಿಯುತ್ತಿರುತ್ತವೆ. ಕೆಲವೇ ಕ್ಷಣಗಳಲ್ಲಿ,ಬೆಕ್ಕೊಂದು ಅಲ್ಲಿಗೆ ಬಂದು ನಾಯಿಯನ್ನೊಮ್ಮೆ ದಿಟ್ಟಿಸಿ ನೋಡಿ ನಾಯಿ ಮರಿಗಳೊಂದಿಗೆ ಸೇರಿಕೊಂಡು ಅದೂ ಕೂಡ ತಾಯಿಯ ಹಾಲನ್ನು ಕುಡಿಯಲು ಶುರು ಮಾಡುತ್ತದೆ. 

ಎರಡು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಬೆಕ್ಕಿನ ಮರಿ ನಾಯಿಯನ್ನು ಒಂದು ಕ್ಷಣ ಹೇಗೆ ನೋಡುತ್ತದೆಂದರೆ,  ನಾನು ಹಾಲು ಕುಡಿಯುವೆ ನೀನು ಏನು ಅಂದುಕೊಳ್ಳಬೇಡ ಎಂದು ಹೇಳುವಂತಿದೆ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ನಾಯಿಯೊಂದಿಗೆ ಬೆಕ್ಕಿನ ಚೆಲ್ಲಾಟ... ನಿದ್ರಿಸಲು ಬಿಡದೇ ಕಾಟ.. ಮುದ್ದಾದ ವಿಡಿಯೋ ವೈರಲ್‌

ಇದೇ ರೀತಿಯ ಘಟನೆ ನಮ್ಮ ಮನೆಯಲ್ಲೂ ನಡೆದಿತ್ತು. ನನ್ನ ಸಹೋದರ ನಮ್ಮ ಮನೆಗೆ ಮೂರು ವಾರಗಳ ಬೆಕ್ಕಿನ ಮರಿಯನ್ನು ತಂದಿದ್ದನು. ನನ್ನ ನಾಯಿಯು ಅದೇ ವಯಸ್ಸಿನ ಮರಿಗಳನ್ನು ಹೊಂದಿತ್ತು. ನಾವು ಏನು ಮಾಡಬೇಕೆಂದು ತಿಳಿಯದೆ, ನಾಯಿಮರಿಗಳೊಂದಿಗೆ ಬೆಕ್ಕಿನ ಮರಿಯನ್ನು ಬಿಟ್ಟಿದ್ದೆವು. ನಂತರ ಅದು ನಾಯಿಯ ಹಾಲನ್ನು ಕುಡಿಯಲು ಶುರು ಮಾಡಿತ್ತು. ನಮ್ಮ ನಾಯಿ ಕೂಡ ಬೆಕ್ಕಿನ ಮರಿಯನ್ನು ದೂರು ಮಾಡದೇ ಅದಕ್ಕೂ ಹಾಲುಡಿಸಿತು ಎಂದು ಈ ವಿಡಿಯೋ ನೋಡಿದ ಬಳಿಕ ನೋಡುಗರೊಬ್ಬರು ಅವರ ಮನೆಯಲ್ಲಾದ ಘಟನೆಯನ್ನು ಕಾಮೆಂಟ್ ಮಾಡಿದ್ದಾರೆ.

Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ

Latest Videos
Follow Us:
Download App:
  • android
  • ios