ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿತ್ತು. ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಅತೀಕ್ ಆರ್ಭಟ ಜೋರಾಗಿತ್ತು. ರಿಯಲ್ ಎಸ್ಟೇಟ್ ದಂಧೆಗಾಗಿ ಹಲವರ ಜಮೀನು ಕಸಿದುಕೊಳ್ಳುವುದು ಅತೀಕ್‌ಗೆ ಹೊಸದೇನಲ್ಲಿ. ಈ ರೀತಿ ಕಜ್ಬಾ ಮಾಡುತ್ತಾ, ಸೋನಿಯಾ ಗಾಂಧಿ ಸಂಬಂಧಿ ಜಮೀನನ್ನೇ ಕಬ್ಜಾ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ.

ನವದೆಹಲಿ(ಏ.22): ಮಾಫಿಯಾ ಡಾನ್, ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹತ್ಯೆ ಬಳಿಕ ಈತನ ಕರಾಳ ಮುಖದ ಒಂದೊಂದೆ ಕತೆಗಳು ಹೊರಬರುತ್ತಿದೆ. ಅತೀಕ್ ಅಹಮ್ಮದ್ ರಿಯಲ್ ಎಸ್ಟೇಡ್ ದಂಧೆಗೆ ಹಲವು ಅಮಾಯಕರು ಬಲಿಯಾಗಿದ್ದಾರೆ. ಹಲವರು ಜಮೀನು ಸದ್ದಿಲ್ಲದೆ, ಮಾತಿಲ್ಲದೆ, ದುಡ್ಡಿಲ್ಲದೆ ಅತೀಕ್ ಕೈಸೇರಿದೆ. ಹೀಗೆ ಯುಪಿಎ ಅಧಿಕಾರದಲ್ಲಿದ್ದಾಗಲೇ ಅತೀಕ್ ಅಹಮ್ಮದ್ ಅಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಸಂಬಂಧಿಯ ಜಮೀನನ್ನು ಅತೀಕ್ ಕಬ್ಜಾ ಮಾಡಿದ್ದ. ಬಳಿಕ ಸೋನಿಯಾ ಗಾಂಧಿ, ಯುಪಿಎ ಸಚಿವರ ಮಧ್ಯಪ್ರವೇಶದಿಂದ ಜಮೀನನ್ನು ಅತೀಕ್ ಮರಳಿ ನೀಡಿದ್ದ ಘಟನೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

2007ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಯ ಯುಪಿಎ ಅಧಿಕಾರದಲ್ಲಿತ್ತು. ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ, ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿಕೂಟಕ್ಕೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದಲ್ಲಿ ಅತೀಕ್ ಅಹಮ್ಮದ್ ಗ್ಯಾಂಗ್‌ಸ್ಟರ್ ಆಗಿ ಹಲವು ಅಮಾಯಕರ ಕತೆ ಮುಗಿಸಿದ್ದ. ರಿಯಲ್ ಎಸ್ಟೇಟ್ ದಂಧೆ ಮೂಲಕ ಅಮಾಯಕರ ಜಮೀನಿನ ಮೇಲೆ ಕಣ್ಣು ಹಾಕಿ ಬೆದರಿಸಿ, ಹತ್ಯೆ ಮಾಡಿ ಜಮೀನು ಕಜ್ಬಾ ಮಾಡಿಕೊಳ್ಳುತ್ತಿದ್ದ. ಹೀಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಅತೀಕ್ ಅಹಮ್ಮದ್ ಸೋನಿಯಾ ಗಾಂಧಿ ಸಂಬಂಧಿ ವೀರ್ ಗಾಂಧಿ ಜಮೀನನ್ನು ಕಬ್ಜಾ ಮಾಡಿದ್ದ.

ಅತೀಕ್‌ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಅಲ್‌ಖೈದಾ: ಗ್ಯಾಂಗ್‌ಸ್ಟರ್‌ನನ್ನು ಹುತಾತ್ಮ ಎಂದ ಉಗ್ರ ಸಂಘಟನೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪತಿ ಫಿರೋಜ್‌ ಗಾಂಧಿ ಕುಟುಂಬಸ್ಥರಾದ ವೀರ್ ಗಾಂಧಿ ಅವರ ಹೆಸರಲ್ಲಿ ಪ್ರಯಾಗ್‌ರಾಜ್‌ನ ಐಷಾರಾಮಿ ಸಿವಿಲ್‌ ಲೈನ್ಸ್‌ನಲ್ಲಿದ್ದ ಭಾರೀ ಮೊತ್ತದ ಆಸ್ತಿಯೊಂದಿತ್ತು. ಇದರ ಪಕ್ಕದಲ್ಲೇ ಇದ್ದ ಜಾಗವನ್ನು ಖರೀದಿಸಿದ ಅತೀಕ್‌ ಬಳಿಕ ಬಲವಂತವಾಗಿ ಮೀರಾ ಗಾಂಧಿ ಅವರ ಆಸ್ತಿಯನ್ನೂ ಕ್ರಿಮಿನಲ್‌ಗಳನ್ನು ಬಳಸಿ ಕಬಳಿಸಿದ್ದ. ಅತ್ಯಂತ ಬೆಲೆಬಾಳುವ ಜಮೀನು ಇದಾಗಿತ್ತು. ಈ ಜಮೀನನ ಮೇಲೆ ಕಣ್ಣು ಹಾಕಿದ ಅತೀಕ್ ಅಹಮ್ಮದ್ ರಾತ್ರೋರಾತ್ರಿ ಜಮೀನು ತನ್ನ ವಶಕ್ಕೆ ಪಡೆದಿದ್ದ. ಅತೀಕ್ ಅಹಮ್ಮದ್ ಕಜ್ಬಾ ಮಾಡಿದ ಜಮೀನನ್ನು ಮಾಲೀಕರು ಮರಳಿದ ಕೇಳಿದ ಉದಾಹರಣೆ ಕಡಿಮೆ. ಅತೀಕ್ ವಿರುದ್ಧ ದೂರು ನೀಡಿದವರು ದೂರು ವಾಪಸ್ ಪಡೆದವರೇ ಹೆಚ್ಚು. ದೂರು ವಾಪಸ್ ಪಡೆಯದವರು ಬಾಕಿ ಉಳಿದಿಲ್ಲ. 

ವೀರ್ ಗಾಂಧಿ ಜಮೀನು ಅತೀಕ್ ಕಬ್ಜಾ ಮಾಡಿದ ಬೆನ್ನಲ್ಲೇ ವೀರ್ ಗಾಂಧಿ ದೂರು ನೀಡುವ ಸಾಹಸಕ್ಕೆ ಹೋಗಿಲ್ಲ. ಕಾರಣ ದೂರು ನೀಡಿದರೆ ಪೊಲೀಸರಿಂದ ಪರಿಹಾರ ಸಿಗುವ ಮೊದಲೇ ಅತೀಕ್ ಕೆಂಗಣ್ಣಿಗೆ ಗುರಿಯಾಗುವ ಅತಂಕವಿತ್ತು. ಹೀಗಾಗಿ ವೀರ್ ಗಾಂಧಿ ನೇರವಾಗಿ ಸೋನಿಯಾ ಗಾಂಧಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಜ್ಬಾ ಮಾಡಿರುವ ಜಮೀನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.

'ಅತೀಕ್‌ ಅಹ್ಮದ್‌ ನನ್ನ ಸೋದರ..' ಎಂದಿದ್ದ ವ್ಯಕ್ತಿ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕ!

ಸೋನಿಯಾ ಗಾಂಧಿ ಪ್ರಯಾಗರಾಜ್ ಕಾಂಗ್ರೆಸ್ ನಾಯಕಿ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ರಿತಾ ಬಹುಗುಣ ಜೋಶಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರೀತಾ ಬಹುಗುಣ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದಾರೆ. ಬಳಿಕ ಉತ್ತರ ಪ್ರದೇಶ ಸರ್ಕಾರ ಮಧ್ಯಪ್ರವೇಶ ಮಾಡಿ ವೀರ್ ಗಾಂಧಿಗೆ ಜಮೀನು ವಾಪಸ್ ಕೊಡಿಸಿದ್ದಾರೆ.

ಜಮೀನು ವಾಪಸ್ ಬಂದ ಬಳಿಕ ಅತೀಕ್ ಗ್ಯಾಂಗ್‌ನಿಂದ ಉಪಟಳ ಅರಿತ ವೀರ ಗಾಂಧಿ ಪ್ರಯಾಗರಾಜ್‌ನಲ್ಲಿದ್ದ ಎಲ್ಲಾ ಜಮೀನು ಮಾರಾಟ ಮಾಡಿ, ಮುಂಬೈಗೆ ಬಂದು ನೆಲೆಸಿದರು.