ತಮಿಳುನಾಡಿನಲ್ಲಿ ಆರೆಸ್ಸೆಸ್ ಮೆರವಣಿಗೆ ಮುಂದೂಡಿಕೆ, ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ!
ತಮಿಳುನಾಡಿನ 50 ಸ್ಥಳಗಳಲ್ಲಿ ಸಮಾವೇಶ ನಡೆಸಲು ಆರೆಸ್ಸೆಸ್ ಅನುಮತಿ ಕೇಳಿತ್ತು. ಆದರೆ, ನವೆಂಬರ್ 6 ರಂದು ಮದ್ರಾಸ್ ಹೈಕೋರ್ಟ್ ಕೇವಲ 44 ಸ್ಥಳಗಳಲ್ಲಿ ಮಾತ್ರವೇ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಿತ್ತು. ಆದರೆ, ಮೆರವಣಿಗೆ ಮುಂದೂಡಿಕೆ ಮಾಡಿರುವ ಆರೆಸ್ಸೆಸ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.
ಚೆನ್ನೈ (ನ. 5): ತಮಿಳುನಾಡು ರಾಜ್ಯದಾದ್ಯಂತ ಭಾನುವಾರ ನಡೆಸಲು ಉದ್ದೇಶಿಸಲಾಗಿದ್ದ ಮೆರವಣಿಗೆಯನ್ನು ನಡೆಸದೇ ಇರಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿರ್ಧಾರ ಮಾಡಿದೆ. ಮೈದಾನ ಹಾಗೂ ಸ್ಟೇಡಿಯಂಗಳಲ್ಲಿ ಮಾತ್ರವೇ ಸಮಾವೇಶ ಹಾಗೂ ಮೆರವಣಿಗೆಯನ್ನು ನಡೆಸಬೇಕು ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಆದೇಶ ನೀಡಿತ್ತು. ಇದರ ಬೆನ್ನಲ್ಲಿಯೇ ನಿರ್ಧಾರ ಮಾಡಿರುವ ಆರೆಸ್ಸೆಸ್, ಈ ಆದೇಶವನ್ನು ನಾವು ಒಪ್ಪುತ್ತಿಲ್ಲ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದ ಮದ್ರಾಸ್ ಹೈಕೋರ್ಟ್, ಆರೆಸ್ಸೆಸ್‌ಗೆ ಷರತ್ತುಬದ್ಧ ಅನುಮತಿಯನ್ನು ಮಾತ್ರವೇ ನೀಡಿತ್ತು. ತಮಿಳುನಾಡಿನಲ್ಲಿ ಭಾನುವಾರ ಕೇವಲ 44 ಸ್ಥಳಗಳಲ್ಲಿ ಮಾತ್ರವೇ ರೂಟ್ ಮಾರ್ಚ್ ನಡೆಸಬಹುದು ಎಂದು ಕೋರ್ಟ್ ಹೇಳಿತ್ತು. ಇದಕ್ಕೂ ಮುನ್ನ ಸ್ಥಳೀಯ ಸರ್ಕಾರ, ಆರೆಸ್ಸೆಸ್‌ನ 50 ಸ್ಥಳಗಳಲ್ಲಿ ಮೆರವಣಿಗೆ ಮಾಡುವ ಬೇಡಿಕೆಗೆ ಕೇವಲ ಮೂರು ಸ್ಥಳಗಳಲ್ಲಿ ಮಾತ್ರವೇ ಅನುಮತಿ ನೀಡಿತ್ತು. ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶದ ವಿವರದಲ್ಲಿ, ಮೆರವಣಿಗೆ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಬೇಕು ಇಲ್ಲದೇ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಕಾಶ್ಮೀರವಾಗಲಿ, ಪಶ್ಚಿಮ ಬಂಗಾಳ, ಕೇರಳ ಹಾಗೂ ದೇಶದ ಇನ್ನಿತರ ರಾಜ್ಯಗಳಲ್ಲಿ ರೂಟ್ ಮಾರ್ಚ್ ಮುಕ್ತವಾಗಿ ನಡೆಯುತ್ತದೆ. ನವೆಂಬರ್ 6 ರಂದು ತಮಿಳುನಾಡಿನಲ್ಲಿ ರೂಟ್ ಮಾರ್ಚ್ ಮಾಡುತ್ತಿಲ್ಲ. ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಆರೆಸ್ಸೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗುಪ್ತಚರ ಮಾಹಿತಿಯ ಮೇರೆಗೆ ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರ್‌ಕೋಯಿಲ್ ಸೇರಿದಂತೆ ಆರು ಕೋಮು ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು.
ಗುಪ್ತಚರ ಸಂಸ್ಥೆಗಳ ವರದಿಗಳಲ್ಲಿ ತನಗೆ ಪ್ರತಿಕೂಲ ಏನೂ ಕಂಡುಬಂದಿಲ್ಲ ಎಂದು ತೀರ್ಪು ನೀಡಿರುವ ನ್ಯಾಯಾಲಯ, ಎರಡು ತಿಂಗಳ ನಂತರ ಇತರ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಪಡೆಯಲು ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿತ್ತು. ದೀಪಾವಳಿಗೂ ಒಂದು ದಿನ ಮುನ್ನ ಕೊಯಮತ್ತೂರಿನ ದೇವಸ್ಥಾನದ ಬಳಿಕ ಕಾರ್ ಸ್ಫೋಟ ಕಂಡಿತ್ತು. ಇದರಲ್ಲಿ ಎನ್‌ಐಎಯಿಂದ ತನಿಖೆಗೆ ಒಳಪಟ್ಟಿದ್ದ ವ್ಯಕ್ತಿ ಜಮೇಶಾ ಮುಬಿನ್ ಸಾವು ಕಂಡಿದ್ದ. ಪ್ರಸ್ತುತ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡುತ್ತಿದೆ. ಜಮೇಶಾ ಮುಬಿನ್, ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದ ಎನ್ನುವ ಆತಂಕ ಶುರುವಾಗಿದೆ.
ಸಿಎಂ ಬೊಮ್ಮಾಯಿ ಒರಿಜಿನಲ್ RSS ಅಲ್ಲ; ಮುಸ್ಲಿಂ ಮೀಸಲಾತಿ ಕಡಿಮೆ ಮಾಡಲು ಸಾಧ್ಯವಿಲ್ಲ: CM Ibrahim
ಅಕ್ಟೋಬರ್ 2 ರಂದು ನ್ಯಾಯಾಲಯವು ಅನುಮತಿ ನೀಡಿದ್ದರೂ ತಮಿಳುನಾಡು ಸರ್ಕಾರವು ಆರೆಸ್ಸೆಸ್ ಮೆರವಣಿಗೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಇದರ ಬೆನ್ನಲ್ಲಿಯೇ ಆರೆಸ್ಸೆಸ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತು. ಆ ಬಳಿಕ, ರಾಜ್ಯದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಅವರು ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಮತ್ತು ಪೊಲೀಸ್ ಕಮಿಷನರ್‌ಗಳಿಗೆ ನೀಡಿದ ಸುತ್ತೋಲೆಯಲ್ಲಿ ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳಿಗೆ ಒಳಪಟ್ಟು ಅನುಮತಿ ನೀಡುವಂತೆ ಸೂಚನೆ ನೀಡಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧದ ನಂತರ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಕೋರ್ಟ್, ಆರೆಸ್ಸೆಸ್ ಮಾರ್ಚ್‌ಗೆ ಅನುಮತಿ ನೀಡಲು ನಿರಾಕರಿಸಿತ್ತು.
Chikkaballapura: ಹಿಂದೂಗಳು ಕೋಮುವಾದಿಗಳಲ್ಲ ಜಾತ್ಯತೀತರು
ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ವಿದುತಲೈ ಚಿರುತೈಗಲ್ ಕೂಡ ಅಕ್ಟೋಬರ್ 2 ರಂದೇ ಶಾಂತಿಗಾಗಿ ಮಾನವ ಸರಪಳಿ ನಡೆಸಲು ಅನುಮತಿ ಕೋರಿತ್ತು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ, ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಮತ್ತು ಗಾಂಧಿಯವರ ಮರಣವನ್ನು ಆರೆಸ್ಸೆಸ್ ಹೇಗೆ ಆಚರಿಸಿತು ಎಂಬುದನ್ನು ಪಕ್ಷವು ಉಲ್ಲೇಖಿಸಿದೆ. ಈ ಕಾರ್ಯಕ್ರಮಕ್ಕೆ ಗಾಂಧಿ ಜಯಂತಿಯನ್ನು ಆಯ್ಕೆ ಮಾಡಿಕೊಂಡಿದ್ದನ್ನು ಅದು "ಅನ್ಯಾಯ" ಎಂದು ಕರೆದಿತ್ತು.