ಕಾಂಗ್ರೆಸ್‌‌ನ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ. ನಾಯರು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಬಡಿದಾಡಿಕೊಂಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳ ವಿರುದ್ದವೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಡಿದಾಡಿಕೊಂಡಿದ್ದಾರೆ.ನಾಯಕರ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. 

ಭೋಪಾಲ್(ಜ.30) ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಮೈತ್ರಿ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ನಿರಾಕರಿಸುತ್ತಿದೆ. ಇತ್ತ ನಿತೀಶ್ ಕುಮಾರ್ ಕೈಕೊಟ್ಟಿದ್ದಾರೆ. ಇದೆಲ್ಲದ ನಡುವೆ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ ಎರಡು ಬಣಗಳು ಬಡಿದಾಡಿಕೊಂಡಿದೆ. ಕುರ್ಚಿ ಕೈಯಲ್ಲಿ ಹಿಡಿದು ಮಾರಾಮಾರಿ ನಡೆಸಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧವೂ ಅವಾಚ್ಯಶಬ್ದಗಳಿಂದ ನಿಂದಿಸಿ ಬಡಿದಾಡಿಕೊಂಡ ವಿಡಿಯೋ ಒಂದು ಬಾರಿ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡಿರುವ ಮಧ್ಯಪ್ರದೇಶ ಬಿಜೆಪಿ ನಾಯಕ ನರೇಂದ್ರ ಸಾಲುಜ, ಕಾಂಗ್ರೆಸ್ ನಾಯಕ ಕಮಲನಾಥ್ ವಿರುದ್ಧ ಆರೋಪ ಮಾಡಿದ್ದಾರೆ.

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ಬೆಂಬಲಿಗರು ದಿಗ್ವಿಜಯ್ ಸಿಂಗ್ ಬಣದ ನಾಯಕರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಿಗ್ವಿಜಯ್ ಸಿಂಗ್ ವಿರುದ್ಧವೂ ಘೋಷಣೆ ಕೂಗಿದ್ದಾರೆ ಎಂದು ನರೇಂದ್ರ ಸಾಲುಜ ಹೇಳಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

Hanuman Flag Row : ಹನುಮನಿಗಾಗಿ ಹರಿದೇಬಿಟ್ಟಿತ್ತಲ್ಲ ರಕ್ತ..! ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಧ್ವನಿಸಿದ ಧಿಕ್ಕಾರ..!

ನರೇಂದ್ರ ಸಾಲುಜ ಹಂಚಿಕೊಂಡಿರುವ ಎರಡು ವಿಡಿಯೋಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ನಾಯಕರು ಬಡಿದಾಡಿಕೊಳ್ಳುವ ದೃಶ್ಯವಿದೆ. ಈ ವೇಳೆ ಓರ್ವ ನಾಯಕ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಕುರ್ಚಿ ಹಿಡಿದು ಜಗಳಕ್ಕೆ ನಿಂತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ನಾಯರ ಗುಂಪುಗಳು ಅವಾಚ್ಯ ಶಬ್ದಗಳಿಂದ ಜರೆಯುತ್ತಿರುವ ದೃಶ್ಯವಿದೆ. ಕಾಂಗ್ರಸ್ ವಕ್ತಾರ ಶಹರ್ಯಾರ್ ಖಾನ್ ಸೇರಿದಂತೆ ಕೆಲ ನಾಯಕರು ಬಡಿದಾಟಲ್ಲಿ ಕಾಣಿಸಿಕೊಂಡಿದ್ದಾರೆ.

Scroll to load tweet…

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಣಗಳ ನಡುವಿನ ತಿಕ್ಕಾಟ ಹೆಚ್ಚಾಗಿದೆ. 2023ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 230 ಸ್ಥಾನಗಳ ಪೈಕಿ 66 ಸ್ಥಾನ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇತ್ತ ಬಿಜೆಪಿ 163 ಸ್ಥಾನ ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಸೋಲಿನ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶಗಳು ಹೆಚ್ಚಾಗಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿಸಿದ್ದ ಹೈಕಮಾಂಡ್‌ಗೂ ತೀವ್ರ ನಿರಾಸೆಯಾಗಿತ್ತು. ಇದೇ ವೇಳೆ ಹೈಕಮಾಂಡ್ ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿತ್ತು. 

ಕಾಂಗ್ರೆಸ್ ಕುತಂತ್ರದ ಮಾತು ಹೇಳಿದ್ಯಾರು..? ಯಾಕೆ..? ಹೇಗೆ ನಡೆದಿದೆ I.N.D.I.A ಜೋಡೋ ಸರ್ಕಸ್?