Ariyalur truck explosion: ತಮಿಳುನಾಡಿನ ಅರಿಯಲೂರು ಬಳಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ, ಸಿಲಿಂಡರ್‌ಗಳು ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್‌ಗಳ ಸಾಗಿಸುತ್ತಿದ್ದ ಟ್ರಕ್ ಸ್ಫೋಟ
ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ಕೊಂದು ಪಲ್ಟಿಯಾಗಿ ಸ್ಫೋಟಗೊಂಡಿಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ತಮಿಳುನಾಡಿನ ಅರಿಯಲೂರು ಬಳಿಯ ವಾರಣವಾಸಿಯಲ್ಲಿ ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ ಸಿಲಿಂಡರ್‌ಗಳ ಜೊತೆ ಲಾರಿಯೂ ಬೆಂಕಿಗಾಹುತಿಯಾಗಿದೆ.
ಅರಿಯಲೂರು ಬಳಿಯ ವಾರಣವಾಸಿಯಲ್ಲಿ ಘಟನೆ: ಟ್ರಕ್ ಚಾಲಕ ಪಾರು
ಟ್ರಕ್ ಚಾಲಕ ತಿರುವಿನಲ್ಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಾಗ ಎಲ್‌ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ. ಈ ವೇಳೆ ಟ್ರಕ್‌ನಲ್ಲಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಟ್ರಕ್ ಚಾಲಕ ಟ್ರಕ್‌ನಿಂದ ಹಾರಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆತನನ್ನು ಅರಿಯಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
2 ಕಿಲೋ ಮೀಟರ್‌ವರೆಗೆ ಕೇಳಿದ ಸ್ಫೋಟದ ಸದ್ದು
ಈ ಟ್ರಕ್ ತಮಿಳುನಾಡಿನ ತಿರುಚಿಯಿಂದ ಅರಿಯಲೂರ್‌ಗೆ ಸಿಲಿಂಡರ್ ಸಾಗಿಸುತ್ತಿತ್ತು. ಈ ಸಿಲಿಂಡರ್ ಸ್ಫೋಟಗಳ ಸದ್ದು ಎಷ್ಟು ತೀವ್ರವಾಗಿತ್ತೆಂದರೆ ಸುಮಾರು 2 ಕಿಲೋ ಮೀಟರ್‌ವರೆಗೂ ಕೇಳಿಸಿದೆ ಎಂದು ವರದಿಯಾಗಿದೆ. ಬೆಂಕಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ಚಿಮ್ಮಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಕೂಡಲೇ ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಾಗಿದೆ.
ಘಟನೆಯ ಹಿನ್ನೆಲೆ ತಂಜಾವೂರು, ತಿರುಚಿ ಮತ್ತು ಇತರ ಸ್ಥಳಗಳಿಂದ ಅರಿಯಲೂರಿಗೆ ಹೋಗುವ ಎಲ್ಲಾ ವಾಹನಗಳನ್ನು ವಿ. ಕೈಕಟ್ಟಿ ಮೂಲಕ ಬೇರೆಡೆಗೆ ಮಾರ್ಗ ತಿರುಗಿಸಲಾಗುತ್ತಿದೆ. ಅರಿಯಲೂರು ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಟೈರ್ ಸ್ಫೋಟ ಬಳಿಕ ಕಾರಿಗೆ ಬೆಂಕಿ : ಮಹಿಳೆ ಸಜೀವ ದಹನ
ಇದನ್ನೂ ಓದಿ: ವೇಗವಾಗಿ ಸಾಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಹದ್ದು: ಗಾಜು ಒಡೆದು ಲೋಕೋ ಪೈಲಟ್‌ಗೆ ಗಾಯ
