ಯುವತಿಯ ಅಶ್ಲೀಲ ವಿಡಿಯೋ ನೋಡಿ ನಿಯಂತ್ರಣ ತಪ್ಪಿದ ಟ್ರಕ್, ಭೀಕರ ಅಪಘಾತದಲ್ಲಿ ಓರ್ವ ಸಾವು, ಟ್ರಕ್ ಚಾಲಕನ ಅಜಾಗರೂಕತೆಯಿಂದ ಕಾರು ನಜ್ಜುಗುಜ್ಜಾಗಿದೆ. ಈ ಪ್ರಕರಣ ಸಂಬಂಧ ನ್ಯಾಯಾಲಯ ಟ್ರಕ್ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮ್ಯಾಂಚೆಸ್ಟರ್ (ಸೆ.21) ಟ್ರಕ್‌ನಲ್ಲಿ ಸಾಕಷ್ಟು ದೂರ ಸಾಗಬೇಕಿದೆ. ಪ್ರಯಾಣದ ನಡುವೆ ಟ್ರಕ್ ಚಾಲಕ ಮೊಬೈಲ್ ಫೋನ್ ತೆಗೆದು ರೀಲ್ಸ್, ವಿಡಿಯೋ ಸ್ಕ್ರಾಲ್ ಮಾಡುತ್ತಾ, ಕೆಲ ವಿಡಿಯೋಗಳನ್ನು ಅಸ್ವಾದಿಸುತ್ತಾ ಡ್ರೈವಿಂಗ್ ಮಾಡಿದ್ದಾನೆ. ಹೀಗೆ ಸ್ಕ್ರಾಲ್ ಮಾಡುತ್ತಿರುವಾಗ ಕೆಲ ಅಶ್ಲೀಲ ವಿಡಿಯೋಗಳು ಕಾಣಿಸಿಕೊಂಡಿದೆ. ಡ್ರೈವಿಂಗ್ ನಡುವೆ ಈ ವಿಡಿಯೋಗಳನ್ನು ನೋಡುತ್ತಾ ಸಾಗಿದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಟ್ರಕ್ ನೇರವಾಗಿ ಕಾರಿಗೆ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಮಾತ್ರವಲ್ಲ, 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಗ್ಲೆಂಡ್‌ನ ಬೂಟಲ್‌ನಲ್ಲಿ ನಡೆದಿದೆ.
ವಿಡಿಯೋದಿಂದ ತಪ್ಪಿತು ಚಾಲಕನ ನಿಯಂತ್ರಣ, ಲಾರಿ ನಿಯಂತ್ರಣ
46 ವರ್ಷದ ನೈಲ್ ಪ್ಯಾಟ್ ಟ್ರಕ್ ಮೂಲಕ ಸಾಗುವಾಗ ಈ ಅಪಘಾತ ನಡೆದಿದೆ. ಸರಕು ಸಾಗಿಸುವ ಟ್ರಕ್ ಚಾಲಕನಾಗಿದ್ದ ನೈಲ್ ಪ್ಯಾಟ್ ಹಲವು ನಗರಗಳಿಗೆ ಸರಕು ಸಾಗಿಸುತ್ತಿದ್ದ. ಅತೀ ದೂರದ ಪ್ರಯಾಣದ ನಡುವೆ ನೈಲ್ ಪ್ಯಾಟ್ ಮೊಬೈಲ್ ಮೂಲಕ ವಿಡಿಯೋಗಳು, ರೀಲ್ಸ್ ನೋಡುವು ಹವ್ಯಾಸ ಬೆಳೆಸಿಕೊಂಡಿದ್ದ. ಆದರೆ ಇದರ ನಡುವೆ ಅಶ್ಲೀಲ ವಿಡಿಯೋ ನೋಡಿದ ನೈಲ್ ಪ್ಯಾಟ್ ನಿಯಂತ್ರಣ ತಪ್ಪಿದ್ದು ಮಾತ್ರವಲ್ಲ, ಟ್ರಕ್ ನಿಯಂತ್ರಣವೂ ತಪ್ಪಿದೆ. ಪರಿಣಾಮ ಲ್ಯಾನ್ಸ್‌ಶೈರ್ ಬಳಿ ಭೀಕರ ಅಪಘಾತ ಸಂಭವಿಸಿತ್ತು.
ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ
ನೈಲ್ ಪ್ಯಾಟ್ ಪ್ರಯಾಣದ ವೇಳೆ ಎಕ್ಸ್, ಟಿಕ್‌ಟಾಕ್, ವ್ಯಾಟ್ಸಾಪ್, ಯೂಟ್ಯೂಬ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳನ್ನು ವೀಕ್ಷಿಸುತ್ತಾ ಸಾಗುತ್ತಿದ್ದ. ಇದು ಪ್ರತಿ ದಿನದ ಪ್ರಯಾಣದ ಹವ್ಯಾಸವಾಗಿತ್ತು. ಯಾವಾಗ ಯುವತಿಯ ವಿಡಿಯೋ ಒಂದು ನೋಡಿ ಇದೀಗ ಜೈಲು ಸೇರುವಂತಾಗಿದೆ.
ಲಾರಿ ಚಾಲಕನ ದುಸ್ಸಾಹಸಕ್ಕೆ ಬಲಿಯಾದ 46 ವರ್ಷದ ವ್ಯಕ್ತಿ
46 ವರ್ಷದ ಡೇನಿಯಲ್ ಆ್ಯಟ್ಚಸನ್ ತನ್ನ ಹ್ಯುಂಡೈ ಕೋನಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ದಿಢೀರ್ ಆಗಿ ನುಗ್ಗಿ ಬಂದ ಲಾರಿ ಕಾರನ್ನು ಅಪ್ಪಚ್ಚಿ ಮಾಡಿದೆ. ಭೀಕರ ಅಪಘಾತದಲ್ಲಿ ಡೇನಿಯಲ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮೇ.17, 2024ರಂದು ಈ ಅಪಘಾತ ನಡೆದಿತ್ತು. ಇದೀಗ ಪ್ರಕರಣದ ತೀರ್ಪು ಪ್ರಕಟಗೊಂಡಿದೆ.
ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದೂ ಅತ್ತ ಲಾರಿ ಚಾಲಕ
ಕೋರ್ಟ್ ವಿಚಾರಣೆ ವೇಳೆ ಲಾರಿ ಚಾಲಕ ತಪ್ಪಾಗಿದೆ ಕ್ಷಮಿಸಿ ಎಂದು ಅತ್ತಿದ್ದಾನೆ. ಆದರೆ ಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ರಸ್ತೆಯಲ್ಲಿ ನಿಮಯ ಉಲ್ಲಂಘಿಸಿ ಓರ್ವನ ಬಲಿ ಪಡೆಯಲಾಗಿದೆ. ವಿಡಿಯೋ, ಸೋಶಿಯಲ್ ಮೀಡಿಯಾ ಕಾರಣಗಳನ್ನು ಹೇಳಬೇಡಿ. ವಿಡಿಯೋ ನೋಡುವು, ಮೊಬೈಲ್ ಬಳಕೆ ಮಾಡುವುದು ಚಾಲನೆ ಮಾಡುವ ಸಂದರ್ಭದಲ್ಲಿ ಅಲ್ಲ. ಈ ಪ್ರಕರಣಕ್ಕೆ ಕ್ಷಮೆ ಇಲ್ಲ, ಶಿಕ್ಷೆ ಪ್ರಮಾಣದಲ್ಲೂ ವಿನಾಯಿತಿ ಇಲ್ಲ. ಅಚಾನಕ್ಕಾಗಿ ಈ ಘಟನೆ ಸಂಭವಿಸಿರಬಹುದು. ಆದರೆ ಚಾಲಕನಿಗೆ ತಾನು ಮಾಡುತ್ತಿರುವ ತಪ್ಪಿನ ಬಗ್ಗೆ ಅರಿವಿದೆ. ಅದು ಲೈಸೆನ್ಸ್ ಪಡೆಯುವಾಗ, ಬಳಿಕ ಚಾಲನೆ ಮಾಡುವಾಗಲು ಅರಿವಿದೆ. ಆದರೂ ನಿರ್ಲಕ್ಷ್ಯ , ಅಜಾಗರೂಕತೆ ತೋರಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದಾರೆ. 10 ವರ್ಷದ ಜೈಲು ಶಿಕ್ಷೆ, 7 ವರ್ಷ ಡ್ರೈವಿಂಗ್ ಬ್ಯಾನ್ ಸೇರಿದಂತೆ ಹಲವು ಕಠಿಣ ಶಿಕ್ಷೆ ವಿಧಿಸಲಾಗಿದೆ.
ಅಸ್ಥಿ ವಿಸರ್ಜಿಸಿ ಹಿಂದಿರುಗುತ್ತಿದ್ದ ಕಾರ್ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಸಾವು

