Asianet Suvarna News Asianet Suvarna News

ಪ್ರೇಯಸಿಗೆ ಸರ್ಪ್ರೈಸ್ ನೀಡೋದಾಗಿ ಕರೆದು ಕಣ್ಣಿಗೆ ಬಟ್ಟೆ ಕಟ್ಟಿ, ಸರಪಳಿ ಬಿಗಿದು ಬೆಂಕಿ ಹಚ್ಚಿ ಕೊಲೆ

ಹುಟ್ಟುಹಬ್ಬಕ್ಕೆ ಅಚ್ಚರಿ ನೀಡುವ ನೆಪದಲ್ಲಿ ಪ್ರೇಯಸಿಯನ್ನು ಆಹ್ವಾನಿಸಿ ಕಣ್ಣಿಗೆ ಬಟ್ಟೆ ಕಟ್ಟಿ, ಸರಪಳಿ ಬಿಗಿದು, ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಸುಟ್ಟ ಭೀಕರ ಘಟನೆಯೊಂದು ಚೆನ್ನೈನ ತಲಂಬೂರ್ ಬಳಿಯ ಕೆಲಂಬಕ್ಕಂನಲ್ಲಿ ನಡೆದಿದೆ.

Lover calling his girlfriend as surprise then blindfolded, chained,  stabbed by knife  and set on fire in Chennai akb
Author
First Published Dec 26, 2023, 8:49 AM IST

ಚೆನ್ನೈ: ಹುಟ್ಟುಹಬ್ಬಕ್ಕೆ ಅಚ್ಚರಿ ನೀಡುವ ನೆಪದಲ್ಲಿ ಪ್ರೇಯಸಿಯನ್ನು ಆಹ್ವಾನಿಸಿ ಕಣ್ಣಿಗೆ ಬಟ್ಟೆ ಕಟ್ಟಿ, ಸರಪಳಿ ಬಿಗಿದು, ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಸುಟ್ಟ ಭೀಕರ ಘಟನೆಯೊಂದು ಚೆನ್ನೈನ ತಲಂಬೂರ್ ಬಳಿಯ ಕೆಲಂಬಕ್ಕಂನಲ್ಲಿ ನಡೆದಿದೆ. 

ಸಂತ್ರಸ್ತ ಯುವತಿ ನಂದಿನಿ (24) ಮತ್ತು ಆರೋಪಿ ಪಾಂಡಿ ಮಹೇಶ್ವರಿ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳಾಗಿದ್ದು, ಸ್ನೇಹಿತರಾಗಿದ್ದರು. ಈ ನಡುವೆ ಇಬ್ಬರ ನಡುವೆ ಪ್ರೀತಿ ಬೆಳೆದು ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಂಡಿ ಮಹೇಶ್ವರಿ ಲಿಂಗ ಬದಲಾವಣೆ ಮಾಡಿಕೊಂಡು ವೆಟ್ರಿಮಾರನ್‌ ಆಗಿದ್ದ.

ಸಂಬಂಧ ಕಡಿದುಕೊಳ್ಳೋಣ ಎಂದ ಪ್ರೇಯಸಿ: ಅತ್ಯಾಚಾರವೆಸಗಿ ಕೊಂದೇಬಿಟ್ಟ ಪ್ರಿಯಕರ

ಈ ನಡುವೆ ಇತ್ತೀಚೆಗೆ ನಂದಿನಿ ಬೇರೊಬ್ಬರ ಜೊತೆ ಪ್ರೀತಿ ಬೆಳೆಸಿಕೊಂಡಿದ್ದಾಳೆ ಎಂಬ ಶಂಕೆ ವೆಟ್ರಿಮಾರನ್‌ಗೆ ಕಾಡಿತ್ತು. ಈ ಬಗ್ಗೆ ಇಬ್ಬರ ನಡುವೆ ಜಗಳವೂ ಆಗಿತ್ತು ಎನ್ನಲಾಗಿದೆ. ಹೀಗಾಗಿ ನಂದಿನಿಯನ್ನು ಹತ್ಯೆ ಮಾಡಲು ಯೋಜಿಸಿದ ವೆಟ್ರಿಮಾರನ್‌, ನಂದಿನಿಗೆ ಹುಟ್ಟುಹಬ್ಬದ ಸರ್‌ಪ್ರೈಸ್‌ ಕೊಡುವುದಾಗಿ ಮನೆಗೆ ಆಹ್ವಾನಿಸಿದ್ದ.

ಹೀಗೆ ಬಂದ ನಂದಿನಿ ಕಣ್ಣಿಗೆ ಬಟ್ಟೆ ಕಟ್ಟಿ, ಬಳಿಕ ಆಕೆಯ ಇಡೀ ದೇಹವನ್ನು ಚೈನ್‌ನಿಂದ ಸುತ್ತಿದ್ದಾನೆ. ಬಳಿಕ ಬ್ಲೇಡ್‌ನಿಂದ ಆಕೆಯ ದೇಹವನ್ನು ಕತ್ತರಿಸಿ ಬಳಿಕ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಮನೆಯಿಂದ ಪರಾರಿಯಾಗಿದ್ದಾನೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿ ನೆರೆ ಹೊರೆಯವರು ಬಾಗಿಲು ಒಡೆದು ನೋಡಿದಾಗಿ ನಂದಿನಿ ಚೀರಾಡುತ್ತಿದ್ದದು ಕಂಡುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ವೆಟ್ರಿಮಾರನ್‌ನನ್ನು ವಶಕ್ಕೆ ಪಡೆಯಲಾಗಿದೆ.

Bengaluru Crime: ನಂಬಿಕೆ ಇಲ್ಲದವನ ಪ್ರೀತಿ ನಂಬಿಕೊಂಡು ಕೊಲೆಯಾದ ನೇಪಾಳಿ ಸುಂದರಿ

Follow Us:
Download App:
  • android
  • ios