Bengaluru Crime: ನಂಬಿಕೆ ಇಲ್ಲದವನ ಪ್ರೀತಿ ನಂಬಿಕೊಂಡು ಕೊಲೆಯಾದ ನೇಪಾಳಿ ಸುಂದರಿ
ಅವಳು ಸುಂದರಿ.. ಅವನು ಅನುಮಾನದ ಪಿಶಾಚಿ.
ನೇಪಾಳಿ ಲವರ್ಸ್ ಮಧ್ಯೆ ಇದ್ದಿದ್ದು ಪ್ರೀತಿ ಮಾತ್ರ ಅಲ್ಲ.
ಅವನ ಅನುಮಾನಕ್ಕೆ ಅಮಾಯಕ ಜೀವ ಬಲಿ.
ಅದೊಂದು ಫೋನ್ ಕಾಲ್ ಅವಳ ಅಂತ್ಯಕ್ಕೆ ಕಾರಣವಾಯ್ತು.
ಬೆಂಗಳೂರು (ಡಿ.7): ಯಾರೇ ನೋಡಿದರೂ ವಾವ್ ಎನ್ನುವ ಚೆಲುವು ಹೊಂದಿದ್ದ ನೇಪಾಳದ ಸುಂದರಿಯ ಮನೆಯಲ್ಲಿ ಬಡತನ. ಆದರೆ, ಕೈಯಲ್ಲಿ ಬ್ಯೂಟೀಷಿಯನ್ ಕಸುಬು ಬಿಟ್ಟರೆ ಹಣಕಾಸಿನ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ದೇಶವನ್ನು ಬಿಟ್ಟು ದುಡಿಮೆಗಾಗಿ ನಾಲ್ಕು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಸ್ಪಾದಲ್ಲಿ ಕೆಲಸ ಮಾಡಲು ಆರಂಭಿಸಿದ ಈ ಸುಂದರಿ ತನ್ನದೇ ದೇಶದ ಅನುಮಾನ ಪಿಶಾಚಿ ಯುವಕನನ್ನು ಪ್ರೀತಿಸಿ, ತನ್ನ ಪ್ರೇಮಿಯಿಂದ ಕೊಲೆಯಾಗಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ.
ನೇಪಾಳದಿಂದ (Nepala) ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ (Unisex spa) ಬ್ಯೂಟಿಷಿಯನ್ ಕೆಲಸ ಮಾಡಿಕೊಂಡು, ಬೆಂಗಳೂರಿನ ರಾಮಮೂರ್ತಿ ನಗರದ ಟಿ.ಸಿ. ಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನದೇ ದೇಶದ ಪ್ರೇಮಿಯೊಡನೆ ಲಿವಿಂಗ್ ಟುಗೆದರ್ (Living Together) ರೀತಿಯಲ್ಲಿ ಜೋಡಿ ಹಕ್ಕಿಗಳಾಗಿ ವಾಸ ಮಾಡುತ್ತಿದ್ದರು. ಇನ್ನು ಪ್ರೇಮಿಗಳ ನಡುವೆ ಸುಂದರಿಯ ಜನ್ಮದಿನದಂದು ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಮೂರ್ತಿನಗರದ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23) (Krishnakumari) ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಆಕೆಯನ್ನು ಪ್ರೀತಿಸಿದ ನೇಪಾಳ ಮೂಲದ ಸಂತೋಷ್ ದಾಮಿ(27) (Santhosh Dami)ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿ ಸಂತೋಷ್ ದಾಮಿ ಟಿಸಿ ಪಾಳ್ಯದಲ್ಲಿ ಬಾರ್ಬರ್ (Barber) ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂತ ತಿಳಿದು ಬಂದಿದೆ.
ಬೆಂಗಳೂರು: ಪ್ರೇಮಿಗಳ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರಿಗೆ ಬಂದ ಮೇಲೆ ಅರಳಿದ್ದ ಪ್ರೀತಿ: ಸುಂದರಿ ಕೃಷ್ಣಕುಮಾರಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗಿದ್ದರೆ, ಆಕೆ ಬಗ್ಗೆ ಮಾತನಾಡುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಆದರೆ, ಆಕೆ ಒಂದು ತಪ್ಪು (False) ಮಾಡಿಬಿಟ್ಟಿದ್ದಳು. ಅದೇನೆಂದರೆ ತನ್ನದೇ ದೇಶದ ಒಬ್ಬ ಪಾಪಿಯನ್ನ ಪ್ರೀತಿಸಿದ್ದಳು. ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರ ನಡುವೆ ಸ್ನೇಹ (Freiendship) ಶುರುವಾಗಿತ್ತು. ಕೊನೆಗೆ ಅದೇ ಸ್ನೇಹ ಅವರಿಬ್ಬರ ಮಧ್ಯೆ ಸಲುಗೆ ಬೆಳೆಯಲು ಕಾರಣವಾಗಿ, ಸಲುಗೆ ಅತಿಯಾದ ಪರಿಣಾಮ ಕೆಲವೇ ದಿನಗಳಲ್ಲಿ ಪ್ರೇಮಿಗಳಾದರು. ಮದುವೆಯಾಗದೇ ಒಂದೇ ಕೊಠಡಿಯಲ್ಲಿ ಸಂಸಾರ (Family) ಮಾಡುತ್ತಿದ್ದರು. ಆದರೆ, ಲಿವಿಂಗ್ ಟುಗೆದರ್ ಕರ್ಮಕಾಂಡವೇ ಆ ಸುಂದರಿಯ ಅಂತ್ಯಕ್ಕೆ ಕಾರಣವಾಗಿ ಬಿಟ್ಟಿದೆ.
ಜಗಳ ಕೊಲೆಯಲ್ಲಿ ಅಂತ್ಯ: ಇನ್ನು ಮಂಗಳವಾರ ಕೃಷ್ಣ ಕುಮಾರಿ ಜನ್ಮದಿನ (Birthday) ಇದ್ದುದರಿಂದ ಆರೋಪಿ ದಾಮಿ ತನ್ನ ಸ್ನೇಹಿತರನ್ನೆಲ್ಲಾ ಕರೆದು ದೊಡ್ಡದಾಗಿ ಪಾರ್ಟಿ (Party) ಆಯೋಜಿಸಿದ್ದನು. ಆದರೆ, ಆ ಪಾರ್ಟಿಯಲ್ಲಿ ಹುಡುಗಿಗೆ ಒಂದು ಫೋನ್ ಬರುತ್ತದೆ. ಅಲ್ಲಿಂದ ಆರಂಭವಾದ ಇಬ್ಬರ ನಡುವಿನ ಜಗಳ ರಾತ್ರಿಯೆಲ್ಲಾ ಮುಂದುವರೆದಿದೆ. ನಂತರ, ಇದೇ ಜಗಳ ಬೆಳಗಾಗುವಷ್ಟರಲ್ಲಿ ಕೃಷ್ಣಕುಮಾರಿ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಬೆಳಗ್ಗೆ ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾದ ತಕ್ಷಣ ಘಟನಾ ಸ್ಥಳಕ್ಕೆ ರಾಮೂರ್ತಿನಗರ ಠಾಣೆಯ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣದ ಆರೋಪಿ ಹುಡುಗಿಯ ಪ್ರೇಮಿಯನ್ನು ಬಂಧಿಸಿದ್ದಾರೆ. ಕೊಲೆ ಮಾಡಿದ್ದರ ಕುರಿತು ಆಕೆಯ ಪ್ರಿಯಕರನನ್ನ ಬಂಧಿಸಿ ಕರೆದೊಯ್ದ ಪೊಲೀಸರು ತಮ್ಮದೇ ರೀತಿಯಲ್ಲಿ ವರ್ಕ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಆದರೆ, ಇನ್ನು ಅಸಲಿ ವಿಚಾರಣೆಗೆ ಬರುವ ಮುನ್ನವೇ ಸಂತೋಷ ದಾಮಿ ಸತ್ಯವನ್ನು ಬಾಯಿ ಬಿಡಲು ಮುಂದಾದನು.
ಇಬ್ಬರನ್ನು 'ಲವ್' ಮಾಡಿದ ಪೋರ: ಹುಡುಗಿ ಕರೆದಳು ಅಂತ ಹೋಗಿ ಹೆಣವಾದ
ಅನುಮಾನದ ಪಿಶಾಚಿಯಾಗಿದ್ದ ಪ್ರೇಮಿ: ಸಂತೋಷ್ ದಾಮಿ ನಿಜಕ್ಕೂ ಅನುಮಾನದ ಪಿಶಾಚಿ ಆಗಿದ್ದನು. ಆದರೆ, ಒಂದೇ ದೇಶವಾಗೊದ್ದರಿಂದ ಅಂಥವನಿಗೆ ಈ ಕೃಷ್ಣಕುಮಾರಿ ಮನಸಾರೆ ಪ್ರೀತಿಸಿ (Love) ಲಿವಿಂಗ್ ಟುಗೆದರ್ ಇರುವ ಮಟ್ಟಿಗೆ ನಂಬಿಕೆ ಇಟ್ಟುಕೊಂಡುದ್ದಳು. ಆದರೆ, ಈತ ಅವಳನ್ನ ಮನಸಾರೆ ಇಷ್ಟ ಪಡೋದಕ್ಕಿಂತ ಹೆಚ್ಚಾಗಿ ಅವಳ ಮೇಲೆ ಅನುಮಾನ (Doubt) ಪಡುತ್ತಿದ್ದ. ಪ್ರತೀ ನಿತ್ಯ ಹೊಡೆದು ಬಡೆಯೋದು ಮಾಡುತ್ತಿದ್ದನು. ಅದೆಲ್ಲವನ್ನೂ ಆಕೆ ಸಹಿಸಿಕೊಂಡಿದ್ದಳು. ಆದರೆ, ಅವತ್ತು ಈ ಸಂತೋಷ ಬರ್ತಡೇ ಪಾರ್ಟಿ ಆಯೋಜಿಸಿದ್ದ. ಆ ಪಾರ್ಟಿಯಲ್ಲಿ ಕೃಷ್ಣ ಕುಮಾರಿಗೆ ಒಂದು ಫೋನ್ ಕಾಲ್ (Phone Call) ಬಂತು ಅಷ್ಟೇ. ಆ ವೇಳೆ ಆಕೆ ಫೋನಿನಲ್ಲಿ ಮಾತನಾಡಿದ್ದನ್ನೇ ನೆಪಮಾಡಿಕೊಂಡ ಆ ಕಿರಾತಕ ಆಕೆಗೆ ಚಿತ್ರ ಹಿಂಸೆ ಕೊಟ್ಟು ಕೊಂದೇಬಿಟ್ಟಿದ್ದಾನೆ.
ನಂಬಿಕೆ ಇಲ್ಲದ ಪ್ರೀತಿಗೆ ಆಯಸ್ಸು ಕಡಿಮೆ: ಪ್ರೇಯಸಿಯನ್ನ ಕೊಂದ ತಪ್ಪಿಗೆ ಪ್ರಿಯತಮ ಜೈಲು ಪಾಲಾದರೆ, ಇತ್ತ ಅದೇ ಖತರ್ನಾಕ್ ಪ್ರೇಮಿಯನ್ನ ನಂಬಿದ್ದ ತಪ್ಪಿಗೆ ಪ್ರೇಯಸಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ. ಅದಕ್ಕೆ ಹೆಳೋದು ಪ್ರೀತಿ ಅಂದರೆ ನಂಬಿಕೆ- ಪ್ರೀತಿ ಅಂದರೆ ಕಮಿಟ್ಮೆಂಟ್ ಅಂತ. ಇವೆರಡೂ ಇಲ್ಲವೆಂದರೆ ಪ್ರೀತಿಗೆ ಅರ್ಥವೇ ಇರೋದಿಲ್ಲ. ಜೊತೆಗೆ ಅಂತಹ ಪ್ರೀತಿಗೆ ಹೆಚ್ಚು ಆಯಸ್ಸು ಇರೋದಿಲ್ಲ.