ಉತ್ತರಖಂಡ ದುರಂತಕ್ಕೆ ದೇವಿ ಶಾಪ; ಗ್ರಾಮಸ್ಥರು ನೀಡಿದ ಎಚ್ಚರಿಕೆ ನಿಜವಾಯಿತಾ?

ಉತ್ತರಖಂಡ ಹಿಮಸ್ಫೋಟ ಹಾಗೂ ಪ್ರವಾಹದಲ್ಲಿ 34 ಮೃತದೇಹ ಹೊರತೆಗೆಯಲಾಗಿದೆ.  ಇನ್ನೂ 170 ಮಂದಿ ನಾಪತ್ತೆಯಾಗಿದ್ದಾರೆ. ಈ ಮಹಾ ದುರಂತಕ್ಕೆ ಕಾರಣಗಳು ಹಲವಿದೆ. ಆದರೆ ಗ್ರಾಮಸ್ಥರು ಈ ದುರಂತಕ್ಕೆ ದೇಶಿ ಶಾಪವೇ ಕಾರಣ ಎಂದಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ.

Locals blame removal of village temple for uttarakhand glacier tragedy ckm

ಉತ್ತರಖಂಡ(ಫೆ.10):  ಕಳೆದ ವರ್ಷ ಕೊರೋನಾ ಆಘಾತ ನೀಡಿದರೆ, ಈ ವರ್ಷದ ಆರಂಭದಲ್ಲೇ ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹ ಭಾರತೀಯರಿಗೆ ಇನ್ನಿಲ್ಲದ ನೋವು ತಂದಿದೆ. ಈ ದುರಂತಕ್ಕೆ ವೈಜ್ಞಾನಿಕವಾಗಿ ಕೆಲ ಕಾರಣಗಳಿದೆ. ಇತ್ತ ಗ್ರಾಮಸ್ಥರು ಈ ಕಾರಣಗಳನ್ನು 2013ರಲ್ಲೇ ಹೇಳಿದ್ದರು.

ತಪೋವನದಲ್ಲಿ ಮುಂದುವರೆದ ಕಾರ್ಯಾಚರಣೆ, ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು!

ಚಮೋಲಿ ಜಿಲ್ಲೆಯಲ್ಲಿ ನಡೆದ ಹಿಮಸ್ಫೋಟದಲ್ಲಿ ವಿದ್ಯುತ್ ಘಟಕ, ಜಲಾಶಯ ಧ್ವಂಸಗೊಂಡಿದೆ. 34 ಮಂದಿ ಸಾವನ್ನಪ್ಪಿದ್ದರೆ, 170 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಗೆ ಧಾರಿ ದೇವಿ ಶಾಪ ಕಾರಣ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮಸ್ಥರು ಹೇಳುವ ಕಾರಣದ ಹಿಂದೆ ವೈಜ್ಞಾನಿಕತೆಯೂ ಅಡಗಿದೆ.

ಹೀಗಿತ್ತು ಉತ್ತರಾಖಂಡ್ ದುರಂತದ ಕೊನೇ ಕ್ಷಣ, 49 ಸೆಕೆಂಡ್‌ನಲ್ಲಿ 10 ಮಂದಿ ನೀರುಪಾಲು!.

ಪ್ರವಾಗದಿಂದ ದ್ವಂಸಗೊಂಡಿರುವ ವಿದ್ಯುತ್ ಸ್ಥಾವರಕ್ಕೆ ಜಲಾಶಯ ಸೇರಿದಂತೆ ನದಿಯಲ್ಲಿ ಹಲವು ಆಣೆಕಟ್ಟು ಕಟ್ಟಲಾಗಿದೆ. ಇದರಿಂದ ಧಾರಿ ದೇವಿ ಮಂದಿ ಮುಳುಗಡೆಯಾಗಲು ಆರಂಭಿಸಿತು. ಹೀಗಾಗಿ ಧಾರಿ ದೇವಿ ಮಂದಿರವನ್ನು ಸ್ಥಳಾಂತರ ಮಾಡಲಾಗಿತ್ತು. ದೇವಿ ಮಂದಿ ಒಡೆಯಲು ಹಾಗೂ ಸ್ಥಳಾಂತರ ಮಾಡಲು ಗ್ರಾಮಸ್ಥರು ಬಾರಿ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಇದರ ಬದಲು ಹೈಡಲ್ ಪವರ್ ಪ್ರಾಜೆಕ್ಟ್ ಯೋಜನೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದ್ದರು.

ಗ್ರಾಮಸ್ಥರು ಪ್ರತಿಭಟನೆಗೆ ಸೊಪ್ಪು ಹಾಕದ ಸರ್ಕಾರ, ವಿದ್ಯುತ್ ಸ್ಥಾವರ ಘಟಕ ಆರಂಭಿಸಿತು. ಧಾರಿ ದೇವಿ ಮಂದಿ ಮುಳುಗಡೆಯಾಯಿತು. ಇತ್ತ ಧಾರಿ ದೇವಿ ಮಂದಿರವನ್ನು ಬೇರೆಡೆ ಸ್ಥಳಾಂತರ ಮಾಡುವ ಆಶ್ವಾಸನೆ ನೀಡಲಾಯಿತು. ಆದರೆ ಸ್ಥಳೀಯ ಜಿಲ್ಲಾಡಳಿತ ಸ್ಥಳಾಂತರ ಭರವಸೆ ಸರಿಯಾಗಿ ಈಡೇರಿಸಿಲ್ಲ. ಈ ದೇವಿ ಶಾಪದಿಂದಲೇ ಉತ್ತರಖಂಡದಲ್ಲಿನ ಈಗಿನ ದುರಂತ ಹಾಗೂ ಈ ಹಿಂದಿನ ದುರಂತಗಳು ಸಂಭವಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮಸ್ಥರು ಹೇಳುತ್ತಿರುವ ದೇವಿ ಶಾಪದ ಹಿಂದಿನ ವೈಜ್ಞಾನಿಕ ಕಾರಣವೇ ವಿದ್ಯುತ್ ಸ್ಥಾವರ ಘಟಕ. ಸದ್ಯ ತಜ್ಞರ ವರದಿಯಲ್ಲಿ ಈ ವಿದ್ಯುತ್ ಸ್ಥಾವರ ಘಟಕ, ಜಲಾಶಯಗಳು ಕಾರಣ ಎಂಬ ಅಂಶಗಳು ಉಲ್ಲೇಖಿತಗೊಂಡಿದೆ.   

Latest Videos
Follow Us:
Download App:
  • android
  • ios