Asianet Suvarna News Asianet Suvarna News

ಲಾಠಿ ನೀಡುವಂತೆ ಪೊಲೀಸರೊಂದಿಗೆ ಫೈಟ್‌ : ಪುಟಾಣಿಯ ಮುದ್ದಾದ ವಿಡಿಯೋ ವೈರಲ್

ಪೊಲೀಸರ ಬಗ್ಗೆ ಅರಿಯದ ಪುಟಾಣಿ ಮಗುವೊಂದು ಅವರ ಬಳಿ ತಮ್ಮ ಲಾಠಿ ನೀಡುವಂತೆ ಕೇಳುತ್ತಿದ್ದು, ಮಗುವಿನ ಈ ಮುದ್ದಾದ ಆಟಕ್ಕೆ ಪೊಲೀಸರೇ ನಗುತ್ತಿದ್ದಾರೆ.

little girl fighting for stick with police akb
Author
First Published Sep 5, 2022, 2:24 PM IST

ಮುದ್ದಾಗಿರುವ ಪುಟಾಣಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಪುಟ್ಟ ಬಾಲೆಯೊಬ್ಬಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಎಂದರೆ ಬಹುತೇಕರು ಅಂತರ ಕಾಯ್ದುಕೊಳ್ಳುವುದೇ ಹೆಚ್ಚು, ಇನ್ನು ಟ್ರಾಫಿಕ್ ಪೊಲೀಸರಿದ್ದರಂತು ಕೆಲವರು ದಾಖಲೆಗಳಿದ್ದರೂ ಕಾಣಿಸದಂತೆ ಮರೆಯಾಗಲು ಯತ್ನಿಸುತ್ತಾರೆ ಆದರೆ ಪೊಲೀಸರ ಬಗ್ಗೆ ಅರಿಯದ ಪುಟಾಣಿ ಮಗುವೊಂದು ಅವರ ಬಳಿ ತಮ್ಮ ಲಾಠಿ ನೀಡುವಂತೆ ಕೇಳುತ್ತಿದ್ದು, ಮಗುವಿನ ಈ ಮುದ್ದಾದ ಆಟಕ್ಕೆ ಪೊಲೀಸರೇ ನಗುತ್ತಿದ್ದಾರೆ.

ಮುಂಬೈನ ವಿಡಿಯೋ ಇದಾಗಿದ್ದು, ಆದರೆ ಇದು ಯಾವ ಪ್ರದೇಶ ಎಂಬುದು ಸ್ಪಷ್ಟವಾಗಿಲ್ಲ, ವಿಡಿಯೋದಲ್ಲಿ ಕಾಣಿಸುವಂತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Police Officer) ಭದ್ರತೆಯ ಕರ್ತವ್ಯದಲ್ಲಿದ್ದಾರೆ. ಬಹುಶಃ ಮಗುವಿನ ಪೋಷಕರುನಿಲ್ದಾಣದಲ್ಲಿ ವಾಹನಕ್ಕಾಗಿ ಕಾಯುತ್ತಿದ್ದು, ಮಗು ಅತ್ತಿತ್ತ ಓಡಾಡುತ್ತಿದೆ. ಇದೇ ವೇಳೆ ಮಗುವಿಗೆ ಪೊಲೀಸರ ಕೈಯಲ್ಲಿದ್ದ ಲಾಠಿ ಕಂಡಿದ್ದು, ಲಾಠಿ ನೀಡುವಂತೆ ಮಹಿಳಾ ಪೊಲೀಸ್ ಅಧಿಕಾರಿ ಬಳಿ ಮಗು ಕೇಳುತ್ತದೆ. ಆದರೆ ಮಗುವಿನಲ್ಲಿ ಏಕೆ ಲಾಠಿ ಎಂದು ಕೇಳುತ್ತಾ ಲಾಠಿಯನ್ನು ಮೇಲೆ ಎತ್ತಿ ಹಿಡಿದು ಮಗುವನ್ನು ಆಟ Play) ಆಡಿಸುತ್ತಾರೆ. ಮಗುವು ಅವವರ ಕೈಯಿಂದ ಲಾಠಿ ಕಸಿದು ಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಈ ವಿಡಿಯೋವನ್ನು ಕನಿಷ್ಕಾ ಬಿಷ್ಣೋಯಿ (Kaniska Bisnoyi) ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್ಲೋಡ್ ಮಾಡಲಾಗಿದ್ದು, 8 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿರುವ ಬಯೋದಂತೆ ಈ ಕನಿಷ್ಕಾ ಎಂಬ 20 ತಿಂಗಳ ಮಗುವಾಗಿದ್ದು, ಪೋಷಕರು ಈ ಪೇಜ್‌ನ್ನು  ಹ್ಯಾಂಡಲ್ ಮಾಡುತ್ತಿದ್ದಾರೆ. 

 

ಮೆಟ್ರೋದಲ್ಲಿ ಪುಟಾಣಿ ಬಾಲೆಯ ಸಖತ್ ಡಾನ್ಸ್‌

ಕೆಲ ದಿನಗಳ ಹಿಂದೆ ಪುಟ್ಟ ಬಾಲಕಿಯೊಬ್ಬಳು ಮೆಟ್ರೋದಲ್ಲಿ(Metro) ಸುಂದರವಾಗಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿತ್ತು. ಸಮೀರ್‌ ಗೌರಂಗ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪುಟ್ಟ ಹುಡುಗಿ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದರೆ ಹಿಂದೆ ನಿಂತಿದ್ದ ಹುಡುಗನೂ ಕೂಡ ಈಕೆಯೊಂದಿಗೆ ಹಿಂದೆ ನಿಂತುಕೊಂಡೆ ಹೆಜ್ಜೆ ಹಾಕುತ್ತಾನೆ. ಈ ಬಾಲಕಿಯ ಹೆಸರು ಸಮೀರಾ (Samira) ಆಗಿದ್ದು, ಯಾವ ನಟಿ ನರ್ತಕರಿಗೂ ಕಡಿಮೆ ಇಲ್ಲದಂತೆ ಈಕೆ ಮುದ್ದಾಗಿ ಡಾನ್ಸ್ ಮಾಡುತ್ತಿದ್ದರೆ, ನೋಡುಗರಿಗೂ ಕುಣಿಯಬೇಕೆನಿಸುತ್ತದೆ. ಈ ವಿಡಿಯೋವನ್ನು ಮೂರು ಕೋಟಿಗೂ ಅಧಿಕ ಜನ ನೋಡಿದ್ದಾರೆ. ಅಲ್ಲದೇ ಎಂಟು ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 

ಚಾಕೋಲೇಟ್‌ ನೀಡಿದ ಯೋಧರಿಗೆ ಮಕ್ಕಳ ಖಡಕ್ ಸೆಲ್ಯೂಟ್: ಪುಟಾಣಿಗಳ ವಿಡಿಯೋ ವೈರಲ್

ಕೆಲವೊಂದು ಹಾಡುಗಳಿಗೆ ಭಾಷೆ ಅರ್ಥ ಯಾವುದು ಬೇಕಿರುವುದಿಲ್ಲ. ಅದಕ್ಕೆ ಸಂಯೋಜಿಸಿರುವ ಸಂಗೀತಾದ ಸೆಳೆತಕ್ಕೆ ಅದು ಎಲ್ಲರನ್ನು ನಿಂತಲ್ಲೇ ಕುಣಿಯುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ಹಾಡು ಉತ್ತಮ ಉದಾಹರಣೆಯಾಗಿದೆ. ಜಗತ್ತಿನಾದ್ಯಂತ ಜನಸಾಮಾನ್ಯರಲ್ಲದೇ ಸಾಕಷ್ಟು ಸೆಲೆಬ್ರಿಟಿಗಳು ಈ ಗುಮಿ ಗುಮಿ (Gumi Gumi) ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಕೆಲ ದಿನಗಳ ಹಿಂದೆ ಶ್ರೀಲಂಕಾದ (Sri lanka) ಹಾಡು 'ಮನಿಕೆ ಮಗೆ ಹಿತೆ' ಇದೇ ರೀತಿ ಪ್ರಪಂಚದಾದ್ಯಂತ ವೈರಲ್ ಆಗಿದ್ದನ್ನು ನಾವು ನೋಡಿದ್ದೇವೆ. 

ಪುಟ್ಟ ಸೊಂಡಿಲಿನಲ್ಲಿ ನೀರು ಕುಡಿಯಲು ಕಲಿಯುತ್ತಿರುವ ಪುಟಾಣಿ ಆನೆ: ವಿಡಿಯೋ ವೈರಲ್‌

Follow Us:
Download App:
  • android
  • ios