Asianet Suvarna News Asianet Suvarna News

ಪುಟ್ಟ ಸೊಂಡಿಲಿನಲ್ಲಿ ನೀರು ಕುಡಿಯಲು ಕಲಿಯುತ್ತಿರುವ ಪುಟಾಣಿ ಆನೆ: ವಿಡಿಯೋ ವೈರಲ್‌

ಪುಟಾಣಿ ಆನೆ ಮರಿಯ ವಿಡಿಯೋವೊಂದು ವೈರಲ್ ಆಗಿದ್ದು, ನೋಡುವುದಕ್ಕೆ ಮುದ್ದಾಗಿದೆ. ತಾಯಿಯೊಂದಿಗೆ ನೀರಿನ ಮೂಲವೊಂದರ ಬಳಿ ಬಂದಿರುವ ಪುಟಾಣಿ ಆನೆಯೊಂದು ಅಲ್ಲಿ ತನ್ನ ದಾಹ ತೀರಿಸಿಕೊಳ್ಳುತ್ತಿದೆ.

Baby elephant trying to drink water with its trunk video goes viral akb
Author
Bangalore, First Published Aug 15, 2022, 5:48 PM IST

ಆನೆ ಮರಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ನೀರು ಕುಡಿಯಲು ಹೋಗಿ ಹೊಂಡಕ್ಕೆ ಬಿದ್ದ ಆನೆ ಮರಿಯೊಂದನ್ನು ಅದರ ಪೋಷಕರು ಓಡಿ ಹೋಗಿ ರಕ್ಷಿಸಿದ ವಿಡಿಯೋವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೊಂದು ಪುಟಾಣಿ ಆನೆ ಮರಿಯ ವಿಡಿಯೋವೊಂದು ವೈರಲ್ ಆಗಿದ್ದು, ನೋಡುವುದಕ್ಕೆ ಮುದ್ದಾಗಿದೆ. ತಾಯಿಯೊಂದಿಗೆ ನೀರಿನ ಮೂಲವೊಂದರ ಬಳಿ ಬಂದಿರುವ ಪುಟಾಣಿ ಆನೆಯೊಂದು ಅಲ್ಲಿ ತನ್ನ ದಾಹ ತೀರಿಸಿಕೊಳ್ಳುತ್ತಿದೆ. ಕೆಸರು ಮಿಶ್ರಿತ ನೀರನ್ನು ಮರಿಯಾನೆ ತನ್ನ ಪುಟ್ಟದಾದ ಸೊಂಡಿಲಿನಲ್ಲಿ ಬಡಿದು ಬಡಿದು ಮೇಲಿನಿಂದ ಸೋಸಿ ನೀರು ಕುಡಿಯುವಂತೆ ಈ ವಿಡಿಯೋ ಕಾಣಿಸುತ್ತಿದೆ.

ಸಮೀಪದಲ್ಲೇ ತಾಯಿ ಆನೆಯೂ ಇದ್ದು, ಅದೂ ಕೂಡ ಸೊಂಡಿಲಿನಲ್ಲಿ ನೀರನ್ನು ಹೀರಿಕೊಂಡು ತನ್ನ ದಾಹ ತೀರಿಸಿಕೊಳ್ಳುತ್ತಿದೆ. ಆದರೆ ಈ ಪುಟಾಣಿ ಆನೆ ನೀರಿನಲ್ಲಿ ತನ್ನ ಸೊಂಡಿಲನ್ನು ಅತ್ತಿತ್ತ ಆಡಿಸುತ್ತಾ ಆಟವಾಡುತ್ತಿರುವುದು ನೋಡಿದರೆ ತಬ್ಬಿಕೊಂಡು ಮುದ್ದಾಡಬೇಕೆನಿಸುಂತಿದೆ. ವಿಶ್ವ ಆನೆಗಳ ದಿನವಾದ ಆಗಸ್ಟ್ 12ರಂದು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ಸಾಕಷ್ಟು ಜನ ಈ ವಿಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಬರ್ಟ್ ಇ ಫುಲ್ಲರ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್‌  ಮಾಡಿದ್ದಾರೆ. ಈ ವಿಡಿಯೋವನ್ನು 7.4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 1,400 ಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಆನೆಗಳು ಮರಿಗಳ ವಿಚಾರದಲ್ಲಿ ತುಂಬಾ ಜಾಗರೂಕರಾಗಿದ್ದು, ತಮ್ಮ ಗುಂಪಿನಲ್ಲಿ ಮರಿಗಳಿದ್ದರೆ ತುಸು ಹೆಚ್ಚೆ ಜಾಗರೂಕರಾಗಿರುತ್ತಾರೆ. ಆನೆ ಮರಿಗಳು ನೋಡುವುದಕ್ಕೆನೋ ದೊಡ್ಡ ಗಾತ್ರದಲ್ಲಿ ಕಾಣಿಸಬಹುದು. ಆದರೆ ಹುಟ್ಟುವಾಗ 100 ಕೆಜಿಗೂ ಹೆಚ್ಚು ತೂಗುವ ಈ ಆನೆ ಮರಿಗಳು ಇತರ ಪ್ರಾಣಿಗಳ ಮರಿಗಳಂತೆ ನೋಡಲು ತುಂಬಾ ಮುದ್ದಾಗಿರುತ್ತವೆ. ಜೊತೆಗೆ ಆಟವಾಡಲು ತುಂಬಾ ಇಷ್ಟಪಡುತ್ತವೆ. ತಮ್ಮನ್ನು ಮುದ್ದಿಸುವುದನ್ನು ಅವುಗಳು ಬಹುವಾಗಿ ಇಷ್ಟಪಡುತ್ತವೆ. ಆನೆ ಸಾಕುವವರು ಆನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಸದಾ ಅವುಗಳ ಕಾಳಜಿ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಆನೆ ಮರಿ ತನ್ನ ನೋಡಿಕೊಳ್ಳುವವನ ಮೇಲೆ ಬಿದ್ದು ಮುದ್ದಾಟ ಆಡುತ್ತಿದ್ದು, ಅದರ ವಿಡಿಯೋ ವೈರಲ್ ಆಗಿದೆ. 

ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ

ಆನೆಗಳನ್ನು ರಕ್ಷಿಸಲು ಮತ್ತು ಅವರಿಗೆ ಆಶ್ರಯ ನೀಡಲು ಮೀಸಲಾಗಿರುವ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ  ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಖಾತೆ ಆಗಾಗ ಆನೆ ಮರಿಗಳ ಫೋಟೊ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತದೆ.  ಆನೆ ಮರಿ ಮತ್ತು ಆನೆಗಳನ್ನು ನೋಡಿಕೊಳ್ಳುವ ಜೋಸೆಫ್ ಎಂಬುವವರ ಒಡನಾಟವನ್ನು ಈ ವಿಡಿಯೋ ತೋರಿಸುತ್ತಿದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ , ಆನೆ  ಹುಟ್ಟಿದಾಗ ಸುಮಾರು 250 ಪೌಂಡ್‌ಗಳಷ್ಟು ತೂಕವಿದ್ದರೂ, ಬೇರೆ ಮಗುವಿನಂತೆ (ಮರಿಗಳಂತೆ) ಸಹಜತೆ ಆತ್ಮೀಯತೆಯನ್ನು ಅವು ಹೇಗೆ ಹಂಚಿಕೊಳ್ಳುತ್ತವೆ ಎಂಬುದರ ಕುರಿತು ಹೇಳಿದ್ದಾರೆ. ಅವರ ಮೂಲಭೂತ ಅವಶ್ಯಕತೆಗಳನ್ನು ಮೀರಿ, ಅವರು ದೈಹಿಕ ಪ್ರೀತಿ ಮತ್ತು ಆತ್ಮೀಯತೆಗೆ ಹಂಬಲಿಸುತ್ತವೆ. ಆನೆ ನೋಡಿಕೊಳ್ಳುವ ಜೋಸೆಫ್, ಈ ಮರಿಗಳನ್ನು ನೋಡಿಕೊಳ್ಳಲು ಮೀಸಲಾಗಿದ್ದಾರೆ ಎಂದು ಈ ವಿಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುಟ್ಟ ಪಕ್ಷಿಯೊಂದಿಗೆ ಆನೆ ಮರಿಯ ಕಿತ್ತಾಟ ವಿಡಿಯೋ ವೈರಲ್‌

ಪುಟ್ಟ ನವಜಾತ ಮಕ್ಕಳ ರಕ್ಷಣೆಯ ವಿಚಾರದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬಾ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ಹಸುಗೂಸುಗಳಿಗೆ ರಕ್ಷಣೆ ನೀಡುತ್ತವೆ ಎಂಬುದು ಅಷ್ಟೇ ಸತ್ಯ. ಇದನ್ನು ಪುಷ್ಠಿಕರಿಸುತ್ತಿದೆ ಆನೆಗಳ ಗುಂಪಿನ ಈ ವಿಡಿಯೋಗಳು. ಕೆಲ ದಿನಗಳ ಹಿಂದೆ ತಮಿಳುನಾಡಿನ ಅರಣ್ಯ ಪ್ರದೇಶವೊಂದರಲ್ಲಿ ಆನೆಯೊಂದು ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ತನ್ನ ಮರಿಯ ಮೇಲೆ ಮಳೆ ನೀರು ಬೀಳದಂತೆ ಬಹಳ ಜೋಪಾನವಾಗಿ ಬೀಳುತ್ತಿರುವ ಮಳೆಗೆ ಅಡ್ಡಲಾಗಿ ನಿಂತಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 
 

Follow Us:
Download App:
  • android
  • ios