Asianet Suvarna News Asianet Suvarna News

ದೊಡ್ಡ ಅನಾಹುತದಿಂದ ಅಮ್ಮನ ರಕ್ಷಿಸಿದ ಪುಟಾಣಿ... ವಿಡಿಯೋ ವೈರಲ್

ಪುಟ್ಟ ಬಾಲಕನೋರ್ವ ತನ್ನ ತಾಯಿಯನ್ನು ದೊಡ್ಡ ಅನಾಹುತವೊಂದರಿಂದ ರಕ್ಷಿಸಿದ್ದಾನೆ. ಈ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕನ ಸಮಯಪ್ರಜ್ಞೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

little boy Timeliness and dareness saved moms life, watch sons dareness in viral video akb
Author
First Published Dec 25, 2022, 4:01 PM IST

ಪುಟ್ಟ ಬಾಲಕನೋರ್ವ ತನ್ನ ತಾಯಿಯನ್ನು ದೊಡ್ಡ ಅನಾಹುತವೊಂದರಿಂದ ರಕ್ಷಿಸಿದ್ದಾನೆ. ಈ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಬಾಲಕನ ಸಮಯಪ್ರಜ್ಞೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ಅಂದಹಾಗೆ ತಾಯಿಯೊಬ್ಬಳು ಮನೆಯ ಗೇಟಿನ ಮೇಲೆ ಇರುವ ಕಮಾನನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದಕ್ಕಾಗಿ ಅವರು ಮಡಚಬಹುದಾದ (Folding ladder) ಏಣಿಯನ್ನು ಇರಿಸಿಕೊಂಡು ಸ್ವಚ್ಛಗೊಳಿಸುತ್ತಿರಬೇಕಾದರೆ ಆ ಏಣಿ ಒಮ್ಮೆಲೆ ಕೆಳಗೆ ಬೀಳುತ್ತದೆ. ಈ ವೇಳೆ ತಾಯಿ ಕಮಾನನ್ನು ಹಿಡಿದು ನೇತಾಡುತ್ತ ಬೊಬ್ಬೆ ಹೊಡೆಯಲು ಶುರು ಮಾಡುತ್ತಾಳೆ. ಆಗ ಅಲ್ಲೇ ಇದ್ದ ಪುಟಾಣಿ ಬಹಳ ಕಷ್ಟಪಟ್ಟು ಆ ಏಣಿಯನ್ನು ನಿಧಾನವಾಗಿ ಮೇಲೆತ್ತಿ ನೇರವಾಗಿ ನಿಲ್ಲುವಂತೆ ಮಾಡುತ್ತಾನೆ. ಈ ವೇಳೆ ನೇತಾಡುತ್ತಲೇ ಆ ತಾಯಿ ಏಣಿ ಮೇಲೆ ಹಿಡಿತ ಸಾಧಿಸಿದ್ದು, ಅದನ್ನು ಸಮತೋಲನಗೊಳಿಸುತ್ತಾಳೆ. ಇಲ್ಲಿಗೆ 42 ಸೆಕೆಂಡ್‌ಗಳ ವಿಡಿಯೋ ಕೊನೆಗೊಂಡಿದೆ.

ಭಾವುಕ ಕ್ಷಣ ಸೃಷ್ಟಿಸಿದ ಅಪಘಾತ: ಕೇರಳ ಸಾರಿಗೆ ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ

ಒಂದು ವೇಳೆ ಈ ಪುಟಾಣಿ ಬಾಲಕ (Little boy) ಸಮಯಪ್ರಜ್ಞೆ ತೋರದೇ ಇದ್ದಿದ್ದರೆ ತಾಯಿ ಕೆಳಗೆ ಬಿದ್ದು, ಮೂಳೆ ಮುರಿದುಕೊಳ್ಳುತ್ತಿದ್ದಳು. ಆದರೆ ದೇವರ ರೂಪದಲ್ಲಿ ಬಂದು ಆಕೆಯ ಕಂದನೇ ಆಕೆಯನ್ನು ರಕ್ಷಿಸಿದ್ದಾನೆ. ಈ ವಿಡಿಯೋವನ್ನು ಡಿಸೆಂಬರ್ 23 ರಂದು ಐಪಿಎಸ್ ಅಧಿಕಾರಿ (IPS Officer) ದೀಪಾಂಶು ಕಬ್ರಾ (Deepamshu Kabra) ಪೋಸ್ಟ್ ಮಾಡಿದ್ದು, 74 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಈ ವಿಡಿಯೋವನ್ನು ಪೋಸ್ಟ್ ಮಾಡಿದ ದೀಪಾಂಶು ಕಬ್ರಾ, ತಾಯಿ ಬಾಗಿಲನ್ನು ರಿಪೇರಿ ಮಾಡುತ್ತಿದ್ದಾಗ ಆಕೆ ನಿಂತಿದ್ದ ಏಣಿ ಆಯತಪ್ಪಿ ಬಿದ್ದಿದ್ದು, ತಾಯಿ ಮೇಲೆ ನೇತಾಡುವುದನ್ನು ನೋಡಿದ ಪುಟ್ಟ ಬಾಲಕ ಸಮಯಪ್ರಜ್ಞೆ ಮೆರೆದು ಏಣಿಯನ್ನು ಬಹಳ ಶ್ರಮವಹಿಸಿ ನೇರವಾಗಿ ನಿಲ್ಲಿಸಿ ತಾಯಿ ಜೀವ ಉಳಿಸಿದ. ಈ ಪುಟ್ಟ ಬಾಲಕನ ಧೈರ್ಯ (dareness) ಹಾಗೂ ಸಾಹಸವನ್ನು ಎಷ್ಟು ಮೆಚ್ಚಿದರು ಸಾಲದು ಎಂದು ಅವರು ಬರೆದುಕೊಂಡಿದ್ದಾರೆ. 

ಹಾವಿನಿಂದ ಮಗನನ್ನು ಕಾಪಾಡಿದ ತಾಯಿ, ವಿಡಿಯೋ ವೈರಲ್!

ಈ ವಿಡಿಯೋ ನೋಡಿದ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ದಿನದ ಹೀರೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ ಡ್ಯಾಡಿಯ ಡೇರಿಂಗ್ ಸನ್ ಡಿಂಡ್‌ಡಾಂಗ್ ಮಮ್ಮಿಯನ್ನು ಸೇವ್ ಮಾಡಿದ( ಅಪ್ಪನ ಧೈರ್ಯವಂತ ಮಗ ನೇತಾಡುತ್ತಿರುವ ಅಮ್ಮನನ್ನು ರಕ್ಷಿಸಿದ) ಎಂದು ಕಾಮೆಂಟ್ ಮಾಡಿದ್ದಾರೆ. ಅಂತಹ ದೊಡ್ಡದಾದ ಏಣಿಯನ್ನು ನೆಟ್ಟಗೆ ನಿಲ್ಲಿಸಿದ ಈ ಪುಟ್ಟ ಬಾಲಕನಿಗೆ ಶತಕೋಟಿ ದೇವರು ಆಶೀರ್ವಾದಿಸಲಿ (Blessings) ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಸ್ಟ್ ನೋಡಿ ನಾನು ಭಾವುಕನಾದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಏಣಿಯನ್ನು ಎತ್ತಿ ನಿಲ್ಲಿಸಿದ ಮೇಲೂ ಆ ಬಾಲಕ ದೂರ ಸರಿಯಲಿಲ್ಲ ಅದನ್ನು ಹಿಡಿದು ನಿಂತಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಾಲಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. 

 

Follow Us:
Download App:
  • android
  • ios