Asianet Suvarna News Asianet Suvarna News

ಭಾವುಕ ಕ್ಷಣ ಸೃಷ್ಟಿಸಿದ ಅಪಘಾತ: ಕೇರಳ ಸಾರಿಗೆ ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ

ಈ ಘಟನೆ ಯಾವುದೇ ಸಿನಿಮಾದ ನಾಯಕ ನಟನ ಆಕ್ಷನ್ ಸೀನ್‌ಗಿಂತ ಕಡಿಮೆ ಇಲ್ಲ. ಕೇರಳದ ಕೆಎಸ್‌ಆರ್‌ಟಿಸಿ ಚಾಲಕನೋರ್ವನ ಸಮಯಪ್ರಜ್ಞೆ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರ ಜೀವ ಉಳಿಸಿದೆ. ಅಲ್ಲದೇ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದೆ. ಹಾಗಾದರೆ ಅಲ್ಲಿ ನಡೆದಿದ್ದೇನು ಮುಂದೆ ಓದಿ.. 

accident create great emotional gratitude, Kerala Transport bus driver smitosh saved 44 shabarimala pilgrimages akb
Author
First Published Nov 22, 2022, 12:41 PM IST

ಈ ಘಟನೆ ಯಾವುದೇ ಸಿನಿಮಾದ ನಾಯಕ ನಟನ ಆಕ್ಷನ್ ಸೀನ್‌ಗಿಂತ ಕಡಿಮೆ ಇಲ್ಲ. ಕೇರಳದ ಕೆಎಸ್‌ಆರ್‌ಟಿಸಿ ಚಾಲಕನೋರ್ವನ ಸಮಯಪ್ರಜ್ಞೆ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರ ಜೀವ ಉಳಿಸಿದೆ. ಅಲ್ಲದೇ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದೆ. ಹಾಗಾದರೆ ಅಲ್ಲಿ ನಡೆದಿದ್ದೇನು ಮುಂದೆ ಓದಿ..  ನವಂಬರ್ 19 ರಂದು ಆಂಧ್ರಪ್ರದೇಶದ ಶಬರಿಮಾಲೆ ಯಾತ್ರಿಗಳನ್ನು ಹೊತ್ತ ಬಸ್ಸೊಂದು ಕೇರಳದ ಪಟ್ಟನತಿಟ್ಟ ಎಂಬಲ್ಲಿ ಮುಂದಿದ್ದ ಬಸ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿತ್ತು. ಈ ಅವಘಡದಲ್ಲಿ ಹಲವರು ಗಾಯಗೊಂಡಿದ್ದರು. ಆದರೆ ಇದೇ ವೇಳೆ ಕೆಎಸ್‌ಆರ್‌ಟಿಸಿ(ಕೇರಳ ಟ್ರಾನ್ಸ್‌ಫೋರ್ಟ್) ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅಪಘಾತದ ತೀವ್ರತೆ ಕಡಿಮೆ ಆಗಿತ್ತು. 

ನಡೆದಿದ್ದೇನು? 

ಕೇರಳ ಸಾರಿಗೆಯ (KSRTC) ಬಸ್ ಚಾಲಕ (bus driver) ಸ್ಮಿತೋಸ್ (Smithosh) ಅವರು ತನ್ನ ಎಂದಿನ ಕರ್ತವ್ಯದಂತೆ ಪಂಬಾ ಕಣಿವೆಯಲ್ಲಿ (Pamba valley) ಬಸ್ ಚಲಾಯಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಇವರು ಅತ್ತಿವಲವು (Attivalavu) ಎಂಬಲ್ಲಿ ಕಡಿದಾದ ತಿರುವು ಹಾಗೂ ಇಳಿಜಾರುಗಳಿಂದಾಗಿ ಅಪಘಾತಗಳಿಗೆ ಹೆಸರಾದ ಕನಮಾಲಾ ಏರು ದಾರಿಯಲ್ಲಿ ಸಾಗುತ್ತಿದ್ದಾಗ ಇವರು ಆಂಧ್ರಪ್ರದೇಶದ (Andhra Pradesh) ಶಬರಿಮಲೆ ಯಾತ್ರಿಕರನ್ನು (Shabarimala pilgrims) ಹೊತ್ತ ಬಸ್ಸೊಂದನ್ನು ಹಿಂದಿಕ್ಕಿ ಮುಂದೆ ಸಾಗಿದರು. ಆದರೆ ರಸ್ತೆಯ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ಇವರಿಗೆ ಏನೋ ಕರಟಿದ ವಾಸನೆ ಬಂದಿದೆ. 

Pune-Bengaluru Highway: ಪುಣೆಯಲ್ಲಿ ಭಾರಿ ಅಪಘಾತ, ಟ್ಯಾಂಕರ್‌ ಬಡಿದು 48 ವಾಹನಗಳು ಜಖಂ!

ಆದರೆ ಬಸ್‌ಗಳು ಆ ಏರು ದಾರಿಯಲ್ಲಿ ಸಾಗಿದಾಗ ಸಾಮಾನ್ಯವಾಗಿ ಈ ರೀತಿ ಆಗುತ್ತಿರುತ್ತದೆ. ಹೀಗಾಗಿ ಸ್ಮಿತೋಷ್ ಅವರು ಆ ಬಸ್‌ನಲ್ಲಿ ತೊಂದರೆ ಇರಬಹುದು ಎಂದು ಭಾವಿಸದೇ ಆ ಬಸ್ ಅನ್ನು ಹಿಂದಿಕ್ಕಿ ಮುಂದೆ ಸಾಗಿದರು. ಆದರೆ ಸ್ವಲ್ಪ ಹೊತ್ತಿನಲ್ಲೇ ಆಂಧ್ರ ಬಸ್ ಸ್ಮಿತೋಷ್ ಅವರ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಬಸ್ಸೇನು ವೇಗವಾಗಿ ಇಲ್ಲದ ಕಾರಣ ಅಂತಹ ಹಾನಿಯೇನು ಸಂಭವಿಸಲಿಲ್ಲ. ಅಲ್ಲದೇ ಸ್ಮಿತೋಷ್ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದೆ ಸಾಗಿದರು. ಆದರೆ ಅದೇ ಬಸ್ ಮತ್ತೆ ಡಿಕ್ಕಿ ಹೊಡೆದಿದೆ. ಈ ವೇಳೆ ಘಟನೆಗೂ ಮೊದಲು ಬರುತ್ತಿದ್ದ ಸುಟ್ಟ ವಾಸನೆಯ ಯೋಚನೆಯೂ ಸ್ಮಿತೋಷ್‌ಗೆ ಬಂದಿದ್ದು, ಕೂಡಲೇ ಏನೋ ಸರಿ ಇಲ್ಲ ಎಂಬುದರ ಅರಿವಾಗಿದೆ. 

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!
ಕೂಡಲೇ ಮತ್ತೊಮ್ಮೆ ಬಸ್ ತನ್ನ ಬಸ್‌ನ ಸಮೀಪ ಬಂದಾಗ ಸ್ಮಿತೋಷ್ ತಮ್ಮ ಬಸ್‌ನ ಹ್ಯಾಂಡ್‌ ಬ್ರೇಕ್(hand brake) ಬಳಸಿ ಬಸ್ ನಿಲ್ಲಿಸಿದ್ದು, ಈ ವೇಳೆ ಶಬರಿಮಲೆ ಯಾತ್ರಿಕರ ಬಸ್ ಸ್ಮಿತೋಷ್ ಬಸ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಹೀಗಾಗಿ ಮುಂದಿದ್ದ ದೊಡ್ಡ ಪ್ರಪಾತಕ್ಕೆ ಬಸ್ ಬೀಳುವುದು ಸ್ವಲ್ಪದರಲ್ಲಿ ತಪ್ಪಿದ್ದು, ದೊಡ್ಡ ಅನಾಹುತದಿಂದ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ.  ಬಸ್‌ಗೆ ಡಿಕ್ಕಿ ಹೊಡೆದು ಯಾತ್ರಿಕರ ಬಸ್ ನಿಲ್ಲುತ್ತಿದ್ದಂತೆ ಆ ಬಸ್‌ನಿಂದ ಇಳಿದ ಶಬರಿಮಲೆ ಯಾತ್ರಿಕರೆಲ್ಲಾ ಕೆಎಸ್‌ಆರ್‌ಟಿಸಿ ಚಾಲಕ (KSRTC bus) ಸ್ಮಿತೋಷ್ ಬಳಿ ಬಂದು ಆತನನ್ನು ಬಾಚಿ ತಬ್ಬಿಕೊಂಡಿದ್ದಲ್ಲದೇ ಕೆಲವರು ಆತನ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದ್ದಾರೆ. ಇದು ತನ್ನ ಬದುಕಿನಲ್ಲಿ ಸಿಕ್ಕ ಅತ್ಯಂತ ದೊಡ್ಡ ಪುರಸ್ಕಾರದ ಸಮಯ ಎಂದು ಸ್ಮಿತೋಷ್ ಈ ಬಗ್ಗೆ ಹೇಳಿಕೊಂಡಿದ್ದಾರೆ. 

ಅವರು ನನ್ನನ್ನು ಬಂದು ತಬ್ಬಿಕೊಂಡರು, ಕೆಲವರು ಅಯ್ಯಪ್ಪಸ್ವಾಮಿಯ ಹೆಸರು ಹೇಳಿಕೊಂಡು ನನ್ನ ಕಾಲು ಮುಟ್ಟಿದರು. ಮತ್ತೆ ಕೆಲವರು ಅಯ್ಯಪ್ಪಸ್ವಾಮಿಯೇ ನಮ್ಮನ್ನು ರಕ್ಷಿಸಲು ನಿಮ್ಮನ್ನು ಕರೆತಂದ ಎಂದು ಹೇಳಿಕೊಂಡರು. ಅಲ್ಲದೇ ಆ ಬಸ್ ಚಾಲಕನಂತೂ ಶಾಕ್‌ಗೆ ಒಳಗಾಗಿದ್ದ. ಒಂದು ಮಾತನಾಡಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮಿತೋಷ್ ಹೇಳಿಕೊಂಡಿದ್ದಾರೆ. 

ನಂತರ ಸ್ಮಿತೋಷ್ ಬಸ್ ನಿರ್ವಾಹಕ ರಾಜೀವ್ ಜೊತೆ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಆದರೆ ಸೋಮವಾರ ಅದೇ ರೂಟ್‌ನಲ್ಲಿ ಬಂದಿದ್ದ ಚಾಲಕ ಸ್ಮಿತೋಷ್‌ಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು. ಆಂಧ್ರ ಪ್ರದೇಶದ ಬಸ್ ಚಾಲಕ ಅಲ್ಲಿ ಸ್ಮಿತೋಷ್‌ಗಾಗಿ ಕಾಯುತ್ತಿದ್ದ. ಸ್ಮಿತೋಷ್ ಬಸ್ ನಿಲ್ಲಿಸುತ್ತಿದ್ದಂತೆ ಓಡಿ ಬಂದ ಆಂಧ್ರ ಪ್ರದೇಶದ ಬಸ್ ಚಾಲಕ ಆತನನ್ನು ತಬ್ಬಿಕೊಂಡು ಮುತ್ತಿಕ್ಕಿದ್ದಲ್ಲದೇ ಅಳುತ್ತಾ ತೆಲುಗಿನಲ್ಲೇ ತನ್ನ ಮನದ ಮಾತುಗಳನ್ನೆಲ್ಲಾ ಹೇಳಿಕೊಂಡಿದ್ದ. ಆತನ ನನಗೆ ಸ್ವಲ್ಪವೂ ತೆಲುಗು ಭಾಷೆ ಬರದಿದ್ದರೂ ಆತನ ಭಾವನೆಗಳಿಂದಾಗಿ ಆತ ಹೇಳಿದ್ದೆಲ್ಲವೂ ಅರ್ಥವಾಯ್ತು. ನಮ್ಮ ಮನಸ್ಸುಗಳು ಮಾತನಾಡಿದವು. ಬಹುಶಃ ನಾವು ಮುಂದೆಂದೂ ಭೇಟಿ ಆಗಲಾರೆವು. ಆದರೆ ಒಬ್ಬರನೊಬ್ಬರು ಎಂದು ಮರೆಯಲಾರೆವು ಎಂದು ಸ್ಮಿತೋಷ್ ಹೇಳಿಕೊಂಡಿದ್ದಾರೆ. 

ಸ್ಮಿತೋಷ್ ಅವರ ಈ ಧೈರ್ಯ ಅವರನ್ನು ಈಗಾಗಲೇ ಹೀರೋ ಮಾಡಿದ್ದು, ಅವರ ಈ ಸಾಹಸ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಹೊಗಳಿ ಅನೇಕರು ಕರೆ ಮಾಡುತ್ತಿದ್ದು, ಅನೇಕರು ಸಂದೇಶ ಕಳುಹಿಸುತ್ತಿದ್ದಾರೆ. 

Follow Us:
Download App:
  • android
  • ios