Asianet Suvarna News Asianet Suvarna News

3 ದಿನ ಮದ್ಯ, ಬಾರು ಕ್ಲೋಸ್, ಕತ್ರಿನಾ ವಿಕ್ಕಿ ವಿರುದ್ಧ ಕೇಸ್; ಡಿ.7ರ ಟಾಪ್ 10 ಸುದ್ದಿ!

ಮಂಡ್ಯ, ಗುಲ್ಬರ್ಗ ಸೇರಿದಂತೆ ಹಲವೆಡೆ  ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಬಹು ನಿರೀಕ್ಷಿತ ಪೂರ್ವಾಂಚಲ್ ಕನಸನ್ನು ಪ್ರಧಾನಿ ನರೇಂದ್ರ ಮೋದಿ  ಈಡೇರಿಸಿದ್ದಾರೆ. ಟೆಸ್ಟ್ ರ್ಯಾಕಿಂಗ್‌ನಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ. ಮದುವೆ ಸಂಭ್ರಮದಲ್ಲಿರುವ ಬಾಲಿವುಡ್ ಜೋಡಿ ವಿರುದ್ಧ ಕೇಸ್, ಜೆಡಿಎಸ್ ಬೆಂಬಲ ಯಾರಿಗೆ ಸೇರಿದಂತೆ ಡಿಸೆಂಬರ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Liquor Sale Ban in Karnataka district to katrina kaif vicky kaushal top 10 news of december 7 ckm
Author
Bengaluru, First Published Dec 7, 2021, 5:39 PM IST
  • Facebook
  • Twitter
  • Whatsapp

Modi In UP: ಕೆಂಪು ಟೋಪಿಯವರು ಯುಪಿಗೆ ರೆಡ್‌ ಅಲರ್ಟ್‌: ಸಮಾಜವಾದಿ ಪಾರ್ಟಿ ವಿರುದ್ಧ ಮೋದಿ ಕಿಡಿ!

Liquor Sale Ban in Karnataka district to katrina kaif vicky kaushal top 10 news of december 7 ckm

ಬಹು ನಿರೀಕ್ಷಿತ ಪೂರ್ವಾಂಚಲ್ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಡೇರಿಸಿದ್ದಾರೆ. ಗೋರಖ್‌ಪುರದಲ್ಲಿ 9,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸಗೊಬ್ಬರ ಕಾರ್ಖಾನೆ ಎಐಐಎಂಎಸ್ ಮತ್ತು ಆರ್‌ಎಂಆರ್‌ಸಿಯ ಒಂಬತ್ತು ಬಿಎಸ್‌ಎಲ್-ಟು-ಪ್ಲಸ್ ಲ್ಯಾಬ್‌ಗಳನ್ನು ಅವರು ಉದ್ಘಾಟಿಸಿದ್ದಾರೆ. 

Euthanasia:ಒಂದೇ ನಿಮಿಷದಲ್ಲಿ ನೋವು ರಹಿತ ಸಾವು, ಸ್ವಿಟ್ಜರ್‌ಲೆಂಡ್‌ನಲ್ಲಿ ದಯಾಮರಣ ಪೆಟ್ಟಿಗೆಗೆ ಅನುಮತಿ!

Liquor Sale Ban in Karnataka district to katrina kaif vicky kaushal top 10 news of december 7 ckm

ಏನಾಗುತ್ತೆ ಅನ್ನೋದು ಅರಿಯುವ ಮೊದಲೇ ಕೇವಲ ಒಂದೇ ಒಂದು ನಿಮಿಷದಲ್ಲಿ  ನೋವು ರಹಿತ ಸಾವು(death). ಅರೇ ಇದೇನು ಅಂತೀರಾ.. ಇದು ದಯಾಮರಣ(Euthanasia). ಹಲವು ರಾಷ್ಟ್ರಗಳಲ್ಲಿ ದಯಾಮರಣ ಬೇಕು, ಬೇಡ ಅನ್ನೋ ಚರ್ಚೆಗಳು ನಡೆಯುತ್ತಲೇ ಇದೆ

Council Election Karnataka : ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ..?

Liquor Sale Ban in Karnataka district to katrina kaif vicky kaushal top 10 news of december 7 ckm

ರಾಜ್ಯದಲ್ಲಿ ಡಿಸೆಂಬರ್10 ರಂದು ವಿಧಾನ ಪರಿಷತ್  (MLC Election) ಸ್ಥಾನಗಳುಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ (JDS) ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ.

ICC Test Rankings: ಅಗ್ರಸ್ಥಾನಕ್ಕೇರಿದ ಭಾರತ : 2ನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌!

Liquor Sale Ban in Karnataka district to katrina kaif vicky kaushal top 10 news of december 7 ckm

ನ್ಯೂಜಿಲೆಂಡ್‌ ವಿರುದ್ಧ ಬೃಹತ್‌ ಗೆಲುವಿನ ಬಳಿಕ ಭಾರತ (Ind vs NZ  test) ತಂಡ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Rankings) ಮತ್ತೆ ಅಗ್ರಸ್ಥಾನಕ್ಕೇರಿದೆ. ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಮಹತ್ವದ ಅಂಕಗಳನ್ನು ಸಂಪಾದಿಸಿತು. ಈ ವರ್ಷ ಜೂನ್‌ನಲ್ಲಿ ಭಾರತವನ್ನು ಹಿಂದಿಕ್ಕಿ ನ್ಯೂಜಿಲೆಂಡ್‌ (New Zealand) ಅಗ್ರಸ್ಥಾನಕ್ಕೇರಿತ್ತು. ವಿರಾಟ್‌ ಕೊಹ್ಲಿ (Virat kohli) ನಾಯಕತ್ವದ ಟೀಂ ಇಂಡಿಯಾ  (Team India) ಒಟ್ಟು 124 ರೇಟಿಂಗ್‌ ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ಕುಸಿದಿರುವ ನ್ಯೂಜಿಲೆಂಡ್‌ 121 ಅಂಕ ಹೊಂದಿದೆ. 

Katrina Kaif wedding: ಮದುವೆ ಸಂಭ್ರಮದಲ್ಲಿರೋ ಬಾಲಿವುಡ್ ಜೋಡಿಯ ವಿರುದ್ಧ ಕೇಸ್

Liquor Sale Ban in Karnataka district to katrina kaif vicky kaushal top 10 news of december 7 ckm

ಕತ್ರೀನಾ ಕೈಫ್(Katrina Kaif) ಹಾಗೂ ವಿಕ್ಕಿ ಕೌಶಲ್(Vicky Kaushal) ಮದುವೆ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ ಜೋಡಿ ಈಗಾಗಲೇ ರಾಜಸ್ಥಾನಕ್ಕೆ ತಲುಪಿದ್ದಾರೆ. ಸೆಲೆಬ್ರಿಟಿ ಜೋಡಿ ಮದುವೆ ಬಗ್ಗೆ ತಿಂಗಳ ಮೊದಲೇ ಗದ್ದಲ ಶುರುವಾಗಿದೆ. 

Liquor Sale Ban in Karnataka : 3 ದಿನ ಮದ್ಯ ಮಾರಾಟ ನಿಷೇಧ

Liquor Sale Ban in Karnataka district to katrina kaif vicky kaushal top 10 news of december 7 ckm

ಮಂಡ್ಯ (Mandya) ಜಿಲ್ಲೆಯಲ್ಲಿ ಡಿ.30 ರಂದು ಕರ್ನಾಟಕ ವಿಧಾನ ಪರಿಷತ್  (ಸ್ಥಳೀಯ ಸಂಸ್ಥೆಗಳು) ದೈವಾರ್ಷಿಕ ಚುನಾವಣೆ (Karnataka MLC Election) ಮತದಾನ ನಡೆಯುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಡಿ.8ರ ಸಂಜೆ 5 ಗಂಟೆಯಿಂದ ಡಿ. 10ರ ಸಂಜೆ  5 ಗಂಟೆವರೆಗೆ  ಅಂದರೆ ಮತದಾನ ಮುಕ್ತಾಯದ ಹಿಂದಿನ 48 ಗಮಟೆಗಳ ಅವಧಿಯಲ್ಲಿ  ಎಲ್ಲಾ ತರಹದ ಮದ್ಯದ ಅಂಗಡಿ (Liquor Shop) ಬಾರ್ ಅಂಡ್ ರೆಸ್ಟೊರೆಂಟ್ ಕ್ಲಬ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ (Liquor Sale Ban) ಜಿಲ್ಲಾಧಿಕಾರಿ (DC) ಆದೇಶ ಹೊರಡಿಸಿದ್ದಾರೆ. 

Aadhaar Card : ಆಧಾರ್ ಕಾರ್ಡ್ ಹೊಂದಿರೋರು ಈ ತಪ್ಪು ಮಾಡಿ ಆಮೇಲೆ ಗೋಳಾಡಬೇಡಿ

Liquor Sale Ban in Karnataka district to katrina kaif vicky kaushal top 10 news of december 7 ckm

ಬಂಪರ್ ಲಾಟರಿ ಹೊಡೆದಿದೆ. 5 ಲಕ್ಷ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ,ಆಧಾರ್ ಸಂಖ್ಯೆ ನಮೂದಿಸಿ. ಇಂಥ ಜಾಹೀರಾತುಗಳು ನೂರಾರು ಬರ್ತಿರುತ್ತವೆ. 5 ಲಕ್ಷದ ಆಸೆಗೆ ಆಧಾರ್ ದಾಖಲೆ ನೀಡಿದ್ರೆ ಮೂರು ನಾಮ ಬೀಳೋದು ನಿಶ್ಚಿತ. ಆಧಾರ್ ಕಾರ್ಡ್ ಹೊಂದಿದ್ದರೆ ಸಾಲದು,ಅದರ ಬಳಕೆ,ಸುರಕ್ಷತೆ ಕೂಡ ಗೊತ್ತಿರಬೇಕು. 

Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

Liquor Sale Ban in Karnataka district to katrina kaif vicky kaushal top 10 news of december 7 ckm

650 ಸಿಸಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ ಕೇವಲ 120 ಕ್ಷಣಗಳಲ್ಲಿ ಅಂದರೆ ಎರಡು ನಿಮಿಷದಲ್ಲಿ 120 ಬೈಕುಗಳು ಮಾರಾಟವಾಗಿವೆ.

Follow Us:
Download App:
  • android
  • ios