Asianet Suvarna News Asianet Suvarna News

Switzerland approve Euthanasia: 1 ನಿಮಿಷದಲ್ಲಿ ನೋವು ರಹಿತ ಸಾವು, ಸ್ವಿಟ್ಜರ್‌ಲೆಂಡ್‌ನಲ್ಲಿ ದಯಾಮರಣ ಪೆಟ್ಟಿಗೆಗೆ ಅನುಮತಿ!

  • ಸ್ವಿಟ್ಜರ್ಲೆಂಡ್‌ನಲ್ಲಿ ಇಚ್ಚಾಮರಣ ಕಾನೂನು ಬದ್ಧ
  • ಪರ ವಿರೋಧದ ನಡುವೆ ಕಾನೂನು ಜಾರಿಗೊಳಿಸಿದ ಸ್ವಿಸ್
  • ಒಂದೇ ನಿಮಿಷದಲ್ಲಿ ನೋವುರಹಿತ ಸಾವು 
Painless  peaceful death in under one minute  Switzerland legalised machine for euthanasia ckm
Author
Bengaluru, First Published Dec 7, 2021, 5:08 PM IST
  • Facebook
  • Twitter
  • Whatsapp

ಸ್ವಿಟ್ಜರ್ಲೆಂಡ್(ಡಿ.07):  ಏನಾಗುತ್ತೆ ಅನ್ನೋದು ಅರಿಯುವ ಮೊದಲೇ ಕೇವಲ ಒಂದೇ ಒಂದು ನಿಮಿಷದಲ್ಲಿ  ನೋವು ರಹಿತ ಸಾವು(death). ಅರೇ ಇದೇನು ಅಂತೀರಾ.. ಇದು ದಯಾಮರಣ(Euthanasia). ಹಲವು ರಾಷ್ಟ್ರಗಳಲ್ಲಿ ದಯಾಮರಣ ಬೇಕು, ಬೇಡ ಅನ್ನೋ ಚರ್ಚೆಗಳು ನಡೆಯುತ್ತಲೇ ಇದೆ. ದಯಾಮರಣ ಕುರಿತು ಪರ ವಿರೋಧಗಳು ಇವೆ. ಇದರ ನಡುವೆ ಸ್ವಿಟ್ಜರ್‌ಲೆಂಡ್(Switzerland) ಇಚ್ಚಾಮರಣವನ್ನು ಕಾನೂನುಬದ್ಧಗೊಳಿಸಿದೆ.  ಇದೀಗ ದಯಾ ಮರಣ ಪಡೆಯಲು ಮಶಿನ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮಶಿನ್‌ಗೆ ಸ್ವಿಟ್ಜರ್ಲೆಂಡ್ ಸರ್ಕಾರ ಅನುಮತಿ ನೀಡಿದೆ.

ಪರ ವಿರೋಧದ ನಡುವೆ ಸ್ವಿಟ್ಜರ್‌ಲೆಂಡ್ ಇಚ್ಚಾಮರಣವನ್ನು ಕಾನೂನುಬದ್ದಗೊಳಿಸಿದೆ. ಇದೀಗ ಇಚ್ಚಾಮರಣಕ್ಕೆ ನೋವು ರಹಿತ ಸಾವು ಮಶಿನ್ ಅಭಿವೃದ್ಧಿ ಪಡಿಸಿದೆ ಈ ಮೂಲಕ ಹಲವು ದೇಶಗಳ ಹುಬ್ಬೇರಿಸಿದೆ. ದಯಾಮರಣ ಕುರಿತು ಸ್ವಿಟ್ಜಲ್‌ಲೆಂಡ್‌ನಲ್ಲಿ ಹಲವು ದಶಕಗಳಿಂದ ತೀವ್ರ ಚರ್ಚೆಯಾಗುತ್ತಿದೆ. ಇದಕ್ಕಾಗಿ ಹಲವು ಅಧ್ಯಯನ ಸಂಸ್ಥೆಗಳು ನೋವಿಲ್ಲದೆ ಮರಣ ನೀಡುವ ಕುರಿತು ಅಧ್ಯಯನ ನಡೆಸಿದೆ. ಸ್ವಿಟ್ಜರ್ಲೆಂಡ್ ದಯಾಮರಣವನನು ಕಾನೂನುಬದ್ಧಗೊಳಿಸಿದ ಬೆನ್ನಲ್ಲೇ,  ಕ್ಯಾಪ್ಯೂಲ್ ಶವಪೆಟ್ಟಿಗೆ ರೀತಿಯ ದಯಾಮರಣ ಪೆಟ್ಟಿಗೆಗೆ ಸ್ವಿಟ್ಜರ್‌ಲೆಂಡ್ ಗ್ರೀನ್ ಸಿಗ್ನಿಲ್ ನೀಡಿದೆ. 

ದಯಾಮರಣಕ್ಕೆ ಕೋರಿ ಕೊಡಗಿನಿಂದ ಪ್ರಧಾನಿ, ಸಿಎಂಗೆ ಪತ್ರ

ಶವಪಟ್ಟೆಗೆಯ ಆಕಾರದಲ್ಲಿನ ಕ್ಯಾಪ್ಸೂಲ್ ಒಳಗಡೆ ಮಲಗಿದರೆ ಸಾಕು. ಈ ಪೆಟ್ಟಿಗೆ ಒಳಗಡೆ ಆಮ್ಲಜನಕವನ್ನು ನಿರ್ಣಾಯಕ ಮಟ್ಟಕ್ಕೆ ತಗ್ಗಿಸುವ ಮೂಲಕ ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾ ಮೂಲಕ ಸಾವು ಸಂಭವಿಸುತ್ತದೆ. ಇದು ನೋವೇ ಇಲ್ಲದೆ ಕೇವಲ ಒಂದು ನಿಮಿಷದಲ್ಲಿ ನಡೆಯುವ ಪ್ರಕ್ರಿಯೆ ಎಂದು ಈ ಕ್ಯಾಪ್ಸೂಲ್ ತಯಾರಕರು ಹೇಳಿದ್ದಾರೆ. 

ನೋವಿಲ್ಲದೆ ದಯಮಾರಣ ಪಾಲಿಸುವ ಪೆಟ್ಟಿಗೆ ಹಿಂದಿನ ರೂವಾರಿ ಡಾ. ಫಿಲಿಪ್ ನಿಶ್ಚೆಕ್. ಡಾಕ್ಟರ್ ಡೆತ್ ಎಂದೇ ಹೆಸರುವಾಸಿಯಾಗಿರುವ ಫಿಲಿಪ್ ಸತತ ಅಧ್ಯಯನ ಬಳಿಕ ಈ ಪೆಟ್ಟಿಗೆ ಅಭಿವೃದ್ಧಿಪಡಿಸಿದ್ದಾರೆ. ಸ್ವಿಟ್ಜರ್‌ಲೆಂಡ್‌ನಲ್ಲಿ ದಯಾಮರಣ ಕಾನೂನುಬದ್ಧವಾಗಿರುವ ಕಾರಣ ಇತ್ತೀಗೆ 1300 ಮಂದಿ ಈ ಪೆಟ್ಟೆಗೆ ಸೇವೆ ಪಡೆಯಲು ಇಚ್ಚಿಸಿದ್ದಾರೆ.

ಪರೋಕ್ಷ ದಯಾಮರಣಕ್ಕೆ ಸುಪ್ರೀಂ ಅಸ್ತು - ಏನಿದು ಪರೋಕ್ಷ ದಯಾಮರಣ..?

ಡಾ.ಫಿಲಿಪ್ ಅಭಿವೃದ್ಧಿಪಡಿಸಿದ ಕ್ಯಾಪ್ಸೂಲ್ ಪೆಟ್ಟಿಗೆಯೊಳಗಿನ ದಯಾಮರಣ ಸೇವೆ ದುಬಾರಿಯಾಗಿದೆ. ಇದರಲ್ಲಿ ಸುಲಭ ಹಾಗೂ ಜನಸಾಮಾನ್ಯರ ಕೈಗೆಟುಕುವ ಮಾದರಿಯನ್ನು ಬಿಡುಗಡೆ ಮಾಡಲು ನಾವು ಸಜ್ಜಾಗಿದ್ದೇವೆ ಎಂದು ಫಿಲಿಪ್ ಹೇಳಿದ್ದಾರೆ.  

ಆದರೆ ಡಾ. ಫಿಲಿಪ್ ಕ್ರಮವನ್ನು ಹಲವರು ವಿರೋಧಿಸಿದ್ದಾರೆ. ಇದು ಆತ್ಮಹತ್ಯೆಯನ್ನು ವೈಭವೀಕರಿಸಿದ ವಿಧಾನವಾಗಿದೆ. ಗ್ಯಾಸ್ ಚೇಂಬರ್‌ನಲ್ಲಿನ ಸಾವಿನಿಂತಿದೆ. ಈ ರೀತಿಯ ವಿಧಾನ ಹಾಗೂ ಕ್ರಮಗಳನ್ನು ಪೋಷಿಸಬಾರದು ಎಂದು ಫಿಲಿಪ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಿಟ್ಜರ್ಲೆಂಡ್ ನಿರ್ಧಾರವನ್ನು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಹಲವರು ಸ್ವಾಗತಿಸಿದ್ದಾರೆ. ಈ ನಿರ್ಧಾರ ಭಾರತದಲ್ಲಿ ಆಗಲಿ ಎಂದು ಹಾರೈಸಿದ್ದಾರೆ. ಕರ್ನಾಟಕದ ಹಲವರು ಇಚ್ಚಾಮರಣವನ್ನು ಕಾನೂನುಬದ್ಧಗೊಳಿಸುವ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಲು ಕಾರಣವಿದೆ. ಅದುವೇ ಅರುಣಾ ಶಾನ್‌ಬಾಗ್ ಪ್ರಕರಣ. 

1973ರಲ್ಲಿ ನಡೆದ ಘನಘೋರ ಘಟನೆ ಭಾರತದಲ್ಲಿ ದಯಾಮರಣ ಕಾನೂನುಬದ್ಧಗೊಳಿಸುವ ಆಗ್ರಹವನ್ನು ಹೆಚ್ಚಿಸಿತು. ಉತ್ತರ ಕನ್ನಡದ ಹೊನ್ನಾವರದ ಅರುಣಾ ಶಾನ್ ಬಾಗ್, ಮುಂಬೈನ ದಾದರ್‌ನಲ್ಲಿ ಎಡ್ವರ್ಡ್ ಮೆಮೋರಿಯ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ವೃತ್ತಿಜೀವನ ಆರಂಭಿಸಿದರು. ಆದರೆ 1973ರಲ್ಲಿ ಆಸ್ಪತ್ರೆಯಲ್ಲಿ ಅರುಣಾ ಮೇಲೆ ವಾರ್ಡ್ ಬಾಯ್ ಸೋಹನ್ ಲಾಲ್ ಭರತ್ ವಾಲ್ಮೀಕಿ ಅತ್ಯಾಚಾರ ಮಾಡಿದ್ದ. ನಾಯಿ ಸರಪಳಿಯಿಂದ ಕುತ್ತಿಗೆ, ಕೈ ಕಾಲು ಕಟ್ಟಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ನರ್ಸ್ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅತ್ಯಾಚಾರದಲ್ಲಿ ಅರುಣಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು 11 ಗಂಟೆ ಬಳಿಕ ಅರುಣಾ ಅತ್ಯಾಚಾರವಾಗಿರುವುದು ಬೆಳಕಿಗೆ ಬಂದಿತ್ತು. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಕಾರಣ ಅರುಣಾ ಮದುಳು ನಿಷ್ಕ್ರೀಯವಾಗಿತ್ತು, ಮಾತು ಆಡುತ್ತಿರಲಿಲ್ಲ. ಕಣ್ಣು ಕಾಣುತ್ತಿರಲಿಲ್ಲ. ಆರೋಪಿಗೆ 7 ವರ್ಷ ಜೈಲು ಶಿಕ್ಷೆಯಾಯಿತು. ಆದರೆ ಇತ್ತ ಅರುಣ ಜೀವಂತ ಶವವಾದಳು.

ಮಾನವ ಹಕ್ಕುಗಳ ಹೋರಾಟಗಾರ್ತಿ, ಲೆಖಕಿ ಪಂಕಿ ವಿರಾನಿ ಜೀವಂತ ಶವವಾಗಿ ಆಸ್ಪತ್ರೆಯಲ್ಲಿರುವ ಅರುಣಾಗೆ ದಯಾಮರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 1973ರಿಂದ ಕೋಮಾದಲ್ಲಿದ್ದ ಅರುಣಾಗೆ ದಯಾಮರಣದ ಅಗತ್ಯವಿದೆ ಎಂದು ಅರ್ಜಿ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂ ಕೋರ್ಟ್ ಅರ್ಜಿ ತರಿಸ್ಕರಿಸಿತ್ತು. 42 ವರ್ಷಗಳಿಂದ ಕೋಮಾದಲ್ಲಿದ್ದ ಅರಣಾ 2015, ಮೇ 18 ರಂದು ನಿಧನರಾದರು. ಅರುಣಾ ಶಾನ್ ಭಾಗ್ ಪ್ರಕರಣ ಭಾರತದಲ್ಲಿ ದಯಾಮರಣ ಕಾನೂನು ಬದ್ಧಗೊಳಿಸಲು ಭಾರಿ ಹೋರಾಟಕ್ಕೆ ಪ್ರೇರಣೆ ನೀಡಿತ್ತು.

Follow Us:
Download App:
  • android
  • ios