ಮರ್ಸಿಡಿಸ್ ಬೆಂಜ್ ಕಾರ್ಖಾನೆಯೊಳಗೆ ನುಗ್ಗಿದ ಚಿರತೆ 6 ಗಂಟೆ ಕೆಲಸ ಸ್ಥಗಿತಗೊಳಿಸಿದ ಚೀತಾ ಪುಣೆಯ ಚಕನ್‌ನಲ್ಲಿರುವ ಮರ್ಸಿಡಿಸ್ ಬೆಂಜ್ ಪ್ಲಾಂಟ್‌

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿರುವ ವಿಸ್ತಾರವಾದ ಮರ್ಸಿಡಿಸ್ ಬೆಂಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ ಘಟಕದಲ್ಲಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ನಂತರ ವನ್ಯಜೀವಿ ಎಸ್‌ಒಎಸ್‌ ತಂಡದ ದೀರ್ಘ ಮತ್ತು ಕಠಿಣ ಪ್ರಯತ್ನದ ನಂತರ ಚಿರತೆಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗಿನ ಜಾವ ಐಷಾರಾಮಿ ಕಾರು ತಯಾರಿಕಾ ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಓಡಾಡುತ್ತಿರುವುದನ್ನು ಗಮನಿಸಿದ ಪುಣೆಯ ಚಕನ್‌ನಲ್ಲಿರುವ (Chakan) ಮರ್ಸಿಡಿಸ್ ಬೆಂಜ್ ಪ್ಲಾಂಟ್‌ನ ಕಾರ್ಮಿಕರು ಗಲಿಬಿಲಿಗೊಂಡರು ಮತ್ತು ಅಲಾರಾಂ ಸೌಂಡ್‌ ಮಾಡಿ ಎಲ್ಲರನ್ನು ಎಚ್ಚರಿಸಿದರು. ಚಿರತೆಯನ್ನು ನೋಡಿ ಆರಂಭದಲ್ಲಾದ ಭೀತಿ ಕಡಿಮೆಯಾದ ನಂತರ, ಮಹಾರಾಷ್ಟ್ರ (Maharashtra) ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ಆಗಮಿಸಿ 100 ಎಕರೆಯ ಈ ಕಾರ್ಖಾನೆಯಲ್ಲಿ ಶೋಧ ಕಾರ್ಯ ನಡೆಸಿದರು. 

Scroll to load tweet…

ಚಿರತೆಯನ್ನು ಬಲೆಗೆ ಬೀಳಿಸಿ ರಕ್ಷಿಸಲು ಸಹಾಯ ಮಾಡಲು ಮಾನಿಕ್ದೋಹ್ (Manikdoh) ಚಿರತೆ ರಕ್ಷಣಾ ಕೇಂದ್ರದಿಂದ ವನ್ಯಜೀವಿ ಎಸ್‌ಒಎಸ್‌ ತಂಡ ಹಾಗೂ ಪಶುವೈದ್ಯರನ್ನು ಕರೆಸಲಾಯಿತು. ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ, ಸ್ಥಳೀಯ ಪೊಲೀಸರ ಸಲಹೆಯ ಮೇರೆಗೆ ಅಲ್ಲಿದ್ದ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ದಾಳಿ ಮಾಡಲು ಬಂದ ಚಿರತೆ ಮುಂದೆ ಧೈರ್ಯವಾಗಿ ನಿಂತ ಮೂರುಕಾಲಿನ ಜಿಂಕೆ

ಸುಮಾರು ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಡಾ.ಶುಭಂ ಪಾಟೀಲ್ (Shubham Patil) ಮತ್ತು ಡಾ.ನಿಖಿಲ್ ಬಂಗಾರ್ (Nikhil Bangar) ಅವರನ್ನೊಳಗೊಂಡ ತಂಡಗಳು ಕಾರ್ಖಾನೆಯ ಶೆಡ್ ಒಂದರ ಅಂಗಡಿಯ ಮಹಡಿಯಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿ ನಂತರ ಆ ಪ್ರದೇಶವನ್ನು ಭದ್ರಪಡಿಸಿದರು. ನಂತರ ಭಯಗೊಂಡಿದ್ದ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಸುರಕ್ಷಿತ ದೂರದಿಂದ ಟ್ರ್ಯಾಂಕ್ವಿಲೈಸರ್ ಡಾರ್ಟ್ ಅನ್ನು ಹೊಡೆದು ಚಿರತೆ ಕಾಣಿಸಿಕೊಂಡ ಸುಮಾರು 6 ಗಂಟೆಗೆಳ ನಂತರ ಬೆಳಗ್ಗೆ 11.30 ರ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಯಿತು.

ಆಪರೇಷನ್‌ ಗಂಗಾ... ಉಕ್ರೇನ್‌ನಲ್ಲಿ ಸಾಕಿದ ಚಿರತೆ ಬಿಟ್ಟು ಬರಲಾರೆ ಎಂದ ವೈದ್ಯ

ನಂತರ ಸೆರೆ ಸಿಕ್ಕ ಚಿರತೆಯನ್ನು ವಿಶೇಷ ಸಾರಿಗೆ ಪಂಜರಕ್ಕೆ ಸ್ಥಳಾಂತರಿಸಲಾಯಿತು ಮತ್ತು ಜುನ್ನಾರ್‌ನಲ್ಲಿರುವ (Junnar) ಸೌಲಭ್ಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅದನ್ನು ಕಾಡಿಗೆ ಬಿಡುವ ಮೊದಲು ವೈದ್ಯಕೀಯ ವೀಕ್ಷಣೆಯಲ್ಲಿ ಇಡಲಾಗಿದೆ ಎಂದು ಎಂಎಫ್‌ಡಿ ರೇಂಜ್ ಫಾರೆಸ್ಟ್ ಆಫೀಸರ್ ಯೋಗೇಶ್ ಮಹಾಜನ್ (Yogesh Mahajan) ಹೇಳಿದ್ದಾರೆ. ವನ್ಯಜೀವಿ ಎಸ್‌ಒಎಸ್‌ನ ವನ್ಯಜೀವಿ ಪಶುವೈದ್ಯಾಧಿಕಾರಿ ಡಾ.ಬಂಗಾರ್ (Dr Bangar), ಸೆರೆ ಸಿಕ್ಕ ಚಿರತೆ ಸುಮಾರು 2 ರಿಂದ 3 ವರ್ಷ ವಯಸ್ಸಿನ ಗಂಡು ಚಿರತೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಉತ್ತರಪ್ರದೇಶದ (Uttar Pradesh) ಮೀರತ್‌ನಲ್ಲಿ ತಿರುಗಾಡುತ್ತಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಅದನ್ನು ಹಿಮಾಲಯ ವ್ಯಾಪ್ತಿಯಲ್ಲಿ ಬರುವ ಶಿವಾಲಿಕ್‌ ಕಾಡಿಗೆ (Shivalik Forest) ಬಿಟ್ಟಿದ್ದರು. ಮೀರತ್‌ನಿಂದ (Meerut) ಟ್ರಕ್‌ನಲ್ಲಿ ಚಿರತೆಯನ್ನು ಶಿವಾಲಿಕ್‌ ಕಾಡಿನತ್ತ ಸಾಗಿಸಿ ನಂತರ ಕಾಡಿನಲ್ಲಿ ಬಿಡಲಾಯಿತು. ಈ ವೇಳೆ ಗೂಡಿನ ಬಾಗಿಲು ತೆರೆಯುತ್ತಿದ್ದಂತೆ ಚಿರತೆ ಟ್ರಕ್‌ನಲ್ಲಿದ್ದ ಗೂಡಿನಿಂದ ಛಂಗನೇ ನೆಗೆದು ಕಾಡಿನೊಳಗೆ ಸೇರಿಕೊಂಡಿತ್ತು.