ದಾಳಿ ಮಾಡಲು ಬಂದ ಚಿರತೆ ಮುಂದೆ ಧೈರ್ಯವಾಗಿ ನಿಂತ ಮೂರುಕಾಲಿನ ಜಿಂಕೆ
- ಹೆದರದೆ ಧೈರ್ಯವಾಗಿ ನಿಂತ ಜಿಂಕೆ
- ಬೇಟೆಯಾಡಲು ಬಂದ ಚಿರತೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಜಿಂಕೆಗಳಂತಹ ವೇಗವಾಗಿ ಓಡಬಲ್ಲ ಪ್ರಾಣಿಗಳು ತಮ್ಮನ್ನು ಭಕ್ಷಿಸುವ ಪ್ರಾಣಿಗಳು ದೂರದಲ್ಲಿ ಕಾಣಿಸಿಕೊಳ್ಳುವಾಗಲೇ ಜಾಗೃತವಾಗಿ ಕಾಲಿಗೆ ಬುದ್ಧಿ ಹೇಳಲು ಶುರು ಮಾಡುತ್ತವೆ. ಆದರೆ ಇಲ್ಲಿ ಕಾಣಿಸುವ ವೀಡಿಯೊವೊಂದರಲ್ಲಿ, ಚಿರತೆ ಇಂಚುಗಳಷ್ಟು ದೂರದಲ್ಲಿ ನಿಂತಿದ್ದರೂ ತನ್ನ ಜೀವದ ಮೇಲೆ ಯಾವುದೇ ಚಿಂತೆ ಇಲ್ಲದೇ ಜಿಂಕೆ ಮೇಯುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದನ್ನು ಕಾಣಬಹುದು.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ (Susanta Nanda) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜಿಂಕೆ ತೆಳುವಾಗಿ ಕಾಣುವ ತಂತಿ ಬೇಲಿಯ ಪಕ್ಕದಲ್ಲಿ ಹುಲ್ಲು ಮೇಯುತ್ತಾ ಹೊಟ್ಟೆ ತಂಬಿಸುತ್ತಿರುತ್ತದೆ. ಈ ವೇಳೆ ಅಲ್ಲಿಗೆ ತನ್ನ ಬೇಟೆ ಅರಸಿ ಬಂದ ಚಿರತೆ ಅತ್ತಿತ್ತ ನೋಡಿ ಜಿಂಕೆಯ ಮೇಲೆ ಹಾರಲು ಯತ್ನಿಸುತ್ತಿರುತ್ತದೆ. ಆದರೆ ಇದ್ಯಾವುದನ್ನು ಕ್ಯಾರೇ ಮಾಡದ ಚಿರತೆ (cheetah) ತನ್ನಷ್ಟಕ್ಕೆ ಮೇಯುತ್ತಲೇ ಇರುತ್ತದೆ.
ಇನ್ನು ವಿಚಿತ್ರ ಎಂದರೆ ಈ ಜಿಂಕೆಗಿರುವುದು ಮೂರೇ ಕಾಲುಗಳು, ಕೇವಲ ಮೂರು ಕಾಲುಗಳನ್ನು ಹೊಂದಿರುವ ಜಿಂಕೆ (deer) ಅಲ್ಲಿಯೇ ಧೈರ್ಯವಾಗಿ ನಿಂತಿರುವುದರಿಂದ ಚಿರತೆ ಏನು ಮಾಡಲಾಗದೇ ಸುಮ್ಮನಾಗುತ್ತದೆ. ಈ ದೃಶ್ಯವನ್ನು ವಿಡಿಯೋ ಮಾಡುತ್ತಿರುವವರು ಈ ವಿಚಿತ್ರವನ್ನು ನೋಡಿ ಅಚ್ಚರಿಯೊಂದಿಗೆ ಬೊಬ್ಬೆ ಹಾಕಿ ನಗುತ್ತಿರುವುದು ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ.
ಆಹಾರಕ್ಕಾಗಿ ಹೋರಾಟ... ಜಿಂಕೆಯನ್ನು ಕಚ್ಚಿ ಅತಿಂದಿತ್ತ ಎಳೆದಾಡಿದ ಸಿಂಹ, ಮೊಸಳೆ
ಅವರಲ್ಲಿ ಒಬ್ಬರು ಜಿಂಕೆಯಲ್ಲಿ ಕೇಳುವಂತೆ, 'ನಿನಗೇನಾಗಿದೆ? ಅದು ನಿನ್ನನ್ನು ತಿನ್ನಲು ಬಂದ ಪ್ರಾಣಿ ಎಂದು ಅವರಷ್ಟಕ್ಕೆ ಹೇಳುತ್ತಾರೆ. ಮಾರ್ಚ್ 12, ರಂದು ಈ ವಿಡಿಯೋ ಪೋಸ್ಟ್ ಆಗಿದ್ದು, 50,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದಾರೆ. ಕಾಮೆಂಟ್‌ಗಳಲ್ಲಿ, ಚಿರತೆ ಏಕೆ ಜಿಂಕೆ ಮೇಲೆ ಜಿಗಿಯಲಿಲ್ಲ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಘಟನೆ ಧೈರ್ಯಂ ಸರ್ವಾತ್ರ ಸಾಧನಂ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ತನಗೆ ಹಸಿವಾಗದೇ ಹೋದರೆ ಯಾವ ಪ್ರಾಣಿಯೂ ಮತ್ತೊಂದರ ಮೇಲೆ ದಾಳಿ ನಡೆಸದು. ಹೊಟ್ಟೆ ತುಂಬಿದಲ್ಲಿ ಅದು ತನ್ನ ಆಹಾರ ಕಣ್ಣೆದುರೇ ಓಡಾಡಿದರು ಕ್ಯಾರೇ ಎನ್ನದು. ಇದಕ್ಕೊಂದು ಉತ್ತಮ ಉದಾಹರಣೆ ನಾಗರಹೊಳೆ ಅಭಯರಾಣ್ಯದ ಈ ವಿಡಿಯೋ. ವಿಡಿಯೋದಲ್ಲಿ ತೋರಿಸುವಂತೆ ನೂರಾರು ಜಿಂಕೆಗಳು ಕಾಡಿನಲ್ಲಿ ಅಲೆದಾಡುತ್ತಿರುತ್ತವೆ. ಅವುಗಳ ಎದುರೇ ಬರುವ ಹುಲಿ ತನಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲದಂತೆ ರಾಜ ಗಾಂಭೀರ್ಯ ನಡೆಯ ಮೂಲಕ ಮುಂದೆ ಸಾಗುತ್ತದೆ. ಆದರೆ ಜಿಂಕೆಗಳು ಮಾತ್ರ ಆತಂಕದಿಂದ ಅತ್ತಿತ್ತ ಚದುರಿ ಓಡಲು ಪ್ರಯತ್ನಿಸುತ್ತವೆ.
ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಮರಿಯನ್ನು ರಕ್ಷಿಸಿದ ಮುದ್ದು ಶ್ವಾನ
2016 ರ ಸೆಪ್ಟೆಂಬರ್ 17 ರಂದು ಸೆರೆಯಾದ ನಾಗರಹೊಳೆ ಅಭಯಾರಣ್ಯದಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು, ವೈರಲ್ ಹಗ್ ಎಂಬ ಯೂಟ್ಯೂಬ್ ಚಾನೆಲ್ 2019ರ ಮಾರ್ಚ್ 29 ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್ ಆಗುತ್ತಿದೆ.
ಹಿಂದೆ ರಾಜೀವ್ ಗಾಂಧಿ (Rajiv Gandhi) ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕದ ನಾಗರಹೊಳೆ (Nagarahole) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸ್ಥಳವು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಹುಲಿ ಮತ್ತು ಜಿಂಕೆಗಳಲ್ಲದೆ, ಈ ಸ್ಥಳವು ಚಿರತೆ (leopard), ನೈಋತ್ಯ ಲಾಂಗೂರ್, ಏಷ್ಯಾಟಿಕ್ ಆನೆ (Asiatic Elephant), ಗೌರ್, ಸ್ಲೋತ್ ಕರಡಿ ಮತ್ತು ಇನ್ನೂ ಅನೇಕ ಪ್ರಾಣಿಗಳಿಗೆ ತನ್ನ ಒಡಲಲ್ಲಿ ಆಶ್ರಯ ನೀಡಿದೆ.