ಉತ್ತರಪ್ರದೇಶದ ಮೀರತ್‌ನಿಂದ ರಕ್ಷಿಸಲ್ಪಟ್ಟ ಚಿರತೆ ಶಿವಾಲಿಕ್ ಕಾಡುಗಳಿಗೆ ಚಿರತೆಯನ್ನು ಬಿಟ್ಟ ಅರಣ್ಯಾಧಿಕಾರಿಗಳು ಬಾಗಿಲು ತೆಗೆಯುತ್ತಿದ್ದಂತೆ ಛಂಗನೆ ನೆಗೆದು ಪರಾರಿಯಾದ ಚೀತಾ
ಮೀರತ್(ಮಾ.7): ಉತ್ತರಪ್ರದೇಶದ (Uttar Pradesh) ಮೀರತ್‌ನಲ್ಲಿ ತಿರುಗಾಡುತ್ತಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಅದನ್ನು ಹಿಮಾಲಯ ವ್ಯಾಪ್ತಿಯಲ್ಲಿ ಬರುವ ಶಿವಾಲಿಕ್ ಕಾಡಿಗೆ (Shivalik Forest) ಬಿಟ್ಟಿದ್ದಾರೆ. ಮೀರತ್‌ನಿಂದ (Meerut) ಟ್ರಕ್‌ನಲ್ಲಿ ಚಿರತೆಯನ್ನು ಶಿವಾಲಿಕ್ ಕಾಡಿನತ್ತ ಸಾಗಿಸಿ ನಂತರ ಕಾಡಿನಲ್ಲಿ ಬಿಡಲಾಯಿತು. ಈ ವೇಳೆ ಗೂಡಿನ ಬಾಗಿಲು ತೆರೆಯುತ್ತಿದ್ದಂತೆ ಟ್ರಕ್‌ನಲ್ಲಿದ್ದ ಗೂಡಿನಿಂದ ಛಂಗನೇ ನೆಗೆದು ಕಾಡಿನೊಳಗೆ ಸೇರಿಕೊಂಡಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (IFS officer) ಅಧಿಕಾರಿ ರಮೇಶ್ ಪಾಂಡೆ (Ramesh Pandey)ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ತಮ್ಮ ಆವಾಸಸ್ಥಾನಗಳಿಗೆ ವಾಪಸ್ ಬಿಡುವ ವಿಚಾರವೂ ಕ್ಷೇತ್ರ ಸಿಬ್ಬಂದಿಗೆ ಯಾವಾಗಲೂ ತೃಪ್ತಿಕರವಾದ ವಿಚಾರವಾಗಿದೆ. ಯಶಸ್ವಿಯಾಗಿ ಚಿರತೆ ರಕ್ಷಣೆ ಮಾಡಿ ಅದರ ಆವಾಸಸ್ಥಾನದಲ್ಲಿ ಬಿಟ್ಟಂತಹ ಮೀರತ್‌ನ ಅರಣ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳು ಎಂದು ಬರೆದು ರಮೇಶ್ ಪಾಂಡೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ರಕ್ಷಿಸಿ ಕಾಡಿಗೆ ಬಿಟ್ಟಂತಹ ಈ ಚಿರತೆಗೆ ಪಲ್ಲವ್ ಎಂದು ಹೆಸರಿಡಲಾಗಿದೆ. ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಮೀರತ್‌ನ ಅರಣ್ಯ ಇಲಾಖೆಯ 35 ಸಿಬ್ಬಂದಿ ಭಾಗವಹಿಸಿದ್ದರು. ಈ ವಿಡಿಯೋವನ್ನು ಹತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇನ್ನು ಚಿರತೆಯನ್ನು ಬಿಟ್ಟಂತಹ ಶಿವಾಲಿಕ್ ಕಾಡುಗಳು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವುದು. ಶಿವಾಲಿಕ ಪರ್ವತಗಳು ವಿವಿಧ ರೀತಿಯ ಸಸ್ಯ ಪ್ರಾಣಿಗಳು ಜೀವಿಸುವ ಸುಂದರ ಪರ್ವತ ಶ್ರೇಣಿಯಾಗಿದೆ. ಈ ಪ್ರದೇಶದಲ್ಲಿ ವಿಶಿಷ್ಟವಾಗಿ ನದಿಯ ದಂಡೆಗಳ ಪಕ್ಕದಲ್ಲಿ ಬೆಳೆಯುವ ಎತ್ತರದ ಹುಲ್ಲುಗಾವಲುಗಳು ಹಾಗೂ 'ಖೈರ್' ಮತ್ತು 'ಸಿಸೂ' ಎಂಬ ಬಗೆಗಳ ಮಳೆ ಕಾಡುಗಳು ಇವೆ. ಇಲ್ಲಿ ಅನೇಕ ದೊಡ್ಡಗಾತ್ರದ ಸಸ್ತನಿಗಳನ್ನು ಕಾಣಬಹುದು. ಈ ಅರಣ್ಯಗಳು ಆನೆಗಳು, ಜೌಗು ಜಿಂಕೆ, ಬಾರ್ಕಿಂಗ್ ಡೀರ್, ಚೀತಲ್, ಕಸ್ತೂರಿ ಜಿಂಕೆ, ಕಾಡು ಹಂದಿ, ಚೆರತೆ, ಕಾಡು ನಾಯಿ, ಕತ್ತೆ ಕಿರುಬಗಳು, ನರಿ, ಹುಲಿ, ಸಿಂಹ ಮುಂತಾದ ಪ್ರಾಣಿಗಳಿಂದ ತುಂಬಿದ್ದು ವೈವಿಧ್ಯ ಪ್ರಾಣಿ ಸಂಪತ್ತನ್ನು ಹೊಂದಿದೆ. ಜೊತೆಗೆ ಅಪರೂಪದ ಪ್ರಾಣಿಗಳೆಂದು ಪರಿಗಣಿಸಲಾಗುವ ಒಂದು ಕೊಂಬಿನ ಖಡ್ಗಮೃಗ ಹಾಗೂ ಪಿಗ್ಮಿ ಹಂದಿಗಳೂ ಇಲ್ಲಿ ಕಂಡುಬರುತ್ತವೆ. ಕಾರ್ಬೆಟ್ ರಾಷ್ಟ್ರಿಯ ಉದ್ಯಾನವನದ ಒಂದು ಭಾಗವಾದ 'ಪತ್ಲಿ ದೂನ್' ಎಂಬ ಕಣಿವೆ, ಶಿವಾಲಿಕ ಪರ್ವತಗಳಲ್ಲಿ ತನ್ನ ಸಸ್ಯ ಹಾಗೂ ಪ್ರಾಣಿಗಳನ್ನು ಸಂರಕ್ಷಿಸುವ ಏಕಮಾತ್ರ ಪ್ರದೇಶವಾಗಿದೆ. ಈ ಕಣಿವೆ ಹಚ್ಚಹಸಿರಾದ ಹುಲ್ಲುಗಾವಲುಗಳು ಹಾಗೂ ಸೋಂಪಾದ 'ಸಾಲ್' ಅರಣ್ಯಗಳಿಂದ ಕೂಡಿದೆ.
ಚಿರತೆಯನ್ನೇ ಹೆದರಿಸಿ ಓಡಿಸಿದ ನಾಯಿ... ವಿಡಿಯೋ ಸಖತ್ ವೈರಲ್
ಈ ಪ್ರದೇಶದಲ್ಲಿ ಅನೇಕ ಪ್ರಸಿದ್ದ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಕೆಲವು ರೇಣುಕಾ ಸರೋವರ, ಶಿವಾಲಿಕ ಫ಼ಾಸಿಲ್ ಪಾರ್ಕ್, ಪತ್ಲಿ ದೂನ್, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಡೆಹರಾಡೂನ್ ಹಾಗೂ ಶಿಮ್ಲಾ ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾ, ಶಿವಾಲಿಕ್ ಪರ್ವತ ಶ್ರೇಣಿಗಳಲ್ಲಿ ಬರುವ ಒಂದು ಆಕರ್ಷಿಕ ಗಿರಿಧಾಮವಾಗಿದೆ. ಭಾರತದ 'ಗಿರಿಧಾಮಗಳ ರಾಣಿ'ಯೆಂದು ಶಿಮ್ಲಾ ಹೆಸರಾಗಿದೆ. ಇದು ಹಿಮಾಚಲ ಪ್ರದೇಶದ ಪ್ರಧಾನ ವಾಣಿಜ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಇದರಂತೆಯೆ ಇಲ್ಲಿ ಅನೇಕ ಸುಂದರ ಗಿರಿದಾಮಗಳು ಹಾಗೂ ಅನೇಕ ಧಾರ್ಮಿಕ ಕೇಂದ್ರಗಳಿವೆ. ಶಿವಾಲಿಕ ಪರ್ವತಗಳಲ್ಲಿ ತುಂಬ ಪ್ರಸಿದ್ದವಾದ ಸ್ಥಳವೆಂದರೆ ಡೆಹರಾಡೂನ್. ಉತ್ತರಾಖಂಡ ರಾಜ್ಯದ ರಾಜಧಾನಿಯಾದ ಡೆಹರಾಡೂನ್, ಶಿವಾಲಿಕ ಪ್ರದೇಶದ ದೂನ್ ಕಣಿವೆಯಲ್ಲಿದೆ. ಈ ನಗರ ತನ್ನ ಚಿತ್ರಸದೃಶ್ಯ, ಭೂದೃಶ್ಯಕ್ಕೆ ಹಾಗೂ ಸೌಮ್ಯ ಹವಾಮಾನಕ್ಕೆ ಎಲ್ಲೆಡೆಯೂ ಪ್ರಸಿದ್ದವಾಗಿದೆ. ಇಂತಹ ಸ್ಥಳಗಳಿರುವುದರಿಂದ ಶಿವಾಲಿಕ ಪರ್ವತಗಳು ಶಾಂತಿ ಮತ್ತು ಸೌಂದರ್ಯದಿಂದ ಕೂಡಿದ ಭೂಮಿ ಮೇಲಿನ ಸ್ವರ್ಗವಾಗಿದೆ.
50 ಅಡಿ ಆಳದ ಬಾವಿಗೆ ಬಿದ್ದ ಚಿರತೆ... ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್