ಚಿರತೆಯನ್ನೇ ಹೆದರಿಸಿ ಓಡಿಸಿದ ನಾಯಿ... ವಿಡಿಯೋ ಸಖತ್ ವೈರಲ್

  • ದಾಳಿ ಮಾಡಲು ಬಂದ ಚಿರತೆಯನ್ನ ಓಡಿಸಿದ ಶ್ವಾನ
  • ಐಎಎಸ್ ಅಧಿಕಾರಿ ಅವನೀಶ್ ಶರಣ್ ಪೋಸ್ಟ್ ಮಾಡಿದ ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌
Dog vs leopard dog scaring away a Leopard video goes viral akb

ನಾಯಿಗೆ ಹೋಲಿಸಿದರೆ ಚಿರತೆ ಅದರಿಂದ ಮೂರು ಪಾಲು ಶಕ್ತಿಶಾಲಿ ಪ್ರಾಣಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇಲ್ಲಿ ನಾಯಿಯೊಂದು ಚಿರತೆಯನ್ನು ಕೇವಲ ಬೊಗಳುವ ಮೂಲಕ ಓಡಿಸಿದೆ. ಸಂಸ್ಕೃತದಲ್ಲಿ 'ಧೈರ್ಯಂ ಸರ್ವತ್ರ ಸಾಧನಂ' ಎಂಬ ಉಕ್ತಿ ಇದೆ. ಅಂದರೆ ಧೈರ್ಯವೇ ಎಲ್ಲಕ್ಕಿಂತ ದೊಡ್ಡ ಆಯುಧ ಎಂಬುದು ಇದರ ಅರ್ಥ. ಈ ಮಾತನ್ನು ಶ್ವಾನವೂ ಸರಿಯಾಗಿ ತಿಳಿದುಕೊಂಡಂತಿದ್ದು, ದಾಳಿ ಮಾಡಲು ಬಂದ ಚಿರತೆಯ ಎದುರು ಹೆದರಿ ಓಡದೇ ಧೈರ್ಯವಾಗಿ ನಿಂತು ತನ್ನ ಜೀವ ಉಳಿಸಿಕೊಂಡಿದೆ. ಒಂದು ವೇಳೆ ಶ್ವಾನವೇನಾದರು ಚಿರತೆಗೆ ಹೆದರಿ ಓಡಿ ಹೋಗಿದ್ದರೆ ಎಲ್ಲವೂ ಕ್ಷಣದಲ್ಲಿ ಮುಗಿದು ಬಿಡುತ್ತಿತ್ತು. ಚಿರತೆಗೆ ಶ್ವಾನ ಆಹಾರವಾಗುತ್ತಿತ್ತು. ಆದರೆ ಹಾಗಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ಈ ಧೈರ್ಯವಂತಿಕೆಯ ವಿಡಿಯೋ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಚಿರತೆ ದಾಳಿ ಮಾಡಲು ಬರುತ್ತಿದ್ದ ವೇಳೆ ನಾಯಿ ಮಣ್ಣು ರಸ್ತೆಯೊಂದರ ಮೇಲೆ ಬಿದ್ದುಕೊಂಡಿರುತ್ತದೆ. ಈ ವೇಳೆ ಧುತ್ತನೇ ಬಂದು ದಾಳಿ ಮಾಡಲು ಚಿರತೆ ಮುಂದಾಗಿದ್ದು, ಕೂಡಲೇ ಎಚ್ಚೆತ್ತುಕೊಳ್ಳುವ ಶ್ವಾನ ಎದ್ದು ನಿಂತು ಜೋರಾಗಿ ಬೊಗಳಲು ಶುರು ಮಾಡುತ್ತದೆ. ಇದನ್ನು ನೋಡಿದ ಚಿರತೆ ಸ್ವಲ್ಪ ಸ್ವಲ್ಪವೇ ಹಿಂದಕ್ಕೆ ಸರಿಯಲು ಶುರು ಮಾಡಿ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಕಾಡಿಗೆ ಹೋಗುತ್ತದೆ. 

 

ಇದು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಆದರೆ ಈ ವೀಡಿಯೊವನ್ನು ಗಮನಿಸಿದಾಗ ಇದು ಯಾವುದೋ ರಾಷ್ಟ್ರೀಯ ಉದ್ಯಾನವನ ಅಥವಾ ವನ್ಯಜೀವಿ ಅಭಯಾರಣ್ಯವಾಗಿದ್ದು,  ಸಫಾರಿ ಜೀಪ್‌ನಲ್ಲಿ ಬಂದವರು ಯಾರೋ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ತೋರುತ್ತದೆ. ಈ ವಿಡಿಯೋ ನೋಡಿದ ಜನ ಜೀವವೇ ಹೋಗುವಂತಹ ಪ್ರತಿಕೂಲ ಸಂದರ್ಭದಲ್ಲಿ ಶ್ವಾನದ ವಿಶ್ವಾಸ ಮತ್ತು ಶೌರ್ಯ ಮೆರೆದಿರುವುದಕ್ಕೆ ಶ್ವಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಅಲ್ಲಿ ಮನುಷ್ಯರ ಉಪಸ್ಥಿತಿಯೂ ಇದ್ದ ಕಾರಣ ಚಿರತೆ ತನ್ನ ಬೇಟೆಯನ್ನು ತೊರೆದಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

Cheeta Lucknow Trip: ಲಖ್ನೋದ ಬೀದಿಗಳಲ್ಲಿ ಸುತ್ತುತ್ತಿದ್ದ ಚಿರತೆ ಕೊನೆಗೂ ಅಂದರ್‌

ಒಂದು ವೇಳೆ ಆ ಚಿರತೆ ಹಸಿದಿದ್ದರೆ ಅದು ಇದಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿರುತ್ತಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಅರಣ್ಯ ಪ್ರದೇಶದಲ್ಲಿ ನಾಯಿಯ ಉಪಸ್ಥಿತಿ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಫೆಬ್ರವರಿ 17 ರಂದು ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪ್ಲಾಸ್ಟಿಕ್‌ ಡಬ್ಬಿಯೊಳಗೆ ತಲೆ ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ

Latest Videos
Follow Us:
Download App:
  • android
  • ios