Asianet Suvarna News Asianet Suvarna News

ಮಾವಿನ ಮರವೇರಿದ ಚಿರತೆ: ಬರೋಬರಿ 8 ಗಂಟೆ ನಡೆಯಿತು ರಕ್ಷಣಾ ಕಾರ್ಯ

ಕೆಲ ದಿನಗಳ ಹಿಂದೆ ಚಿರತೆಯೊಂದು ಮರವೇರಿ ಕೋತಿಯೊಂದನ್ನು ಬೇಟೆಯಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಇದೀಗ ಕಾಡಂಚಿನ ಗ್ರಾಮವೊಂದಕ್ಕೆ ಬಂದ ಚಿರತೆಯೊಂದು ಮಾವಿನ ಮರವೇರಿ ಕುಳಿತಿದ್ದು, ಇದರಿಂದ ಭಯಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

leopard climbed a mango tree in alipurduar see rescue operation akb
Author
Bangalore, First Published Jun 22, 2022, 4:02 PM IST

ಕೆಲ ದಿನಗಳ ಹಿಂದೆ ಚಿರತೆಯೊಂದು ಮರವೇರಿ ಕೋತಿಯೊಂದನ್ನು ಬೇಟೆಯಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಇದೀಗ ಕಾಡಂಚಿನ ಗ್ರಾಮವೊಂದಕ್ಕೆ ಬಂದ ಚಿರತೆಯೊಂದು ಮಾವಿನ ಮರವೇರಿ ಕುಳಿತಿದ್ದು, ಇದರಿಂದ ಭಯಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬರೋಬರಿ 8 ಗಂಟೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಹಿಡಿದಿದ್ದಾರೆ. ಪಶ್ಚಿಮ ಬಂಗಾಳದ ಅಲಿಪುರದಾರ್‌ನಲ್ಲಿ ಈ ಘಟನೆ ನಡೆದಿದೆ. 

ಚಿರತೆ ಮರ ಹತ್ತುವುದರಲ್ಲಿ ನಿಪುಣತನಕ್ಕೆ ಹೆಸರಾದ ಪರಭಕ್ಷಕ ಪ್ರಾಣಿ. ಹಾಗೆಯೇ ಭಾರಿ ಎತ್ತರದ ಮರವೊಂದಕ್ಕೆ ಏರಿ ಕುಳಿತ ಚಿರತೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೃಹತ್ ಮಾವಿನ ಮರದ ತುದಿ ಏರಿ ಕುಳಿತ ಚಿರತೆಯನ್ನು ಕಂಡು ಜನರು ಭಯಭೀತರಾದರಲ್ಲದೇ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಚಿರತೆ ನೋಡಲು ಆಗಮಿಸಿದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕ ಕೂಡಲೇ ರಕ್ಷಣಾ ತಂಡ ಚಿರತೆಯನ್ನು ರಕ್ಷಿಸಲು ಸ್ಥಳಕ್ಕಾಗಮಿಸಿತ್ತು. ಬಳಿಕ ಸುಮಾರು 8 ಗಂಟೆಗಳ ಪ್ರಯತ್ನದ ಬಳಿಕ ಚಿರತೆಯನ್ನು ಕೆಳಗೆ ಇಳಿಸಲಾಯಿತು.

ಈ 14 ಸೆಕೆಂಡುಗಳ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಜೀವನದಲ್ಲಿ ಈ ಮಟ್ಟದ ಪ್ರೇರಣೆ ಬೇಕು ಎಂದು ಬರೆದುಕೊಂಡಿದ್ದಾರೆ. 51 ಸಾವಿರಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಮುಂದಿನ ಟ್ವೀಟ್‌ನಲ್ಲಿ ಸುಮಾರು 8 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಲಾಯಿತು ಎಂದು ಐಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಈ ಪ್ರದೇಶವು ತುಂಬಾ ಜನದಟ್ಟಣೆಯಿಂದ ಕೂಡಿತ್ತು. ಅದಾಗ್ಯೂ ರಕ್ಷಣಾ ತಂಡ ಜನರನ್ನು ಅದ್ಭುತವಾಗಿ ನಿಭಾಯಿಸಿತು ಎಂದು ಅಧಿಕಾರಿ ಬರೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಜನರು  ಬಗೆ ಬಗೆ ಕಾಮೆಂಟ್ ಮಾಡುತ್ತಿದ್ದಾರೆ. ಬಹುಶಃ ಚಿರತೆ ಮಾವಿನ ಹಣ್ಣು ತರಲು ಮರವೇರಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಧುತ್ತನೇ ಬಂದು ಸೈಕಲ್ ಸವಾರನ ಮೇಲೆರಗಿದ ಚೀತಾ: ವಿಡಿಯೋ ನೋಡಿ

ಇತ್ತೀಚೆಗೆ ಕಾಡಿನ ಪ್ರಾಣಿಗಳು (Wild Animal) ಆಹಾರ ಅರಸಿ ನಾಡಿನತ್ತ ಬಂದು ಅಪಾಯಕ್ಕೆ ಸಿಲುಕುವುದು ಸಾಮಾನ್ಯ ಎನಿಸಿದೆ. ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಆಹಾರ ಅರಸಿ ಬಂದಿದ್ದ ಚಿರತೆಯೊಂದು ತೆರೆದ ಬಾವಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿದ್ದರು.

ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ: ಬೋನಿಳಿಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ
 

Follow Us:
Download App:
  • android
  • ios