ಚಿರತೆನೂ ಸೂರ್ಯ ನಮಸ್ಕಾರ ಮಾಡುತ್ತೆ ನೋಡಿ... ವೈರಲ್ ವೀಡಿಯೋ
ಮನುಷ್ಯರು ಬೆಳಗೆದ್ದು ಮೈಮುರಿಯುವುದನ್ನು ನೀವು ನೋಡಿರಬಹುದು. ನೀವು ಕೂಡ ಮೈ ಮುರಿಯಬಹುದು. ಆದರೆ ಚಿರತೆ ಮೈ ಮುರಿಯುವುದನ್ನು ನೀವು ನೋಡಿದ್ದೀರಾ? ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಪೋಸ್ಟ್ ಮಾಡಿರುವ ಈ ವೀಡಿಯೋದಲ್ಲಿ ಚಿರತೆಯೊಂದು ಮುಂಜಾನೆ ಸಮಯದಲ್ಲಿ ಮೈ ಮುರಿಯುತ್ತಿದೆ.
ಕಾಡು ಪ್ರಾಣಿಗಳ ಜೀವ ವೈವಿಧ್ಯ ಲೋಕ ಬಹಳ ಅಮೋಘವಾದುದು. ಕೆಲವೊಮ್ಮೆ ಕಾಡುಪ್ರಾಣಿಗಳು ಕೂಡ ಮನುಷ್ಯರಂತೆ ವರ್ತಿಸುತ್ತವೆ. ಕಾಡುಪ್ರಾಣಿಗಳ ಅನೇಕ ಬುದ್ಧಿವಂತ ವರ್ತನೆಯನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಭಾರತದ ಅನೇಕ ಅರಣ್ಯ ಸೇವೆಯ ಅಧಿಕಾರಿಗಳು ವನ್ಯಜೀವಿಗಳ ಅನೇಕ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಚಿರತೆಯೊಂದರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಮನುಷ್ಯರು ಬೆಳಗೆದ್ದು ಮೈಮುರಿಯುವುದನ್ನು ನೀವು ನೋಡಿರಬಹುದು. ನೀವು ಕೂಡ ಮೈ ಮುರಿಯಬಹುದು. ಆದರೆ ಚಿರತೆ ಮೈ ಮುರಿಯುವುದನ್ನು ನೀವು ನೋಡಿದ್ದೀರಾ? ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಪೋಸ್ಟ್ ಮಾಡಿರುವ ಈ ವೀಡಿಯೋದಲ್ಲಿ ಚಿರತೆಯೊಂದು ಮುಂಜಾನೆ ಸಮಯದಲ್ಲಿ ಮೈ ಮುರಿಯುತ್ತಿದೆ. ಅಷ್ಟೇ ಅಲ್ಲದೇ ತನ್ನೆರಡು ಕಾಲುಗಳನ್ನು ಮುಂದೆ ಚಾಚಿ ಸೂರ್ಯ ನಮಸ್ಕಾರ ಮಾಡುವಂತೆ ತೋರುತ್ತದೆ.
ಯುಗಾದಿಗೆ ಭರ್ಜರಿ ಹೊಸತೊಡಕು: 200 ನಾಟಿಕೋಳಿ ರುಚಿ ಕಂಡ ಚಿರತೆ!
21 ಸೆಕೆಂಡ್‌ಗಳ ಈ ವೀಡಿಯೋವನ್ನು ಪೋಸ್ಟ್ ಮಾಡಿರುವ ಸುಶಾಂತ್ ನಂದಾ, ಚಿರತೆಯಿಂದ ಸೂರ್ಯ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ. ನಿನ್ನೆ ಪೋಸ್ಟ್ ಆಗಿರುವ ಈ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಈ ಯೋಗ ಚಟುವಟಿಕೆಗಳನ್ನು ಅವುಗಳಿಗೆ ಕಲಿಸಿದ್ಯಾರು? ನೋ ಯೂಟ್ಯೂಬ್, ನೋ ಬುಕ್ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಫಿಟ್ನಸ್ ಫ್ರೀಕ್ ಚಿರತೆ ಎಂದು ಹಾಸ್ಯ ಮಾಡಿದ್ದಾರೆ.
ಮತ್ತೊಬ್ಬರು ಇದು ಚಿರತೆಯ ಸಧೃಡ ಮೈಕಟ್ಟಿನ ರಹಸ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಹೌದು ಇದು ನಿಜವಾಗಿಯೂ ಸೂರ್ಯ ನಮಸ್ಕಾರ (Surya Namaskar), ಇದನ್ನು ನನ್ನ ನಾಯಿಯೂ ಸಂಜೆಯ ಸಮಯದಲ್ಲಿ ಮಾಡುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಸೂರ್ಯ ನಮಸ್ಕಾರ ಅಲ್ಲ, ಇದು ಬೇಟೆಯಾಡಲು ಹೊರ ಹೋಗುವುದಕ್ಕೆ ಉದಾಸೀನಗೊಂಡು ಮೈ ಮುರಿಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಜೊತೆಯಾಗಿ ಸಾಗುತ್ತಿರುವ ಚಿರತೆ, ಬ್ಲಾಕ್ ಪಾಂಥೆರ್ : ಅಪರೂಪದ ವಿಡಿಯೋ ವೈರಲ್
ಕಾಡು ಪ್ರಾಣಿಗಳ ಚಲನವಲನಗಳನ್ನು ಗಮನಿಸುವ ಸಲುವಾಗಿ ಅಳವಡಿಸಿದ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದೆ. ಈ ವಿಡಿಯೋವನ್ನು ಮೂಲತಃ ಮತ್ತೊಬ್ಬ ಅರಣ್ಯ ಅಧಿಕಾರಿಯಾದ (IFS officer)ಸಾಕೇತ್ ಬದೊಲಾ (Saket Badola) ಅವರು ಪೋಸ್ಟ್ ಮಾಡಿದ್ದಾಗಿದೆ. ವನ್ಯಜೀವಿಯ ಈ ವೀಡಿಯೋವನ್ನು ರಷ್ಯಾದ 'ಲ್ಯಾಂಡ್ ಆಫ್ ಲಿಯೋಪರ್ಡ್' (Land of the Leopard) ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚಿರತೆಗೆ ರಾಖಿ ಕಟ್ಟಿದ ಮಹಿಳೆ: ನೆಟ್ಟಿಗರ ಮನಸೂರೆಗೊಂಡ ಫೋಟೋ
ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಡುಪ್ರಾಣಿಗಳ ಅನೇಕ ಅಪರೂಪದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಕಳೆದ ವರ್ಷ ಅವರು ಮಹಿಳೆಯೊಬ್ಬರು ಚಿರತೆಗೆ ರಾಕಿ ಕಟ್ಟುತ್ತಿರುವ ಪೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಭಾರತದಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ಹಲವು ಯುಗಗಳಿಂದ ಕಾಡುಗಳ ಬಗ್ಗೆ ಬೇಷರತ್ತಾದ ಪ್ರೀತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ರಾಜಸ್ಥಾನದಲ್ಲಿ, ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಗಾಯಗೊಂಡಿದ್ದ ಚಿರತೆಗೆ ರಾಖಿ (Rakhi) (ಪ್ರೀತಿ ಮತ್ತು ಸಹೋದರತ್ವದ ಚಿಹ್ನೆ) ಕಟ್ಟುವ ಮೂಲಕ ಕಾಡು ಪ್ರಾಣಿಗೆ ಶರತ್ತಿಲ್ಲದ್ದ ಪ್ರೀತಿ ನೀಡಿದ್ದಾರೆ' ಎಂದು ಸುಶಾಂತ್ ನಂದಾ ಟ್ವೀಟ್ ಮಾಡಿದ್ದರು.
ಇನ್ನು, ಸುಶಾಂತ್ ನಂದಾ ಫೋಟೋಗೆ ಹಲವು ನೆಟ್ಟಿಗರು ಕಮೆಂಟ್ ಹಾಗೂ ಲೈಕ್‌ಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಜನರು ವಿಭಿನ್ನ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. "ಹಾಗೆಯೇ ಇರಬೇಕು. ನಾವು ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು. ದೇವರು ಎಲ್ಲಾ ರೀತಿಯ ಜೀವನವನ್ನು ಸೃಷ್ಟಿಸಿದ್ದಾನೆ ಮತ್ತು ಪ್ರಪಂಚವು ಮನುಷ್ಯರಿಗೆ ಮಾತ್ರವಲ್ಲ" ಎಂದು ಒಬ್ಬ ಬಳಕೆದಾರರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, "ರಾಖಿ ಕಟ್ಟುವುದು ಸಾಂಕೇತಿಕವಾಗಿದೆ... ಪ್ರೀತಿ ಮತ್ತು ವಾತ್ಸಲ್ಯವು ತುಂಬಾ ಸುಂದರವಾಗಿದೆ... ಮಹಿಳೆ ತೋರಿಸಿದಂತೆ... ಮತ್ತು ನಮ್ಮ ಕಾಡುಗಳನ್ನು ನೋಡಿಕೊಳ್ಳುವ ಎಲ್ಲಾ ಸಿಬ್ಬಂದಿಗೆ ದೊಡ್ಡ ಚಪ್ಪಾಳೆ." ಎಂದು ಟ್ವೀಟ್ ಮಾಡಿದ್ದಾರೆ.