Asianet Suvarna News Asianet Suvarna News

ಯುಗಾದಿಗೆ ಭರ್ಜರಿ ಹೊಸತೊಡಕು: 200 ನಾಟಿಕೋಳಿ ರುಚಿ ಕಂಡ ಚಿರತೆ!

ರಾತ್ರಿವೇಳೆ ಕೋಳಿ ಫಾರಂಗೆ ನುಗ್ಗಿದ ಚಿರತೆ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ತೇಗುವ ಮೂಲಕ ಭರ್ಜರಿಯಾಗಿಯೇ ಹೊಸ್ತೊಡಕು (ವರ್ಷದ ತೊಡಕು) ಮಾಡಿಕೊಂಡಿದೆ.

A great Ugadi Hosthodaku Tumakuru Leopard tasted 200 chicken sat
Author
First Published Mar 22, 2023, 4:24 PM IST

ತುಮಕೂರು (ಮಾ.22): ಜನವಸತಿ ಗ್ರಾಮದೊಳಗೆ ನುಗ್ಗಿ ಕುರಿ, ಮೇಕೆ, ಹಸು ಹಾಗೂ ನಾಯಿಗಳನ್ನು ಹಿಡಿದು ಬೇಟೆಯಾಡುತ್ತಿದ್ದ ಚಿರತೆ ಈಗ ನಾಟಿ ಕೋಳಿಗಳನ್ನು ಬೇಟೆಯಾಡಿದೆ. ರಾತ್ರಿವೇಳೆ ಕೋಳಿ ಫಾರಂಗೆ ನುಗ್ಗಿದ ಚಿರತೆ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ತೇಗುವ ಮೂಲಕ ಭರ್ಜರಿಯಾಗಿಯೇ ಹೊಸ್ತೊಡಕು (ವರ್ಷದ ತೊಡಕು) ಮಾಡಿಕೊಂಡಿದೆ.

ಜೀವನದ ಆಧಾರಕ್ಕಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿ ಗ್ರಾಮದ ಕುಟುಂಬವೊಂದು ಊರಿನ ಹೊರಭಾಗದಲ್ಲಿದ್ದ ತೋಟದಲ್ಲಿ ನಾಳಿ ಕೋಳಿ ಫಾರಂ ಮಾಡಿಕೊಂಡಿದ್ದರು. ಇದಕ್ಕಾಗಿ ತೋಟದಲ್ಲಿ ಸುಸಜ್ಜಿತವಾದ ಫಾರಂ ನಿರ್ಮಿಸಿ ಜಾಲರಿಯನ್ನು ಅಳವಡಿಕೆ ಮಾಡಲಾಗಿದೆ. ಆದರೆ, ಹೊಲದಲ್ಲಿರುವ ನಾಟಿ ಕೋಳಿ ಫಾರಂ ಒಳಗೆ ನುಗ್ಗಿರುವ ಚಿರತೆ ಬರೋಬ್ಬರು 200 ಕೋಳಿಗಳ ರಕ್ತವನ್ನು ಹೀರಿದೆ. ಕೆಲವು ಕೋಳಿಗಳನ್ನು ಸಂಪೂರ್ಣವಾಗಿ ತಿಂದಿದ್ದು, ಇನ್ನು ಕೆಲವು ಕೋಳಿಗಳ ರಕ್ತವನ್ನು ಮಾತ್ರ ಹೀರಿಕೊಂಡು ಕೆಲವು ಭಾಗವನ್ನು ತಿಂದು, ಅರ್ಧ ದೇಹವನ್ನು ಬಿಟ್ಟು ಹೋಗಿದೆ.

ಹುಡುಗಿ ಮೇಲೆ ಬಣ್ಣ ಹಾಕಿದ್ದಕ್ಕೆ ಕಿಡ್ನಾಪ್‌ ಮಾಡಿ ಥಳಿತ: ಹೋಳಿ ಆಚರಿಸಿದ್ದೇ ತಪ್ಪಾ.?

ದನ, ಕುರಿ ತಿನ್ನುತ್ತಿದ್ದ ಚಿರತೆಗೆ ಈಗ ನಾಟಿ ಕೋಳಿ ರುಚಿ: ಯಗಚಿಹಳ್ಳಿ ಗ್ರಾಮದ ಮಹಾಲಕ್ಷ್ಮೀ ಗಿರೀಶ್ ದಂಪತಿಗೆ ಸೇರಿದ ನಾಲಿ ಕೋಳಿ ಫಾರಂನಲ್ಲಿ ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದೆ. ಇಷ್ಟು ದಿನ ತುಮಕೂರು ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಕಳೆದ ಒಂದು ತಿಂಗಳಿಂದ ಚಿರತೆಗಳ ಕಾಟ ತಗ್ಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಜನತೆಗೆ ಈಗ ಚಿರತೆ ಹಾವಳಿಯ ಆತಂಕ ಹೆಚ್ಚಾಗಿದೆ. ಯಗಚಿಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ದನ, ಕುರಿ, ಮೇಕೆ, ಹಸುಗಳು ಹಾಗೂ ಮನೆಯ ಮುಂದೆ ಇರುತ್ತಿದ್ದ ನಾಯಿಗಳ್ನು ಹೊತ್ತೊಯ್ದು ತಿನ್ನುತ್ತಿದ್ದ ಚಿರತೆ ಈಗ ಹೊಲದಲ್ಲಿರುವ ಕೋಳಿ ಫಾರಂಗೆ ನುಗ್ಗುತ್ತಿರುವುದು ಭಾರಿ ಆತಂಕ ಮೂಡಿಸಿದೆ.

ಕೋಳಿ ಸತ್ತರೆ ಪರಿಹಾರ ಇಲ್ಲವೆಂದ ಸರ್ಕಾರ: ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೋಳಿ ಫಾರಂ ಮಾಡಿದ್ದ ಹೈನುಗಾರಿಕೆ ದಂಪತಿ 200 ನಾಟಿ ಕೋಳಿಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದೆ. ಇನ್ನು ಆಡು, ಕುರಿ ಅಥವಾ ಹಸುಗಳು ಕಾಡು ಪ್ರಾಣಿಗಳ ದಾಳಿಯಿಂದ ಸತ್ತರೆ ಅರಣ್ಯ ಇಲಾಖೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಆದರೆ, ಕೋಳಿಗಳ ಮೇಲೆ ದಾಳಿ ಮಾಡಿ ಕೊಂದರೆ ಪರಿಹಾರ ಕೊಡಲು ಕಾನೂನಿನಡಿ ಯಾವುದೇ ಅವಕಾಶ ಇಲ್ಲ ಎಂದು ಪಶು ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ನೂರಾರು ಕೋಳಿಗಳನ್ನು ಕಳೆದುಕೊಂಡಿರುವ ರೈತರು ಕಣ್ಣೀರು ಹಾಕುತ್ತಿದ್ದಾರೆ.  ಸರ್ಕಾರದಿಂದ ಹೇಗಾದರೂ ಮಾಡಿ ಪರಿಹಾರ ಕೊಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

 

100 ಜೋಡಿ ಬಂದ್ರೂ ಮದುವೆ ಮಾಡಿಸುವೆ: ಶಾಸಕ

ಹೊಸ್ತೊಡಕು ಹಿನ್ನೆಲೆಯಲ್ಲಿ ಕೋಳಿಗಳಿಗೆ ಭಾರಿ ಬೇಡಿಕೆ: ಇನ್ನು ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಎಲ್ಲ ಕೋಳಿಗಳು ಮೊಟ್ಟೆ ಇಡುವ ಕೋಳಿಗಳು ಆಗಿದ್ದು, ಅವುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡಿದ್ದರೂ ಕನಿಷ್ಠ 1 ಸಾವಿರ ರೂ. ಬೆಲೆ ಬಾಳುತ್ತಿದ್ದವು. ಯುಗಾದಿ ಹಬ್ಬಕ್ಕೆ ನಾಟಿ ಕೋಳಿಗಳಿಗೆ ಭಾರಿ ಬೇಡಿಕೆ ಬಂದಿತ್ತು. ಗ್ರಾಮಸ್ಥರೇ ಕೋಳಿಗಳನ್ನು ಖರೀದಿ ಮಾಡುವುದಾಗಿ ಹೇಳಿದ್ದರು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಚಿರತೆ ದಾಳಿಯಿಂದ ಕೋಳಿಗಳು ಸತ್ತು ಹೋಗಿವೆ. ಒಟ್ಟು 200 ಕೋಳಿಗಳ ನಷ್ಟದಿಂದ ಅಂದಾಜು 2 ಲಕ್ಷ ರೂ.ಗಿಂತ ಅಧಿಕ ಪ್ರಮಾಣದ ಹಾನಿ ಉಂಟಾಗಿದೆ.ಚಿರತೆ ಸುತ್ತಮುತ್ತ ಸಂಚಾರ ಮಾಡುತ್ತಿದ್ದು, ಕೂಡಲೇ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗರಾಮಸ್ಥರು ಒತ್ತಾಯಿಸುತ್ತಿದ್ದಾರೆ. 

Follow Us:
Download App:
  • android
  • ios