ಜೊತೆಯಾಗಿ ಸಾಗುತ್ತಿರುವ ಚಿರತೆ, ಬ್ಲಾಕ್ ಪಾಂಥೆರ್ : ಅಪರೂಪದ ವಿಡಿಯೋ ವೈರಲ್

ಕರಿ ಚಿರತೆ ಹಾಗೂ ಸಾಮಾನ್ಯವಾಗಿ ಕಾಣ ಸಿಗುವ ಕಪ್ಪು ಚುಕ್ಕೆಗಳನ್ನು ಹೊಂದಿರುವ ಚಿರತೆ ಎರಡೂ ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Cheetah Black Panther Walking Together Rare Video of wildlife Goes Viral akb

ಸಾಮಾನ್ಯವಾಗಿ ನೀವು ದೇಹದ ಮೇಲ್ಮೈಯಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕಿಗಳಿರುವ ಚಿರತೆಗಳು ಒಟ್ಟೊಟ್ಟಾಗಿ ಓಡಾಡುವುದನ್ನು ನೋಡಿರಬಹುದು. ಆದರೆ ಕಪ್ಪು ಬಣ್ಣದ ಬ್ಲಾಕ್ ಪಾಂಥೆರ್ ಹಾಗೂ ಸಾಮಾನ್ಯವಾಗಿ ಕಂಡು ಬರುವ ಕಪ್ಪು ಚುಕ್ಕಿಗಳಿರುವ ಚಿರತೆಗಳು ಎರಡೂ ಜೊತೆಯಾಗಿ ಓಡಾಡುವ ದೃಶ್ಯವನ್ನು ಎಲ್ಲಾದರು ನೋಡಿದ್ದೀರಾ. ಬಹುತೇಕ ಯಾರು ಕೂಡ ಇಂತಹ ದೃಶ್ಯವನ್ನು ನೋಡಿರಲು ಸಾಧ್ಯವೇ ಇಲ್ಲ.  ಆದರೆ ಪ್ರಸಿದ್ಧ ವೈಲ್ಡ್‌ಲೈಫ್ ಫೋಟೋಗ್ರಾಫರ್ ಶಾಜ್ ಜುಂಗ್ ಅವರು ಕ್ಯಾಮರಾದಲ್ಲಿ ಅಪರೂಪದ ವಿಡಿಯೋ ಸೆರೆ ಆಗಿದ್ದು, ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ನೀವು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರಾದರೆ ಈ ವಿಡಿಯೋ ನಿಮಗೆ ಸಾಕಷ್ಟು ಇಷ್ಟವಾಗಬಹುದು. ಎರಡು ಪ್ರಾಣಿಗಳು ಜೊತೆಯಾಗಿ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹಾರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ಇವರೆಡು ಚಿರತೆ ಪ್ರಭೇದಗಳಿಗೆ ಸಯಾ ಹಾಗೂ ಕ್ಲಿಯೋ ಎಂಬ ಹೆಸರಿನಿಂದ ಗುರುತಿಸಲಾಗಿದೆ. ನಿಮ್ಮ ನೆರಳು ನಿಮ್ಮ ಬೆಸ್ಟ್ ಫ್ರೆಂಡ್‌,  ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಾನು ಇದುವರೆಗೆ ಸೆರೆ ಹಿಡಿದ ಅತ್ಯಂತ ವೈವಿಧ್ಯಮಯವೆನಿಸಿದ  ದೃಶ್ಯ ಇದಾಗಿದೆ. ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಇವುಗಳು  ಒಮ್ಮೆಗೆ ಕ್ಯಾಮರಾದತ್ತ ಗಂಭೀರ ದೃಷ್ಟಿ ಹರಿಸುವುದನ್ನು ನೋಡಿದರೆ ಒಂದು ಕ್ಷಣ ಮೈ ರೋಮಗಳೆಲ್ಲಾ ನವಿರೇಳುತ್ತವೆ ಎಂದು  ಶಾಜ್ ಜುಂಗ್ (Shaaz Jung) ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.  ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೈ ರೋಮಾಂಚನವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಗಂಧದಗುಡಿ ಬಿಡುಗಡೆ: ಕಪ್ಪು ಚಿರತೆ ದತ್ತು ಪಡೆದ ಶಾಸಕ ಹರ್ಷವರ್ಧನ್‌

ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ

ಮೃಗಾಲಯ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಾಣಿಸಿಕೊಂಡ ಅಪರೂಪದ ಕಾಡು ಪ್ರಾಣಿಗಳ ಫೋಟೋ, ವಿಡಿಯೋಗಳನ್ನು ಜನರು ಸಫಾರಿಗೆ ಹೋದಾಗ ತೆಗೆಯುತ್ತಾರೆ. ಅಲ್ಲದೆ, ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್‌ ಮಾಡಲಾಗುತ್ತದೆ. ಇದೇ ರೀತಿ ಇತ್ತೀಚೆಗೆ ಮಧ್ಯ ಪ್ರದೇಶದ ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 

ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶದ ಟ್ವಿಟ್ಟರ್‌ ಅಧಿಕೃತ ಹ್ಯಾಂಡಲ್‌ನಲ್ಲಿ ಇತ್ತೀಚೆಗೆ ಈ ಪೊಸ್ಟ್‌ ಅನ್ನು ಶೇರ್‌ ಮಾಡಲಾಗಿತ್ತು. ಕಪ್ಪು ಪ್ಯಾಂಥರ್‌ ಪೆಂಚ್‌ ಫಾರೆವರ್‌. ವಿಶ್ವದೆಲ್ಲೆಡೆ ನೀವು ಇದನ್ನು ನೋಡಲು ತಿಂಗಳುಗಳ ಕಾಲ ಹಿಡಿಯುತ್ತದೆ, ಒಮ್ಮೊಮ್ಮೆ ಅಪರೂಪದ ಪ್ರಾಣಿಗಳನ್ನು ನೋಡಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ, ಆದರೆ ಪೆಂಚ್‌ನಲ್ಲಿ ನೀವು ನೈಸರ್ಗಿಕ ಪ್ರಪಂಚದ ಅದ್ಭುತಗಳನ್ನು ಹೆಚ್ಚಾಗಿ ವೀಕ್ಷಿಸಬಹುದು. ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಸಫಾರಿಯಲ್ಲಿದ್ದ ಜನರು ತಮ್ಮ ವಾಹನಗಳನ್ನು ನಿಲ್ಲಿಸುವ ಮೂಲಕ ದೂರದಿಂದ ವೀಕ್ಷಿಸುತ್ತಿರುವಾಗ ಕಪ್ಪು ಪ್ಯಾಂಥರ್ ರಸ್ತೆ ದಾಟುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.

ಯಾರದೋ ಶ್ರಮ ಯಾರದೋ ಪಾಲು... ಎರಡು ಚಿರತೆಗಳ ಅಪರೂಪದ ದೃಶ್ಯ ವೈರಲ್

ಇನ್ನು, ಕೆಲವರು 2019 ರಲ್ಲಿ ಕಬಿನಿಯಲ್ಲಿ ಕಪ್ಪು ಚಿರತೆ ಹಾಗೂ ಚಿರತೆ ಎರಡೂ ಒಂದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋವನ್ನೂ ಈ ವೈರಲ್‌ ವಿಡಿಯೋಗೆ ಕಮೆಂಟ್‌ ಮಾಡುವ ಮೂಲಕ ಪೋಸ್ಟ್‌ ಮಾಡಿದ್ದಾರೆ. ಇದೇ ರೀತಿ, ವಿವಿಧೆಡೆ ಕಾಣಿಸಿಕೊಂಡ ಕಪ್ಪು ಚಿರತೆಯ ಫೋಟೋ, ವಿಡಿಯೋಗಳನ್ನು ಕೆಲವರು ಹಂಚಿಕೊಂಡಿದ್ದಾರೆ. ಇನ್ನು ಕಲೆ ಬಳಕೆದಾರರು ಮೋಗ್ಲಿ ಕಾರ್ಟೂನ್‌ನ ಬಘೀರನ ಚಿತ್ರವನ್ನೂ ಶೇರ್‌ ಮಾಡಿಕೊಂಡಿದ್ದಾರೆ. ಇದೇ ರೀತಿ, ನಾನೂ ಸಹ ಕರಿ ಚಿರತೆಯನ್ನು ನೋಡಬೇಕೆಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಹಾಗೆ, ಹಲವರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. 

ಇತ್ತೀಚೆಗೆ ಜಾಗ್ವಾರ್ ನದಿಯ ದಂಡೆಯಲ್ಲಿ ಮೊಸಳೆಯನ್ನು ಬೇಟೆಯಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಫಿಗೆನ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋಲ್ಲಿ, ಜಾಗ್ವಾರ್ ತನ್ನ ಬೇಟೆಯ ತಂತ್ರವನ್ನು ಬಳಸಿಕೊಂಡು ಮೊಸಳೆ ಸಮೀಪಿಸುತ್ತಿರುವುದನ್ನು ಕಾಣಬಹುದು. ಜಾಗ್ವಾರ್‌ ಮೊದಲು ನದಿಯ ಬಳಿಯ ಕೊಂಬೆಗಳು ಮತ್ತು ಪೊದೆಗಳ ನಡುವೆ ಅಡಗಿಕೊಂಡಿದ್ದು, ಮೊಸಳೆಯ ಮೇಲೆ ಸಂಪೂರ್ಣ ಗಮನವನ್ನು ಹೊಂದಿದೆ. ನಂತರ ಅದು ನೀರಿನಲ್ಲಿ ತೇಲುತ್ತಿರುವ ಮೊಸಳೆಯ ಮೇಲೆ ಹಾರಿ ಅದರ ಮೇಲೆ ದಾಳಿ ಮಾಡುತ್ತದೆ. ವಿಡಿಯೋ ಹಂಚಿಕೊಂಡಾಗಿನಿಂದ ಇದು 2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 27,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಸುಮಾರು 4,800 ಬಳಕೆದಾರರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಮರು-ಹಂಚಿಕೊಂಡಿದ್ದಾರೆ

 
 
 
 
 
 
 
 
 
 
 
 
 
 
 

A post shared by Shaaz Jung (@shaazjung)

 

Latest Videos
Follow Us:
Download App:
  • android
  • ios