ಕೆಲಸ ಮುಗಿದ ಮೇಲೆ ಸರಿಯಾಗಿ ಸಂಬಳ ನೀಡದ ಮಾಲೀಕನಿಗೆ ಬುದ್ದಿ ಕಲಿಸಲು ಮುಂದಾದ ಕಾರ್ಮಿಕ ಈಗ ಜೈಲು ಪಾಲಾಗಿದ್ದಾನೆ. ಪೂರ್ತಿ ಸಂಬಳ ನೀಡದ ಮಾಲೀಕನ ಐಷಾರಾಮಿ ಕಾರಿಗೆ ಕಾರ್ಮಿಕ ಬೆಂಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ನೋಯ್ಡಾ: ಕೆಲಸ ಮುಗಿದ ಮೇಲೆ ಸರಿಯಾಗಿ ಸಂಬಳ ನೀಡದ ಮಾಲೀಕನಿಗೆ ಬುದ್ದಿ ಕಲಿಸಲು ಮುಂದಾದ ಕಾರ್ಮಿಕ ಈಗ ಜೈಲು ಪಾಲಾಗಿದ್ದಾನೆ. ಪೂರ್ತಿ ಸಂಬಳ ನೀಡದ ಮಾಲೀಕನ ಐಷಾರಾಮಿ ಕಾರಿಗೆ ಕಾರ್ಮಿಕ ಬೆಂಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಉತ್ತರಪ್ರದೇಶದ (Uttar Pradesh) ನೋಯ್ಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೀಗೆ ಕಾರಿಗೆ ಬೆಂಕಿ ಹಚ್ಚಿದ ಕಾರ್ಮಿಕನನ್ನು ರಣ್‌ವೀರ್ ಎಂದು ಗುರುತಿಸಲಾಗಿದೆ. 

ರಣ್‌ವೀರ್ ಕಾರು ಮಾಲೀಕನ ಮನೆಗೆ ಟೈಲ್ಸ್ ಅಳವಡಿಸುವ ಕಾರ್ಯ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಸರಿಯಾಗಿ ಸಂಬಳ ನೀಡಿಲ್ಲ. ಇದರಿಂದ ಸಿಟ್ಟಿಗೆದ್ದ ಕಾರ್ಮಿಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಮಾಲೀಕ ಐಷಾರಾಮಿ ಮರ್ಸಿಡಿಸ್ (Mercedes car) ಕಾರಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮನೆ ಮುಂದೆ ನಿಲ್ಲಿಸಿದ ಕಾರಿನ ಬಳಿ ಬೈಕ್‌ ಅಲ್ಲಿ ಬಂದ ರಣ್‌ವೀರ್ ಹೆಲ್ಮೆಟ್ ಧರಿಸಿದ್ದು, ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಕಡ್ಡಿ ಗೀರಿ ಸ್ಥಳದಿಂದ ಕಾಲು ಕೀಳುತ್ತಿರುವ ವಿಡಿಯೋ ವೈರಲ್ ಆಗಿದೆ. 

Scroll to load tweet…

ಎನ್‌ಡಿಟಿವಿ ವರದಿ ಪ್ರಕಾರ, ಕಾರಿನ ಮಾಲೀಕ (Car Owner) ಈ ಕಾರ್ಮಿಕನಿಗೆ ಬರೋಬರಿ ಎರಡು ಲಕ್ಷ ರೂಪಾಯಿ ನೀಡಬೇಕಾಗಿತ್ತು. ಕಾರು ಮಾಲೀಕನ ನೋಯ್ಡಾದಲ್ಲಿ ಇರುವ ಮನೆಗೆ ಈತ 2019 ಹಾಗೂ 20ರ ಅವಧಿಯಲ್ಲಿ ಟೈಲ್ಸ್ ಹಾಕಿದ್ದ ಈ ಯೋಜನೆಯಲ್ಲಿ ಆತನಿಗೆ 2 ಲಕ್ಷ ರೂಪಾಯಿ ನೀಡಬೇಕಾಗಿತ್ತು ಎಂಬುದುಕಾರಿಗೆ ಬೆಂಕಿ ಹಚ್ಚಿದ ರಣ್‌ವೀರ್ ಆರೋಪವಾಗಿದೆ. ಆದರೆ. ಈ ಆರೋಪವನ್ನು ಕಾರು ಮಾಲೀಕ ಕುಟುಂಬ ನಿರಾಕರಿಸಿದೆ. ಅವರು ಹೇಳುವ ಪ್ರಕಾರ ಅವರಿಗೆ ಕಳೆದ 10 ವರ್ಷದಿಂದಲೂ ರಣ್ವೀರ್ (Ranveer) ಅವರ ಪರಿಚಯವಿದ್ದು, ಎರಡು ವರ್ಷದ ಹಿಂದೆ ಅವನನ್ನು ಕೆಲಸದಿಂದ ಬದಲಾಯಿಸಿದ್ದರಿಂದ ಸಿಟ್ಟುಗೊಂಡು ಆತ ಈ ಕೃತ್ಯವೆಸಗಿದ್ದಾನೆ ಎಂದು ಅವರು ಹೇಳಿದ್ದಾರೆ. 

ನೆಹರೂ ಚಡ್ಡಿಗೂ ಬೆಂಕಿ ಹಚ್ತೀರಾ..? ಕಾಂಗ್ರೆಸ್‌ ಪೋಸ್ಟ್‌ಗೆ Himanta Biswa Sharma ತಿರುಗೇಟು

ಕಳೆದ 10 -12 ವರ್ಷಗಳಿಂದ ರಣ್ವೀರ್ ಪರಿಚಯವಿದ್ದು, ಆತ ನಮ್ಮ ಕುಟುಂಬ ಸದಸ್ಯನಂತೆ ಇದ್ದ. ಆತ ಕೋವಿಡ್ ಸಮಯದಲ್ಲಿ ಆತನ ಮನೆಗೆ ಹೊರಟು ಹೋಗಿದ್ದು, ಆ ಸಮಯದಲ್ಲಿ ಆತನ ಬಾಕಿ ಇದ್ದ ವೇತನವನ್ನೆಲ್ಲಾ ತೀರಿಸಿದ್ದೇವೆ. ನಾವು ಬಹುತೇಕ ಆ ಮಾಡಿದ ದಿನವೇ ಆತನಿಗೆ ಸಂಬಳ ನೀಡಿದ್ದೇವೆ. ಎರಡು ಲಕ್ಷ ಬಾಕಿ ಇದೆ ಎಂಬ ಆತಬ ಆತನ ಆರೋಪ ನಮಗೆ ನಗು ತರಿಸುತ್ತಿದೆ ಎಂದು ಕಾರು ಮಾಲೀಕರ ಕುಟುಂಬ ಸದಸ್ಯರಾದ ಅಜಯ್ ಚೌಹಾಣ್ (Ajay chouhan) ಹೇಳಿದ್ದಾರೆ. 

UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ

ಕೋವಿಡ್ ಸಮಯದಲ್ಲಿ ರಣವೀರ್ ಮನೆಗೆ ತೆರಳಿದ ವೇಳೆ ನಾವು ನಮ್ಮ ಮನೆಯ ಕೆಲಸಕ್ಕೆ ಬೇರೊಬ್ಬ ವ್ಯಕ್ತಿಯನ್ನು ನೇಮಿಸಿದೆವು. ಇದು ಆತನ ಹೊಟ್ಟ ಉರಿಯುವಂತೆ ಮಾಡಿದ್ದು, ಆತ ನಮ್ಮ ಹೊಸ ಕೆಲಸಗಾರನಿಗೆ ಒಮ್ಮೆ ಬೆದರಿಕೆಯನ್ನು ಒಡ್ಡಿದ್ದ ಎಂದು ಮನೆಯವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ರಣ್‌ವೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನೋಯ್ಡಾದ ಸೆಕ್ಟರ್ 45 ರಲ್ಲಿ ಈ ಘಟನೆ ನಡೆದಿದೆ.