Asianet Suvarna News Asianet Suvarna News

ನೆಹರೂ ಚಡ್ಡಿಗೂ ಬೆಂಕಿ ಹಚ್ತೀರಾ..? ಕಾಂಗ್ರೆಸ್‌ ಪೋಸ್ಟ್‌ಗೆ Himanta Biswa Sharma ತಿರುಗೇಟು

ಕಾಂಗ್ರೆಸ್‌ ಆರ್‌ಎಸ್‌ಎಸ್‌ ಚಡ್ಡಿ ಸುಡುವ ಟ್ವಿಟ್ಟರ್‌ ಪೋಸ್ಟ್‌ ಮಾಡಿತ್ತು. ಇದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್‌ ಮೂಲಕವೇ ತಿರುಗೇಟು ನೀಡಿದ್ದಾರೆ. 

himanta biswa sarma hits back at congresss khaki shorts on fire post with a nehru twist ash
Author
First Published Sep 14, 2022, 1:20 PM IST

ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) (ಆರ್‌ಎಸ್‌ಎಸ್) ಚಡ್ಡಿ (Shorts) ಅನ್ನು ಸುಡುವ ಚಿತ್ರವನ್ನು ಕಾಂಗ್ರೆಸ್ ಹಂಚಿಕೊಂಡಿದ್ದ ಪೋಸ್ಟ್‌ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. ಜವಾಹರ್‌ಲಾಲ್ ನೆಹರೂ ಅವರ ಫೋಟೋವೊಂದನ್ನು ಹಂಚಿಕೊಂಡಿರುವ ಹಿಮಂತ ಬಿಸ್ವಾ ಶರ್ಮಾ ಅವರು ‘’ನೀವು ಅವರ (ಚಡ್ಡಿಗೂ) ಬೆಂಕಿ ಹಚ್ಚುತ್ತೀರಾ’’ ಎಂಬ ಕ್ಯಾಪ್ಷನ್‌ನೊಂದಿಗೆ ಅವರು #BharatTodoyatri ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಇನ್ನು, ಜವಾಹರಲಾಲ್‌ ನೆಹರೂ ಅವರು ಈ ಫೋಟೋದಲ್ಲಿ ಆರ್‌ಎಸ್‌ಎಸ್‌ನ ಖಾಕಿ ಚಡ್ಡಿಯಲ್ಲಿಲ್ಲ, ಬದಲಾಗಿ  ಕಾಂಗ್ರೆಸ್‌ನ ಸೇವಾದಳದ ಸಮವಸ್ತ್ರದಲ್ಲಿದ್ದಾರೆ (Seva Dal Uniform) ಎಂದು ಫ್ಯಾಕ್ಟ್‌ ಚೆಕ್‌ ಮಾಡುವವರು ಹೇಳಿಕೊಂಡಿದ್ದಾರೆ. 'ಭಾರತ್ ಜೋಡೋ ಯಾತ್ರೆ' (Bharat Jodo Yatra) ಪ್ರಚಾರದ ವೇಳೆ ಕಾಂಗ್ರೆಸ್ ಖಾಕಿ (Khaki) ಚಡ್ಡಿಯನ್ನು ಸುಡುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಈ ಹಿನ್ನೆಲೆ ಈ ಪೋಸ್ಟ್‌ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಈ ಟ್ವಿಟ್ಟರ್ ಪೋಸ್ಟ್ ಅನ್ನು ಟೀಕಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, "ಈ ದೇಶದಲ್ಲಿ ನಿಮಗೆ ಹಿಂಸೆ ಬೇಕೇ ಎಂದು ನಾನು ರಾಹುಲ್ ಗಾಂಧಿಯನ್ನು ಕೇಳಲು ಬಯಸುತ್ತೇನೆ?" (sic)
ಕಾಂಗ್ರೆಸ್ #BharatJodoYatra ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿ "ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ರದ್ದುಗೊಳಿಸಬೇಕು. ಹಂತ ಹಂತವಾಗಿ, ನಾವು ನಮ್ಮ ಗುರಿಯನ್ನು ತಲುಪುತ್ತೇವೆ" ಎಂದೂ ಖಾಕಿ ಚಡ್ಡಿಯ ಪೋಸ್ಟ್‌ ಶೇರ್‌ ಮಾಡಿಕೊಂಡು ಕಾಂಗ್ರೆಸ್‌ ಇತ್ತೀಚೆಗೆ ಟ್ವೀಟ್‌ ಮಾಡಿತ್ತು. 

ಇದನ್ನುಓದಿ: Rahul Gandhi ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಮಾಡಲಿ: ಅಸ್ಸಾಂ ಸಿಎಂ

ಕಳೆದ ವಾರವಷ್ಟೇ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ಆರಂಭಕ್ಕೂ ಮುನ್ನವೇ ಅದರ ಬಗ್ಗೆಯೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕೆ ಮಾಡಿದ್ದರು. ಈ ಯಾತ್ರೆ ‘ಶತಮಾನದ ದೊಡ್ಡ ಜೋಕ್‌’ (Comedy of the Century) ಎಂದಿದ್ದರು. ಅಲ್ಲದೆ, ರಾಹುಲ್‌ ಗಾಂಧಿ ತನ್ನ ಯಾತ್ರೆಯನ್ನು ಭಾರತದಲ್ಲಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ಆರಂಭಿಸಬೇಕಿತ್ತು ಎಂದೂ ಟೀಕೆ ಮಾಡಿದ್ದರು. ‘’ಇದು ಕಾಮಿಡಿಯಲ್ಲವೇ. ನೀವು (ಕಾಂಗ್ರೆಸ್‌) 1947 ರಲ್ಲಿ ದೇಶವನ್ನು ವಿಭಜನೆ (Divided) ಮಾಡಿದ್ರಿ. ಹಾಗೂ, ಈಗ ಭಾರತ್‌ ಜೋಡೋ (United) ಆಗಲು ನೀವು ಬಯಸುತ್ತೀರಿ. ಹಾಗೂ, ದೇಶ ಏಕತೆಯಿಂದ ಇರುವ ಕಡೆ ನೀವು ಇದನ್ನು ಮಾಡಲು ಪ್ರಯತ್ನ ಪಡುತ್ತಿದ್ದೀರಿ. ಈ ಹಿನ್ನೆಲೆ ಏಕೀಕರಣ (Unification) ಬೇಕೆಂದರೆ ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಆರಂಭಿಸಬೇಕು’’ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.  

Bharat Jodo Yatra: ಇಂದಿನಿಂದ ರಾಹುಲ್‌ ಗಾಂಧಿ ಪಾದಯಾತ್ರೆ

ಅಲ್ಲದೆ, ‘’ಭಾರತ್‌ ಜೋಡೋ ಯಾತ್ರೆ ಶತಮಾನದ ಕಾಮಿಡಿಯಾಗಿದೆ. ನಾವು ಇಂದು ವಾಸಿಸುತ್ತಿರುವ ಭಾರತ ಚೇತರಿಸಿಕೊಂಡಿದೆ, ದೃಢವಾಗಿದೆ ಮತ್ತು ಐಕ್ಯತೆಯಿಂದ ಕೂಡಿದೆ. ಭಾರತ ವಿಭಜನೆಯಾಗಿದ್ದು ಒಂದೇ ಬಾರಿ, ಅದು 1947 ರಲ್ಲಿ ಮಾತ್ರ. ಕಾಂಗ್ರೆಸ್‌ ಒಪ್ಪಿಕೊಂಡಿದ್ದಕ್ಕೆ ಆ ವಿಭಜನೆಯಾಗಿದೆ. ಈ ಹಿನ್ನೆಲೆ ದೇಶವನ್ನು ಜೋಡಿಸಬೇಕಾದರೆ ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಮಾಡಬೇಕು’’ ಎಂದು ಅಸ್ಸಾಂ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದರು. 

Follow Us:
Download App:
  • android
  • ios