Asianet Suvarna News Asianet Suvarna News

ನೀರಜ್ ಹೆಸರಿದ್ದರೆ 5 ಲೀಟರ್ ಪೆಟ್ರೋಲ್ ಉಚಿತ..!

  • ನೀರಜ್ ಎಂಬ ಹೆಸರಿದ್ದರೆ ಉಚಿತ ಪೆಟ್ರೋಲ್
  • ಒಂದೆರಡಲ್ಲ, ಬರೋಬ್ಬರಿ 5 ಲೀಟರ್ ಉಚಿತ ಪೆಟ್ರೋಲ್ ನೀಡಲು ಮುಂದಾದ ಪೆಟ್ರೋಲ್ ಬಂಕ್
Kudukoli Petrol Pump owner Abdulla Madumoole announces 5 liter free petrol for  all namesakes of the athlete Neeraj Chopra dpl
Author
Bangalore, First Published Aug 10, 2021, 12:31 PM IST
  • Facebook
  • Twitter
  • Whatsapp

- ದಿವ್ಯಾ ಪೆರ್ಲ

ಕಾಸರಗೋಡು(ಆ.10): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಈಗ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರುತ್ತಿದೆ. ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಬಯೋಪಿಕ್, ಸ್ಟೈಲ್, ಸಿನಿಮಾ ಕುರಿತು ಈಗಾಗಲೇ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಹಾಗೆಯೇ ನೀರಜ್ ಎಂಬ ಹೆಸರಿನ ಬಗ್ಗೆಯೇ ದೇಶದಲ್ಲಿ ಹೊಸ ಹವಾ ಸೃಷ್ಟಿಯಾಗಿದೆ. ಇದೀಗ ಕೇರಳದ ಕಾಸರಗೋಡು ಎಂಬಲ್ಲಿ ಪೆಟ್ರೋಲ್ ಬಂಕ್ ನೀರಜ್ ಹೆಸರಿನ ಜನರಿಗೆ ಉಚಿತ ಪೆಟ್ರೋಲ್ ನೀಡಲು ಮುಂದಾಗಿದೆ.

ನೀರಜ್ ಎಂಬ ಹೆಸರಿಗೆ ಗೌರವ ಸೂಚಿಸುವಂತೆ ಸ್ವಾತಂತ್ರ್ಯ ದಿನಾಚರಣೆಯಂದು ಈ ಪೆಟ್ರೊಲ್ ಬಂಕ್‌ನಲ್ಲಿ ನೀರಜ್ ಎಂಬ ಹೆಸರಿರುವ ಜನರಿಗೆ 5 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲು ಸಿದ್ಧತೆ ನಡೆಸಲಾಗಿದೆ.

ಯಾವುದೇ ವ್ಯಕ್ತಿ ನೀರಜ್ ಎಂಬ ಹೆಸರಿದ್ದರೆ ಪೆಟ್ರೋಲ್ ಬಂಕ್‌ಗೆ ಹೋಗಿ ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ಪೆಟ್ರೋಲ್ ಉಚಿತವಾಗಿ ಪಡೆಯಬಹುದಾಗಿದೆ. ಕಾಸರಗೋಡಿನಲ್ಲಿರುವ ಪೆರ್ಲದಲ್ಲಿರುವ ಕುದುಕೊಳಿ ಪೆಟ್ರೋಲ್ ಬಂಕ್‌ ಮಾಲೀಕ ಅಬ್ದುಲ್ ಮದುಮೂಲೆ ತಮ್ಮ ಬಂಕ್‌ನಲ್ಲಿ ಈ ವಿಶೇಷ ಆಫರ್ ಇಟ್ಟಿದ್ದಾರೆ.

ಇಂತಹ ಸ್ಪೆಷಲ್ ಆಫರ್ ಬಿಟ್ಟಿರುವ ಬಗ್ಗೆ ಏಷ್ಯಾನೆಟ್‌ನ್ಯೂಸ್.ಕಾಂಗೆ ಪ್ರತಿಕ್ರಿಯಿಸಿದ ಕುದುಕೊಳಿ ಪೆಟ್ರೋಲ್ ಬಂಕ್‌ ಮಾಲೀಕ ಅಬ್ದುಲ್ ಮದುಮೂಲೆ, ಪ್ರತಿಬಾರಿ ಗಣರಾಜ್ಯಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಎನಾದರೂ ಇಂಥಹ ವೀಶೇಷ ಆಫರ್ ನೀಡುತ್ತಲೇ ಬಂದಿದ್ದೇವೆ. ಸ್ವಾತಂತ್ರ್ಯೋತ್ಸವ ಆಚರಣೆಗೆ ಏನಾದರೂ ವಿಶೇವಾಗಿ ಮಾಡುವ ಯೋಚನೆ ಇತ್ತು. ಅದೇ ಸಂದರ್ಭ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದರು ಎಂದಿದ್ದಾರೆ.

ಗೋಲ್ಡನ್‌ ಬಾಯ್‌ ನೀರಜ್‌ ಹೆಸರಿನವರಿಗೆ ರೆಸ್ಟೋರೆಂಟ್‌ನಲ್ಲಿ ಉಚಿತ ಊಟ

ಬೈಕ್‌, ಆಟೋ, ಬಸ್, ವ್ಯಕ್ತಿಯ ವಯಸ್ಸು ಈ ರೀತಿ ಯಾವುದೇ ಕಂಡೀಷನ್ ಇಟ್ಟಿಲ್ಲ. ನೀರಜ್ ಹೆಸರಿನ ಪುಟ್ಟ ಮಗುವೂ 5 ಲೀಟರ್ ಪೆಟ್ರೋಲ್ ಒಯ್ಯಬಹುದು. ವಿದ್ಯಾರ್ಥಿಗಳು, ಜನ ಸಾಮಾನ್ಯರೂ ಸೇರಿ ಎಲ್ಲರಿಗೂ ಈ ಗೆಲುವಿನ ಸಂಭ್ರಮ ತಲುಪಿಸುವ ಉದ್ದೇಶ ಇದಾಗಿದೆ ಎಂದಿದ್ದಾರೆ. ಹಾಗೆಯೇ ಗುಜರಾತ್‌ ಪೆಟ್ರೋಲ್‌ ಬಂಕ್‌ನಲ್ಲಿ 500 ರೂಪಾಯಿ ಪೆಟ್ರೋಲ್ ನೀಡುವ ಕುರಿತು ತಿಳಿಯಿತು. ನನ್ನೊಬ್ಬ ಗುಜರಾತಿ ಸ್ನೇಹಿತರು ಈ ಬಗ್ಗೆ ತಿಳಿಸಿದರು. ಆಗ ನನಗೂ ಇದು ಒಳ್ಳೆಯ ಆಲೋಚನೆ ಎನಿಸಿತು. ಹಾಗಾಗಿ ನಮ್ಮಲ್ಲಿಯೂ ಇದನ್ನು ಎನೌನ್ಸ್ ಮಾಡಿದೆವು ಎಂದಿದ್ದಾರೆ.

ನೀರಜ್ ಗೆಲುವಿನ ವಿಚಾರ ಮನೆ ಮನೆಗೂ ತಿಳಿಯಬೇಕು. ಹಳ್ಳಿಗಳಲ್ಲಿ ಇಂತಹ ಗೆಲುವು, ಅವುಗಳ ಪ್ರಾಮುಖ್ಯತೆ ಬಹಳಷ್ಟು ಜನಕ್ಕೆ ತಿಳಿಯದೇ ಹೋಗುತ್ತದೆ. ಉಚಿತ ಪೆಟ್ರೋಲ್ ನೀಡುವ ಮೂಲಕ ನೀರಜ್ ಗೆಲುವನ್ನು ಸಂಭ್ರಮಿಸಲು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳು, ಯುವ ಜನರು ನಮ್ಮ ಅಥ್ಲೀಟ್‌ಗಳ ಸಾಧನೆ ತಿಳಿಯಬೇಕು. ಇದು ಇನ್ನಷ್ಟು ಜನರಿಗೆ ಪ್ರೇರಣೆಯಾಗಬೇಕು ಎಂದಿದ್ದಾರೆ.

ಇದೇ ರೀತಿ ಗುಜರಾತ್‌ನಲ್ಲಿ ಭರೂಚ್‌ನಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾನ್ ಎಂಬವರೂ ನೀರಜ್ ಹೆಸರಿನವರಿಗೆ 500 ರೂಪಾಯಿಯ ಉಚಿತ ಪೆಟ್ರೋಲ್ ಘೋಷಿಸಿದ್ದಾರೆ. ನೀರಜ್‌ ಚೋಪ್ರಾ ಅವರಿಗೆ ಗೌರವಾರ್ಥವಾಗಿ ಎರಡು ದಿನ ಈ ಉಚಿತ ಪೆಟ್ರೋಲ್ ವಿತರಣೆ ನಡೆದಿದೆ.

Follow Us:
Download App:
  • android
  • ios