ಗೋಲ್ಡನ್‌ ಬಾಯ್‌ ನೀರಜ್‌ ಹೆಸರಿನವರಿಗೆ ರೆಸ್ಟೋರೆಂಟ್‌ನಲ್ಲಿ ಉಚಿತ ಊಟ!

  • ಅಥ್ಲೆಟಿಕ್ಸ್‌ ವಿಭಾಗದ ಜಾವೆಲಿನ್‌ ಥ್ರೋದಲ್ಲಿ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ 
  • ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ
  • ನೀರಜ್ ಹೆಸರಿನವರಿಗೆ ಭಟ್ಕಳದ ರೆಸ್ಟೊರೆಂಟ್‌ನಲ್ಲಿ ಉಚಿತ ಊಟ
Bhatkal restaurant has announced  free meal to customers whose name is Neeraj snr

 ಭಟ್ಕಳ (ಆ.10):  ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದ ಜಾವೆಲಿನ್‌ ಥ್ರೋದಲ್ಲಿ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಇಲ್ಲಿನ ಶಿರಾಲಿ ನೀರಕಂಠದಲ್ಲಿರುವ ‘ತಾಮ್ರ ರೆಸ್ಟೋರೆಂಟ್‌’ ನೀರಜ್‌ ಎನ್ನುವ ಹೆಸರಿನವರಿಗೆ ಒಂದು ದಿನದ ಊಟವನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು, ಈ ವಿಶೇಷ ಅವಕಾಶ ಆ. 15ರ ವರೆಗೆ ಮಾತ್ರ ಲಭ್ಯ ಇರಲಿದೆ.

ಟೋಕಿಯೋ 2020: ಚಿನ್ನ ಗೆದ್ದ ನೀರಜ್ ಚೋಪ್ರಾಗೆ 1 ಕೋಟಿ ಬಹುಮಾನ ಘೋಷಿಸಿದ ಸಿಎಸ್‌ಕೆ..!

ಶಿರಾಲಿಯ ನೀರಕಂಠದಲ್ಲಿ ಕಳೆದ ವರ್ಷವಷ್ಟೇ ಆರಂಭಗೊಂಡ ತಾಮ್ರ ರೆಸ್ಟೋರೆಂಟ್‌ ಸಾಂಪ್ರದಾಯಿಕ ಶೈಲಿಯ ಸೀ ಫುಡ್‌ಗೆ ಪ್ರಸಿದ್ಧಿ ಪಡೆದಿದೆ. ಸೀ ಫುಡ್‌ ಜೊತೆಯಲ್ಲಿ ಉತ್ತರ ಭಾರತ, ಚೈನೀಸ್‌ ಮುಂತಾದ ಖಾದ್ಯ ಲಭ್ಯವಿದು, ನೀರಜ್‌ ಹೆಸರಿನವರು ಯಾವುದೇ ಬಗೆಯ ಆಹಾರವನ್ನು ಒಂದು ದಿನ ಪೂರ್ತಿ ಉಚಿತವಾಗಿ ಸವಿಯಬಹುದಾಗಿದೆ.

ಚಿನ್ನ ಗೆದ್ದ ಚೋಪ್ರಾಗೆ ಕಾಶೀನಾಥ್‌ ಕೋಚ್‌ ಅಲ್ಲ: ಅಥ್ಲೆಟಿಕ್ಸ್‌ ಸಂಸ್ಥೆ

ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಈ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದೆ. ನೀರಜ್‌ ಹೆಸರಿನ ಯಾರೇ ಆಗಿರಲಿ, ತಮ್ಮ ಗುರುತಿನ ಚೀಟಿಯನ್ನು ಅಥವಾ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್‌ ಎಂದು ಖಚಿತಪಡಿಸಿದರೆ ಅಂಥವರಿಗೆ ರೆಸ್ಟೋರೆಂಟ್‌ನಲ್ಲಿ ಊಟೋಪಚಾರದ ವ್ಯವಸ್ಥೆ ಸಿಗಲಿದೆ.

ಈ ಹಿಂದೆ ಪಾಕಿಸ್ತಾನದ ಯುದ್ಧ ವಿಮಾನದ ದಾಳಿಯನ್ನು ಹಿಮ್ಮೆಟ್ಟಿಸಿದ ಭಾರತೀಯ ವಾಯುಸೇನೆಯ ಅಭಿನಂದನ್‌ ವರ್ಧಮಾನ್‌ಗೆ ಗೌರವ ಸಲ್ಲಿಸುವ ಪ್ರಯುಕ್ತ ರೆಸ್ಟೋರೆಂಟೊಂದು ಅಭಿನಂದನ್‌ ಎನ್ನುವ ಹೆಸರಿನವರಿಗೆ ಒಂದು ದಿನ ಉಚಿತ ಆಹಾರ ನೀಡಿತ್ತು. ಇದರಿಂದ ಪ್ರೇರೇಪಣೆಗೊಂಡ ಈ ತಾಮ್ರ ರೆಸ್ಟೋರೆಂಟ್‌ನವರೂ ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟನೀರಜ್‌ ಚೋಪ್ರಾಗೆ ಗೌರವ ಸೂಚಿಸುವ ಸಲುವಾಗಿ ನೀರಜ್‌ ಎನ್ನುವ ಹೆಸರಿನವರಿಗೆ ಒಂದು ದಿನದ ಈ ಉಚಿತ ಊಟದ ಆಫರ್‌ ನೀಡಿದೆ.

Latest Videos
Follow Us:
Download App:
  • android
  • ios