Asianet Suvarna News Asianet Suvarna News

ನನ್ನ ಮಗಳಿಗೆ ನೋವಾಗುತ್ತೆ... ಪರಿಹಾರ ನಿರಾಕರಿಸಿದ ಕೋಲ್ಕತ್ತಾ ಟ್ರೈನಿ ವೈದ್ಯೆಯ ತಂದೆ

ಕೋಲ್ಕತ್ತಾದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪಿದ್ದ 2ನೇ ವರ್ಷದ ಪೋಸ್ಟ್ ಗ್ರಾಜುಯೇಟ್ ಟೈನಿ ವೈದ್ಯೆಯ ತಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ನೀಡಿದ ಪರಿಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. 

Kolkata trainee doctors father denied compensation from TMC government akb
Author
First Published Aug 16, 2024, 4:21 PM IST | Last Updated Aug 16, 2024, 5:13 PM IST

ಕೋಲ್ಕತ್ತಾದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪಿದ್ದ 2ನೇ ವರ್ಷದ ಪೋಸ್ಟ್ ಗ್ರಾಜುಯೇಟ್ ಟೈನಿ ವೈದ್ಯೆಯ ತಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ನೀಡಿದ ಪರಿಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಪರಿಹಾರ ಸ್ವೀಕರಿಸಿದರೆ ನನ್ನ ಮಗಳು ನೋವುಪಡುವಳು ಹೀಗಾಗಿ ಪರಿಹಾರ ನಿರಾಕರಿಸುತ್ತಿದ್ದು ಪ್ರಕರಣದ ಬಗ್ಗೆ ಶೀಘ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವೈದ್ಯೆ ತಂದೆ ಆಗ್ರಹಿಸಿದ್ದಾರೆ. 

ಮಾಧ್ಯಮದೊಂದಿಗೆ ಮಾತನಾಡಿದ ವೈದ್ಯೆಯ ತಂದೆ ಈ ಪ್ರಕರಣದಲ್ಲಿ ಹೋರಾಡುವುದಕ್ಕೆ ಶಕ್ತಿ ತುಂಬಿ ಬೆಂಬಲ ನೀಡುತ್ತಿರುವ ದೇಶದೆಲ್ಲೆಡೆಯ ಜನರು, ವೈದ್ಯ ವೃತ್ತಿಯಲ್ಲಿರುವ ಸೋದರರು, ಘಟನೆ ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ಘಟನೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ ನಡೆಸುತ್ತಿರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಂದಿಗ್ಧ ಸ್ಥಿತಿಯಲ್ಲಿ ನನ್ನ ಜೊತೆಗೆ ನಿಂತು ಹೋರಾಡುತ್ತಿರುವ ಎಲ್ಲರನ್ನು ನಾನು ನನ್ನ ಮಗ ಮಗಳು ಎಂದು ಭಾವಿಸುವೆ. ನಾನು ಸರ್ಕಾರ ನೀಡಲು ಬಯಸಿದ ಪರಿಹಾರವನ್ನು ತಿರಸ್ಕರಿಸಿದೆ. ಅವಳ ಸಾವಿಗೆ ನಾನು ಪರಿಹಾರ ಹಣ ತೆಗೆದುಕೊಂಡರೆ ನನ್ನ ಮಗಳು ದುಃಖಪಡುವಳು, ನನಗೀಗ ನ್ಯಾಯ ಮಾತ್ರ ಬೇಕು ಎಂದು ಟ್ರೈನಿ ವೈದ್ಯೆಯ ತಂದೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡುವ ವೇಳೆ ಹೇಳಿದ್ದಾರೆ. 

ಹತ್ಯೆಯಾದ ದಿನ ಕೋಲ್ಕತ್ತಾ ಟ್ರೈನಿ ವೈದ್ಯೆ ಬರೆದ ಕೊನೆಯ ಡೈರಿಯಲ್ಲಿ ಏನಿತ್ತು?

ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖೆಗಿಳಿದಿರುವ ಸಿಬಿಐ ಅಧಿಕಾರಿಗಳು ನಿನ್ನೆ ಟ್ರೈನಿ ವೈದ್ಯೆಯ ಮನೆಗೆ ತೆರಳಿ ಪೋಷಕರನ್ನು ಭೇಟಿಯಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವೈದ್ಯೆಯ ತಂದೆ, ಸಿಬಿಐ ನಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅಲ್ಲದೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿದೆ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಟ್ರೈನಿ ವೈದ್ಯೆಯ ಅತ್ಯಾಚಾರ ನಡೆಯುವುದಕ್ಕೆ ಕೆಲ ಸಮಯಕ್ಕೂ ಮೊದಲು ಆಕೆಯ ಜೊತೆಗಿದ್ದವರು ಹಾಗೂ ಆಸ್ಪತ್ರೆಯ ಐವರು ವೈದ್ಯರನ್ನು ಕೂಡ ವಿಚಾರಣೆ ನಡೆಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಆದೇಶದ ನಂತರ ಸಿಬಿಐ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು.

ವೈದ್ಯೆ ರೇಪ್ & ಮರ್ಡರ್ ಆದ ಕೋಲ್ಕತ್ತಾ ಕಾಲೇಜಿನ ಕರಾಳ ಮುಖ ತೆರೆದಿಟ್ಟ ಮಹಿಳಾ ವೈದ್ಯೆಯ ಆಡಿಯೋ

ಕೋಲ್ಕತ್ತಾ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9 ರಂದು 2ನೇ ವರ್ಷದ ಟ್ರೈನಿ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಖಾಸಗಿ ಭಾಗ ಸೇರಿದಂತೆ ದೇಹದಲ್ಲೆಡೆ ಗಾಯಗಳಾಗಿದ್ದವು. ಘಟನೆ ಖಂಡಿಸಿ ವೈದ್ಯ ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೇ ಮಹಿಳಾ ವೈದ್ಯೆಯೊಬ್ಬರ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜುಗಳ ಕರಾಳ ಮುಖವನ್ನು ಎತ್ತಿ ತೋರಿಸುತ್ತಿದೆ. ಕೊಲೆ ಹಾಗೂ ಅತ್ಯಾಚಾರ ನಡೆದ ಆರ್‌ಜಿ ಕಾರ್‌ ಕಾಲೇಜಿನಲ್ಲಿ ಸೆ*ಸ್ ಹಾಗೂ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು ಅದರಿಂದಲೇ ಕೋಟ್ಯಾಂತರ ಮೊತ್ತದ ವ್ಯವಹಾರ ನಡೆಯುತ್ತಿದೆ ಎಂದು ಈ ಆಡಿಯೋ ಕ್ಲಿಪ್‌ನಲ್ಲಿ ಮಹಿಳಾ ವೈದ್ಯೆಯೊಬ್ಬರು ಹೇಳಿದ್ದರು. ಇದರ ಜೊತೆಗೆ ಕೊಲೆಯಾದ ವೈದ್ಯ ಆರು ತಿಂಗಳ ಹಿಂದಷ್ಟೇ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನು ಬಯಲು ಮಾಡುವುದಾಗಿ ಹೇಳಿಕೊಂಡಿದ್ದರು ಎಂದು ಆ ಆಡಿಯೋದಲ್ಲಿದೆ. 

ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್

Latest Videos
Follow Us:
Download App:
  • android
  • ios