ಕೊರೋನಾ : ಮಕ್ಕಳಿಗಿಲ್ಲ 3ನೇ ಅಲೆಯ ಭಾರೀ ಶಾಕ್
- ಅಕ್ಟೋಬರ್ ವೇಳೆಗೆ ದೇಶದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿರುವ ಕೊರೋನಾ 3ನೇ ಅಲೆ
- ವಯಸ್ಕರಿಗಿಂತ ಮಕ್ಕಳ ಮೇಲೇ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇಲ್ಲ
- ವಿಶ್ವ ಆರೋಗ್ಯ ಸಂಸ್ಥೆ ಮತ್ತು ದೆಹಲಿಯ ಏಮ್ಸ್ ನಡೆಸಿದ ಅಧ್ಯಯನ
ನವದೆಹಲಿ (ಜೂ.18): ಮುಂದಿನ ಅಕ್ಟೋಬರ್ ವೇಳೆಗೆ ದೇಶದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿರುವ ಕೊರೋನಾ 3ನೇ ಅಲೆ, ವಯಸ್ಕರಿಗಿಂತ ಮಕ್ಕಳ ಮೇಲೇ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ದೆಹಲಿಯ ಏಮ್ಸ್ ನಡೆಸಿದ ಅಧ್ಯಯನ ಹೇಳಿದೆ.
5 ರಾಜ್ಯಗಳ ನಗರ ಮತ್ತು ಗ್ರಾಮೀಣ ಪ್ರದೇಶದ 10000ಕ್ಕೂ ಹೆಚ್ಚು ಜನರನ್ನು ಸೆರೋಪ್ರಿವೆಲೆನ್ಸ್ (ರಕ್ತದಲ್ಲಿ ಆ್ಯಂಟಿಬಾಡಿ ಪತ್ತೆಗೆ ನಡೆಸುವ ಪರೀಕ್ಷೆ) ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ ಇದೀಗ 4500 ಜನರ ಮಾದರಿಯನ್ನು ಬಳಸಿ ಮಧ್ಯಂತರ ವರದಿ ತಯಾರಿಸಲಾಗಿದೆ. ಈ ವೇಳೆ, ಮಕ್ಕಳಲ್ಲೂ ಹೆಚ್ಚಿನ ಸೆರೋಪಾಸಿಟಿವಿಟಿ (ಸೋಂಕು ಬಂದು ಹೋದ ಬಳಿಕ ಆ್ಯಂಟಿಬಾಡಿ ಉತ್ಪಾದನೆಯಾಗಿರುವುದು) ಕಂಡುಬಂದಿದೆ. ಜೊತೆಗೆ ಅವರ ಈ ಪ್ರಮಾಣ ವಯಸ್ಕರಿಗೆ ಸಮನಾಗಿಯೇ ಇದೆ. ಹೀಗಾಗಿ 3ನೇ ಅಲೆ ಮಕ್ಕಳ ಮೇಲೆ ಮಾತ್ರವೇ ಹೆಚ್ಚಿನ ದಾಳಿ ನಡೆಸುತ್ತದೆ ಎಂದು ಹೇಳಲಾಗದು ಎಂದು ವರದಿ ಹೇಳಿದೆ.
ಭಾರತದ ದೇಶೀ ಲಸಿಕೆ ಕೋರ್ಬಿವ್ಯಾಕ್ಸ್ ಶೇ.90 ಪರಿಣಾಮಕಾರಿ ..
ಎಲ್ಲೆಲ್ಲಿ ಸಮೀಕ್ಷೆ?:
ಮಾ.15ರಿಂದ ಜೂ.10ರ ಅವಧಿಯಲ್ಲಿ ದೆಹಲಿ ಅರ್ಬನ್ ರೀಸೆಟ್ಟಲ್‌ಮೆಂಟ್ ಕಾಲೋನಿ, ಹರಾರಯಣ, ಒಡಿಶಾದ ಭುವನೇಶ್ವರದ ಗ್ರಾಮೀಣ ಪ್ರದೇಶ, ಉ.ಪ್ರದೇಶದ ಗೋರಖ್‌ಪುರ ಗ್ರಾಮೀಣ ಮತ್ತು ತ್ರಿಪುರಾ ರಾಜಧಾನಿ ಅಗರ್ತಲಾದ ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಗಾಗಿ ಬಳಸಿಕೊಳ್ಳಲಾಗಿತ್ತು.
"
ಈ ಪ್ರದೇಶಗಳನ್ನು ಒಟ್ಟಾರೆಯಾಗಿ ಗಮನಿಸಿದರೆ 18 ವರ್ಷಕ್ಕಿಂತ ಕೆಳಗಿನವರಲ್ಲಿ ಸೆರೋಪಾಸಿಟಿವಿಟಿ ಪ್ರಮಾಣ ಶೇ.55.7ರಷ್ಟಿದ್ದರೆ, 18 ವರ್ಷ ಮೇಲ್ಪಟ್ಟವರಲ್ಲಿ ಶೇ.63.5ರಷ್ಟಿತ್ತು. ಹೀಗಾಗಿ ಎರಡೂ ವಯೋಮಾನದಲ್ಲಿ ಭಾರೀ ವ್ಯತ್ಯಾಸ ಕಂಡುಬರುವುದಿಲ್ಲ. ಇಷ್ಟೊಂದು ಪ್ರಮಾಣದ ಮಕ್ಕಳಲ್ಲಿ ಈಗಾಗಲೇ ಸೋಂಕು ಬಂದು ಹೋಗಿ ದೇಹದಲ್ಲಿ ಆ್ಯಂಟಿಬಾಡಿ (ರೋಗ ನಿರೋಧಕ) ಉತ್ಪಾದನೆಯಾಗಿರುವ ಕಾರಣ, ಶೀಘ್ರವೇ ಕಾಣಿಸಿಕೊಳ್ಳಲಿದೆ ಎಂದು ಹೇಳಲಾದ 3ನೇ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಜೊತೆಗೆ ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿರಲಿದೆ ಎಂದು ಹೇಳಲಾಗದು ಎಂದು ವರದಿ ಹೇಳಿದೆ.
2-4 ವಾರದಲ್ಲಿ 3ನೇ ಅಲೆ! 2ನೇ ಅಲೆಗಿಂತ ಭೀಕರ ...
ಇನ್ನು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಸೆರೋಪಾಸಿಟಿವಿಟಿ ದರ ಕಡಿಮೆ ಇರುವುದು ಕಂಡುಬಂದಿದೆ. ಇದು ಎಲ್ಲಾ ವಯೋಮಾನದವರಲ್ಲೂ ಒಂದೇ ರೀತಿ ಇದೆ. ಆದರೆ ಹೆಣ್ಣು ಮಕ್ಕಳಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಸೆರೋಪಾಸಿಟಿವಿಟಿ ಕಂಡುಬಂದಿದೆ. ಚಿಕ್ಕ ಮಕ್ಕಳಿಗೆ ಹೋಲಿಸಿದರೆ 10-17ರ ವಯೋಮಾನದ ಮಕ್ಕಳಲ್ಲಿ ಹೆಚ್ಚಿನ ಸೆರೋಪಾಸಿಟಿವಿಟಿ ಕಂಡುಬರಲು ಅವರು ಹೆಚ್ಚಾಗಿ ಹೊರಗೆ ಸಂಚರಿಸುವ ಸಾಧ್ಯತೆ ಅಧಿಕವಾಗಿರುವುದು ಮತ್ತು ಚಿಕ್ಕ ಮಕ್ಕಳಿಗಿಂತ ಹೆಚ್ಚು ಸ್ವತಂತ್ರವಾಗಿರುವುದೇ ಕಾರಣವಾಗಿರಬಹುದು ಎಂದು ವರದಿ ಹೇಳಿದೆ