ಹೈದ್ರಾಬಾದ್ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಕೋರ್ಬಿವ್ಯಾಕ್ಸ್‌’ ‘ಕೋರ್ಬಿವ್ಯಾಕ್ಸ್‌’ ಶೇ.90ರಷ್ಟು ಪರಿಣಾಮಕಾರಿ ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಭರವಸೆ 

ನವದೆಹಲಿ (ಜೂ.18): ಹೈದ್ರಾಬಾದ್ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಕೋರ್ಬಿವ್ಯಾಕ್ಸ್‌’ ಶೇ.90ರಷ್ಟು ಪರಿಣಾಮಕಾರಿಯಾಗಿರುವ ನಿರೀಕ್ಷೆ ಇದ್ದು, ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಭರವಸೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಮಹಿತಿ ನೀಡಿರುವ ಕೋವಿಡ್‌ ಕುರಿತ ಕೇಂದ್ರ ಸರ್ಕಾರದ ಕಾರ್ಯಪಡೆ ಅಧ್ಯಕ್ಷ ಎನ್‌.ಕೆ.ಅರೋರಾ, ‘ಅಮೆರಿಕದ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಎಂದು ಇತ್ತೀಚೆಗೆ ಸಾಬೀತಾಗಿದೆ. ಕೋರ್ಬಿವ್ಯಾಕ್ಸ್‌ ಕೂಡಾ ಅದೇ ರೀತಿಯಲ್ಲಿ ಅಭಿವೃದ್ಧಿಗೊಂಡ ಲಸಿಕೆಯಾಗಿದ್ದು, ಶೀಘ್ರವೇ 3ನೇ ಹಂತದ ಪ್ರಯೋಗಕ್ಕೆ ಒಳಪಡಲಿದೆ. 

ಕೇವಲ 250 ರು.ಗೆ ಕೋರ್ಬಿವ್ಯಾಕ್ಸ್‌: ದೇಶದ ಅತೀ ಅಗ್ಗದ ಲಸಿಕೆ ಹೆಗ್ಗಳಿಕೆ ಸಾಧ್ಯತೆ!

ಇದು ಕೂಡಾ ಶೇ.90ರಷ್ಟುಪರಿಣಾಮಕಾರಿಯಾಗುವ ಭರವಸೆ ಇದೆ. ಜೊತೆಗೆ ಇದು ಎಲ್ಲಾ ವಯೋವರ್ಗದವರ ಮೇಲೂ ಉತ್ತಮ ಪರಿಣಾಮ ಹೊಂದಿರಲಿದೆ. ಜೊತೆಗೆ ಕೋರ್ಬಿವ್ಯಾಕ್ಸ್‌ನ 2 ಡೋಸ್‌ ಅನ್ನು 250 ರು.ಗಳಿಗಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇದು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದ ಪಾಲಿಗೆ ಭಾರೀ ಭರವಸೆದಾಯಕವಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದಿದ್ದಾರೆ.